For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಬಂದ ಮೂರೇ ವರ್ಷದಲ್ಲಿ 15ಕ್ಕೂ ಹೆಚ್ಚು ಸಿನಿಮಾ ಮಾಡಿದ ಧರ್ಮಣ್ಣ

  |

  ಸದ್ಯ ಕನ್ನಡದಲ್ಲಿ ಬೇಡಿಕೆಯ ಹಾಸ್ಯನಟರಾಗಿರುವವರು ಧರ್ಮಣ್ಣ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಹೂ ಮಾರುವ ಸಣ್ಣ ಕುಟುಂಬದಿಂದ ಬಂದ ಈ ಹುಡುಗ ಈಗ ಸ್ಯಾಂಡಲ್ ವುಡ್ ಕಾಮಿಡಿ ಸ್ಟಾರ್ ಆಗಿದ್ದಾರೆ.

  ಧರ್ಮಣ್ಣ ಇಂದು (ಫೆಬ್ರವರಿ 8) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ತಮ್ಮ ಹುಟ್ಟೂರಿನಲ್ಲಿ ಕುಟುಂಬ ಹಾಗೂ ಊರಿನವರ ಜೊತೆಗೆ ಸಂಭ್ರಮದ ದಿನ ಕಳೆದಿದ್ದಾರೆ. ತಮ್ಮ ಮಗ ಓದುವ ಶಾಲೆಯ ಕಾರ್ಯಕ್ರಮಕ್ಕೆ ತಾವೇ ಮುಖ್ಯ ಅತಿಥಿಯಾಗಿ ಹೋಗುತ್ತಿರುವುದು ಧರ್ಮಣ್ಣಗೆ ಮತ್ತಷ್ಟು ಸಂತೋಷ ತಂದಿದೆ.

  ಆಗ ದೊಡ್ಡಣ್ಣ.. ನಂತರ ಚಿಕ್ಕಣ್ಣ.. ಮುಂದೆ ಧರ್ಮಣ್ಣ..ಆಗ ದೊಡ್ಡಣ್ಣ.. ನಂತರ ಚಿಕ್ಕಣ್ಣ.. ಮುಂದೆ ಧರ್ಮಣ್ಣ..

  'ರಾಮಾ ರಾಮಾ ರೇ' ಸಿನಿಮಾದ ಹಾಸ್ಯ ಪಾತ್ರದ ಮೂಲಕ ಧರ್ಮಣ್ಣ 2016 ಅಕ್ಟೋಬರ್ ನಲ್ಲಿ ಚಿತ್ರರಂಗಕ್ಕೆ ಬಂದರು. ಅಲ್ಲಿಂದ ಶುರುವಾದ ಧರ್ಮಣ್ಣ ಜರ್ನಿ ಜೋರಾಗಿ ಸಾಗಿದೆ. ಕನ್ನಡ ಚಿತ್ರರಂಗದಲ್ಲಿ ಒಂದೊಂದೆ ಹೆಜ್ಜೆ ಮುಂದೆ ಇಡುತ್ತಿದ್ದಾರೆ.

  ಚಿತ್ರರಂಗದಲ್ಲಿ ಮೂರುವರೆ ವರ್ಷ ಕಳೆದಿರುವ ಧರ್ಮಣ್ಣ 15ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ರಾಮಾ ರಾಮಾ ರೇ, ಮುಗುಳು ನಗೆ, ಲಂಬೋದರ, ಕನ್ನಡ್ ಗೊತ್ತಿಲ್ಲ, ಸ್ಟೈಕರ್, ಅಳಿದು ಉಳಿದವರು, ಕಾಣದಂತೆ ಮಾಯವಾದನು ಧರ್ಮಣ್ಣ ನಟಿಸಿದ ಪ್ರಮುಖ ಸಿನಿಮಾಗಳಾಗಿವೆ.

  ''ಶಿವಣ್ಣ ನಮ್ಮ ಅಣ್ಣ'' ಹೀಗೆ ಹೇಳಿದ್ರು ಧರ್ಮಣ್ಣ''ಶಿವಣ್ಣ ನಮ್ಮ ಅಣ್ಣ'' ಹೀಗೆ ಹೇಳಿದ್ರು ಧರ್ಮಣ್ಣ

  ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್' ನಲ್ಲಿಯೂ ಧರ್ಮಣ್ಣ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಷ್ಟು ದೊಡ್ಡ ಚಿತ್ರದಲ್ಲಿ ಅವರಿಗೆ ಅವಕಾಶ ಸಿಕ್ಕಿದ್ದು, ಈ ಸಿನಿಮಾದೊಂದಿಗೆ ಮೂರ್ನಾಲ್ಕು ಸಿನಿಮಾಗಳು ಅವರ ಕೈನಲ್ಲಿ ಇವೆ.

  'ಕಾಣದಂತೆ ಮಾಯವಾದನು' ಸಿನಿಮಾದ ಧರ್ಮಣ್ಣ ಪಾತ್ರದ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾದ ನಂತರ ಇನ್ನು ಹೆಚ್ಚು ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿದೆಯಂತೆ.

  English summary
  Kannada comedy actor Dharmanna Kadur celebrating his 35th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X