Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
30 ದಿನದಲ್ಲಿ ಹೇಗಿದ್ದ ಧ್ರುವ ಹೇಗಾದ್ರು ನೋಡಿ: 'ಎಚ್ಚರ.. ಆರೋಗ್ಯ ಜೋಪಾನ' ಎಂದ ಫ್ಯಾನ್ಸ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಒಂದೇ ತಿಂಗಳಲ್ಲಿ 18 ಕೆಜಿ ತೂಕ ಇಳಿಸಿ ಅಚ್ಚರಿ ಮೂಡಿಸಿದ್ದಾರೆ. ಸದ್ಯ ಜೋಗಿ ಪ್ರೇಮ್ ನಿರ್ದೇಶನದ 'KD' (ಕೆಡಿ) ಚಿತ್ರದಲ್ಲಿ ಧ್ರುವ ನಟಿಸ್ತಿದ್ದಾರೆ. ಪಾತ್ರಕ್ಕಾಗಿ ಈ ರೀತಿ ತೂಕ ಇಳಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.
ಪಾತ್ರಕ್ಕಾಗಿ ಧ್ರುವ ಸರ್ಜಾ ಡೆಡಿಕೇಷನ್ ಹೇಗಿರುತ್ತೆ ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. ಒಂದು ಸಿನಿಮಾ ಮುಗಿಯೋವರೆಗೂ ಮತ್ತೊಂದು ಸಿನಿಮಾ ಒಪ್ಪಿಕೊಳ್ಳದ ಧ್ರುವ ಪಾತ್ರಕ್ಕಾಗಿ ತೂಕ ಹೆಚ್ಚಿಸುವುದು, ಇಳಿಸುವುದು, ಬಾಡಿ ಬಿಲ್ಡ್ ಮಾಡುವುದನ್ನು ಮಾಡುತ್ತಲೇ ಇರುತ್ತಾರೆ. ಈ ಹಿಂದೆ 'ಪೊಗರು' ಚಿತ್ರದ ಶಿವನ ಪಾತ್ರಕ್ಕೂ ಇಂತದ್ದೇ ಸಾಹಸ ಮಾಡಿದ್ದರು. ಇದೀಗ ಇದೀಗ 'KD' ಚಿತ್ರಕ್ಕಾಗಿ 18 ಕೆಜಿ ತೂಕ ಇಳಿಸಿಕೊಂಡು ಸಿಕ್ಕಾಪಟ್ಟೆ ಸ್ಲಿಮ್ ಆಗಿ ದರ್ಶನ ಕೊಟ್ಟಿದ್ದಾರೆ. ಹಿಂದೆ ತಾವು ದಪ್ಪಗೆ ಇದ್ದ ಫೋಟೊ ಹಾಗೂ ಈಗ ಸಣ್ಣಗಾಗಿರುವ ಫೋಟೊವನ್ನು ಕೊಲಾಜ್ ಮಾಡಿ ಹಂಚಿಕೊಂಡಿದ್ದಾರೆ.
30
ಕೋಟಿ
ವೀವ್ಸ್
ಸಾಧಿಸಿ
ಹೊಸ
ದಾಖಲೆ
ಬರೆದ
'ಖರಾಬು'
ಸಾಂಗ್
"30 ದಿನಗಳಲ್ಲಿ 18 ಕೆಜಿ ಇಳಿಸಿಕೊಂಡಿದ್ದೇನೆ. 'KD' ಶೂಟಿಂಗ್‌ಗೆ ಎಲ್ಲಾ ಸಿದ್ಧವಾಗಿದೆ. ನಿಮ್ಮೆಲ್ಲರ ಆಶಿರ್ವಾದ, ಪ್ರೀತಿ 'KD' ಸಿನಿಮಾ ಮೇಲಿರಲಿ ಜೈ ಹನುಮಾನ್" ಎಂದು ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ.
|
ಧ್ರುವ ಡೆಡಿಕೇಶನ್‌ಗೆ ಸೂಪರ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಡೆಡಿಕೇಷನ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 30 ದಿನದಲ್ಲಿ 18 ಕೆಜಿ ಇಳಿಸಲು ಸಾಧ್ಯಾನಾ? ಸೂಪರ್. ಡೆಡಿಕೇಷನ್ ವಿಚಾರದಲ್ಲಿ ನಿಮ್ಮನ್ನು ಬಿಟ್ಟರೆ ಯಾರು ಇಲ್ಲ. ಪಾತ್ರಕ್ಕಾಗಿ ಇಷ್ಟೆಲ್ಲಾ ರಿಸ್ಕ್ ತೆಗೆದುಕೊಳ್ಳುತ್ತೀರಾ, ನೀವು ಗ್ರೇಟ್. 'KD' ಚಿತ್ರಕ್ಕೆ ಶುಭವಾಗಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಆರೋಗ್ಯದ ಬಗ್ಗೆ ಕಾಳಜಿ ಇರಲಿ
ಧ್ರುವ ಸರ್ಜಾ ಹೀಗೆ ಪದೇ ಪದೇ ದೇಹದ ತೂಕ ಹೆಚ್ಚಿಸಿಕೊಳ್ಳುವುದು, ಇಳಿಸುವುದು ಕೆಲವರಿಗೆ ಆತಂಕ ತಂದಿದೆ. ಈ ರೀತಿ ಪದೇ ಪದೇ ಮಾಡಬೇಡಿ. ದೇಹದ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ. ಪಾತ್ರಕ್ಕಾಗಿ ಇಷ್ಟೆಲ್ಲಾ ರಿಸ್ಕ್ ಬೇಡ. ಇದು ಅಪಾಯಕಾರಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ ಎಂದು ಕೆಲ ಅಭಿಮಾನಿಗಳು ಹೇಳುತ್ತಿದ್ದಾರೆ. 30 ದಿನದಲ್ಲಿ 18 ಕೆಜಿ ಇಳಿಸುವುದು ಅಂದರೆ ನಿಜಕ್ಕೂ ತಮಾಷೆ ಮಾತಲ್ಲ. ಇದಕ್ಕಾಗಿ ದೇಹದ ಮೇಲೆ ಹೆಚ್ಚಿನ ಒತ್ತಡ ಹಾಕಬೇಕಾಗುತ್ತದೆ. ಅಷ್ಟೊಂದು ಆತುರ ಬೇಡ, ನೀವು ಹೆಚ್ಚು ಕಸರತ್ತು ಕೂಡ ಮಾಡುತ್ತೀರಾ, ಅದು ಕೂಡ ಒಳ್ಳೆಯದಲ್ಲ ಎಂದು ಕೆಲ ಅಭಿಮಾನಿಗಳು ಕಿವಿಮಾತು ಹೇಳುತ್ತಿದ್ದಾರೆ.

'ಪೊಗರು'ಗಾಗಿ ತೂಕ ಇಳಿಕೆ
ನಂದ ಕಿಶೋರ್ ನಿರ್ದೇಶನದ 'ಪೊಗರು' ಚಿತ್ರಕ್ಕಾಗಿ ಧ್ರುವ ಸರ್ಜಾ ಮೂರ್ನಾಲ್ಕು ವರ್ಷ ವ್ಯಯಿಸಿದ್ದರು. ದೇಹದ ತೂಕ ಹೆಚ್ಚಿಸಿಕೊಂಡು ಉದ್ದನೆಯ ಕೂದಲು ಬಿಟ್ಟು ರಗಡ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದರು. ಅಷ್ಟೇ ಆಗಿದ್ದರೆ ಪರವಾಗಿಲ್ಲ, ಮೊದಲು ದೇಹ ದಂಡಿಸಿ ಮದಗಜದಂತೆ ಬಾಡಿ ಬಿಲ್ಡ್ ಮಾಡಿದ್ದ ಧ್ರುವ, ನಂತರ ಸಣ್ಣ ಎಪಿಸೋಡ್‌ಗಾಗಿ 30 ಕೆಜಿ ತೂಕ ಇಳಿಸಿಕೊಂಡಿದ್ದರು. ಚಿತ್ರದಲ್ಲಿ ನಾಯಕ ಟೀನೇಜ್ ಎಪಿಸೋಡ್ ತೋರಿಸಲು ಇಂತಹದೊಂದು ಪ್ರಯತ್ನ ಮಾಡಲಾಗಿತ್ತು. ಧ್ರುವ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ಪ್ರೇಮ್ ಸಾರಥ್ಯದಲ್ಲಿ 'KD' ಹವಾ
ಜೋಗಿ ಪ್ರೇಮ್ ನಿರ್ದೇಶನದ 'KD' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರದಲ್ಲಿ ಕಾಳಿದಾಸ ಎನ್ನುವ ಪಾತ್ರದಲ್ಲಿ ಧ್ರುವ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ರಗಡ್ ಲುಕ್‌ನಲ್ಲಿ ಆಕ್ಷನ್ ಪ್ರಿನ್ಸ್ ಖದರ್ ನೋಡಿ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಚಿತ್ರದಲ್ಲಿ 60, 70ರ ದಶಕದ ಕಥೆಯನ್ನು ಹೇಳಲಾಗುತ್ತಿದೆ. ಸದ್ಯ 'ಮಾರ್ಟಿನ್' ಸಿನಿಮಾ ಶೂಟಿಂಗ್ ಮುಗಿಸಿ ಧ್ರುವ ಸರ್ಜಾ 'KD' ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.