»   » ಹೊಸ ಚಾಲೆಂಜ್ ಸ್ವೀಕರಿಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಹೊಸ ಚಾಲೆಂಜ್ ಸ್ವೀಕರಿಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Posted By:
Subscribe to Filmibeat Kannada
ಹೊಸ ಚಾಲೆಂಜ್ ಸ್ವೀಕರಿಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ | Filmibeat Kannada

ಕನ್ನಡ ಸಿನಿಮಾರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಚಾಲೆಂಜ್ ಸ್ವೀಕರಿಸಿದ್ದಾರೆ. 'ಭರ್ಜರಿ' ಸಿನಿಮಾ ಹಿಟ್ ಆಗಿದ ನಂತರ ಧ್ರುವ ಯಾವ ಸಿನಿಮಾ ಫೈನಲ್ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಂದಕಿಶೋರ್ ನಿರ್ದೇಶನದ 'ಪೊಗರು' ಸಿನಿಮಾಕ್ಕೆ ಧ್ರುವ ಗ್ರೀನ್ ಸಿಗ್ನಲ್ ನೀಡಿದ್ದಾರೆ. 'ಪೊಗರು' ಸಿನಿಮಾದ ಪಾತ್ರಕ್ಕಾಗಿ ತಯಾರಿ ಮಾಡಿಕೊಳುತ್ತಿರುವ ಧ್ರುವ ಹೊಸ ಚಾಲೆಂಜ್ ಸ್ವೀಕರಿಸಿದ್ದಾರೆ. ಈ ಚಾಲೆಂಜ್ ಬಗ್ಗೆ ಕೇಳಿರುವ ಗಾಂಧಿನಗರದ ನಿರ್ಮಾಪಕರು ಆಶ್ಚರ್ಯ ಪಟ್ಟಿದ್ದಾರೆ.

ಧ್ರುವ ಕೆಲಸದ ವಿಚಾರದಲ್ಲಿ ತುಂಬಾ ಶ್ರದ್ಧೆ ಇರುವ ನಾಯಕ. ಪಾತ್ರಕ್ಕಾಗಿ ಯಾವುದೇ ತಯಾರಿ ಮಾಡಿಕೊಳ್ಳುವುದಕ್ಕೆ ಅವರು ರೆಡಿಯಾಗಿರುತ್ತಾರೆ ಎನ್ನುವುದು ಈ ಹಿಂದಿನ ಮೂರು ಸಿನಿಮಾಗಳಲ್ಲಿ ಪ್ರೂವ್ ಮಾಡಿದ್ದಾರೆ. ಸದ್ಯ ಚಿತ್ರೀಕರಣಕ್ಕೆ ಸಜ್ಜಾಗುತ್ತಿರುವ 'ಪೊಗರು' ಸಿನಿಮಾ ನಿರ್ದೇಶಕ ಕೊಟ್ಟಿರುವ ಹೊಸ ಚಾಲೆಂಜ್ ಸ್ವೀಕರಿಸಿರುವ ಧ್ರುವ ಯಾರಿಗೂ ಕಾಣಿಸಿಕೊಳ್ಳದೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರಂತೆ. ಹಾಗಾದರೆ, ಆ ಚಾಲೆಂಜ್ ಏನು? ಎನ್ನುವ ಸಂಗತಿ ಮುಂದೆ ಓದಿ...

ತೂಕ ಇಳಿಸಲಿರುವ 'ಭರ್ಜರಿ ಹೀರೋ'

ನಟ ಧ್ರುವ ಸರ್ಜಾ ತಮ್ಮ ನಾಲ್ಕನೇ ಸಿನಿಮಾ 'ಪೊಗರು' ಚಿತ್ರದ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾಗಾಗಿ 30 ಕೆಜಿ ತೂಕ ಇಳಿಸಿಕೊಳ್ಳಲು ನಿರ್ದೇಶಕರು ಸೂಚಿಸಿದ್ದಾರಂತೆ. ಅದಕ್ಕಾಗಿ ಧ್ರುವ ಸರ್ಜಾ ವರ್ಕ್ ಔಟ್ ಶುರು ಮಾಡಿದ್ದಾರೆ.

12 ವರ್ಷದ ಬಾಲಕನ ಪಾತ್ರದಲ್ಲಿ ಧ್ರುವ

'ಪೊಗರು' ಸಿನಿಮಾದ ಫಸ್ಟ್ ಆಫ್ ನಲ್ಲಿ ಧ್ರುವ 8ನೇ ತರಗತಿ ಬಾಲಕನಾಗಿ ಅಭಿನಯಿಸಲಿದ್ದಾರೆ. 12 ವರ್ಷದ ಬಾಲಕನಂತೆ ಧ್ರುವ ಲುಕ್ ಬದಲಾಯಿಸಲು ನಿರ್ದೇಶಕ ನಂದಕಿಶೋರ್ ಮುಂದಾಗಿದ್ದಾರೆ.

26 ಕೆಜಿ ಸಣ್ಣಗಾದ ಹೀರೋ

ಧ್ರುವ ಸರ್ಜಾ ನಿರ್ದೇಶಕರ ನಟ ಅನ್ನೋದು ಗಾಂಧಿನಗರದ ಮಾತು. ಆಯಾ ಪಾತ್ರಕ್ಕೆ ತಕ್ಕಂತೆ ತನ್ನನ್ನು ಬದಲಾವಣೆ ಮಾಡಿಕೊಳ್ಳುವ ನಟ ಅವರು. ಡೈರೆಕ್ಷರ್ ನಂದಕಿಶೋರ್ 'ಪೊಗರು' ಚಿತ್ರಕ್ಕಾಗಿ '30 ಕೆಜಿ' ತೂಕ ಇಳಿಸಿಕೊಳ್ಳಬೇಕು ಎಂದ ತಕ್ಷಣ ಯಾವುದೇ ವಿರೋಧವಿಲ್ಲದೆ ಒಪ್ಪಿಗೆ ಸೂಚಿಸಿದ್ದಾರೆ. ಈಗಾಗಲೇ '26 ಕೆಜಿ' ತೂಕವನ್ನು ಇಳಿಸಿಕೊಂಡಿದ್ದಾರೆ 'ಭರ್ಜರಿ' ಹೀರೋ.

ಸಣ್ಣಗಾದ ತಕ್ಷಣ ಚಿತ್ರೀಕರಣ

ಸದ್ಯ 26 ಕೆಜಿ ಸಣ್ಣ ಆಗಿರುವ ಧ್ರುವ ಸರ್ಜಾ ಇನ್ನು ಕೆಲವೇ ದಿನಗಳಲ್ಲಿ ನಾಲ್ಕು ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ. ಸಣ್ಣಗಾದ ನಂತರ ಹೊಸ ಲುಕ್ ಟೆಸ್ಟ್ ಮಾಡಿ ಚಿತ್ರೀಕರಣ ಪ್ರಾರಂಭ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ನಿರ್ದೇಶಕ ನಂದ ಕಿಶೋರ್.

English summary
kannada actor dhruva sarja preparation for pogaru movie, kannada actor Druva sarja lost his weight for movie, kannada movie director nandakishor pogaru movie, kannada actor druva sarja lost 26 kg weight for his next movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada