Don't Miss!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶ್ರುತಿ ಹರಿಹರನ್ ಗೆ ಓಪನ್ ಚಾಲೆಂಜ್ ಹಾಕಿದ ಧ್ರುವ ಸರ್ಜಾ!
ನಟಿ ಶ್ರುತಿ ಹರಿಹರನ್ ಮಾಡಿರುವ ಮೀ ಟೂ ಆರೋಪ ದೊಡ್ಡ ಚರ್ಚೆ ಆಗುತ್ತದೆ. ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ನೀಡಿರುವ ಹೇಳಿಕೆಗೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಸರ್ಜಾ ಕುಟುಂಬದ ಸಹ ಈ ಘಟನೆ ಬಗ್ಗೆ ಮಾತನಾಡುತ್ತಿದೆ. ಈಗಾಗಲೇ ಅರ್ಜುನ್ ಸರ್ಜಾ ಅವರ ಮಾವ ನಟ ರಾಜೇಶ್ ಪ್ರತಿಕ್ರಿಯೆ ನೀಡಿದ್ದರು. ಇದೀಗ ನಟ ಧ್ರುವ ಸರ್ಜಾ ಸಹ ತಮ್ಮ ಮಾವನ ಮೇಲೆ ಬಂದಿರುವ ಆರೋಪದ ಬಗ್ಗೆ ಮಾತನಾಡಿದ್ದಾರೆ.
ಶ್ರುತಿ ಹರಿಹರನ್ ಗೆ ಓಪನ್ ಚಾಲೆಂಜ್ ಹಾಕಿರುವ ಧ್ರುವ ಸರ್ಜಾ, ''ಸಾಕ್ಷಿ ಇದೆ ಎಂದು ಹೇಳಿದ್ದಾರೆ, ಅವರ ಬಳಿ ಏನಾದರೂ ಸಾಕ್ಷಿ ಇದ್ದರೆ ತೋರಿಸಲಿ. ಪಬ್ಲಿಸಿಟಿ ತೆಗೆದುಕೊಂಡಿದ್ದು ಸಾಕು.'' ಎಂದು ಹೇಳಿದ್ದಾರೆ. ಅಂದಹಾಗೆ, ಈ ವಿವಾದದ ಬಗ್ಗೆ ಧ್ರುವ ಸರ್ಜಾ ಆಡಿರುವ ಸಂಪೂರ್ಣ ಮಾತುಗಳು ಮುಂದಿದೆ ಓದಿ...

ಅಂಕಲ್ ಬಗ್ಗೆ ತುಂಬ ಚೆನ್ನಾಗಿ ಗೊತ್ತಿದೆ
''ಮೀಟೂ ಒಂದು ಒಳ್ಳೆಯ ವೇದಿಕೆ. ಅಲ್ಲಿ ಬಂದು ಎಲ್ಲರೂ ಹೇಳುವುದು ಒಳ್ಳೆಯದು. ಆದರೆ, ಅಲ್ಲಿ ಎಷ್ಟೊ ಪಾಸಿಟಿವ್ ಇದೆಯೋ ಅಷ್ಟೇ ನೆಗೆಟಿವ್ ಇದೆ. ನಾನು ಚಿಕ್ಕ ವಯಸ್ಸಿನಿಂದ ನಮ್ಮ ಅಂಕಲ್ ಅನ್ನು ನೋಡಿಕೊಂಡು ಬಂದಿದ್ದೇನೆ. ಅವರು ಏನು ಅಂತ ನನಗೆ ತುಂಬ ಚೆನ್ನಾಗಿ ಗೊತ್ತಿದೆ.'' - ಧ್ರುವ ಸರ್ಜಾ, ನಟ
ಶ್ರುತಿ
ಹರಿಹರನ್
ವಿರುದ್ಧ
ಸಿಡಿದೆದ್ದ
'ಕುರುಕ್ಷೇತ್ರ'
ನಿರ್ಮಾಪಕ
ಮುನಿರತ್ನ

ನಾಯಿ ನರಿ ಕ್ರಿಮಿ ಕೀಟ ಹೇಳಿದ್ದನ್ನು ಕೇಳುವುದಿಲ್ಲ
''ಯಾವುದೋ ನಾಯಿ ನರಿ ಕ್ರಿಮಿ ಕೀಟಗಳು ಹೇಳಿದ್ದನ್ನು ನಾನು ಕೇಳುವುದಿಲ್ಲ. ಅವರಿಗೆ ಹೇಳಬೇಕು ಅಂತ ಅನಿಸಿದರೆ, ಅವತ್ತೇ ಹೇಳಬಹುದಿತ್ತು. ನಮ್ಮ ಮನೆ ದೇವರ ಬಗ್ಗೆ ನನಗೆ ಗೊತ್ತಿದೆ. ಸಾಕ್ಷಿ ಇದೇ ಎಂದರಲ್ಲ, ಇದ್ದರೆ ತೊರಿಸಲಿ.'' - ಧ್ರುವ ಸರ್ಜಾ, ನಟ
'ರೆಸಾರ್ಟ್
ಗೆ
ಹೋಗೋಣ
ಬಾ'
ಎಂದು
ಕರೆದರು
:
ಸರ್ಜಾ
ಮೇಲೆ
ಶ್ರುತಿ
ಬಾಂಬ್!

ಆ ಯಮ್ಮನ ಹೆಸರು ಸಹ ಗೊತ್ತಿರಲಿಲ್ಲ
''ನನಗೆ ಆ ಯಮ್ಮನ ಹೆಸರು ಸಹ ಗೊತ್ತಿರಲಿಲ್ಲ. ಅವರು ಯಾರು ಅಂತ್ತಾನೆ ತಿಳಿದಿರಲಿಲ್ಲ. ಬಿಟ್ಟಿ ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ನಾವು ಎಲ್ಲ ಹೆಣ್ಣು ಮಕ್ಕಳಿಗೆ ಮರ್ಯಾದೆ ನೀಡುತ್ತೇವೆ. ಹೆಣ್ಣು ಮಕ್ಕಳಿಗೆ ಗೌರವ ನೀಡಬೇಕು ಎಂದು ನಮ್ಮ ಮನೆಯಲ್ಲಿ ಹೇಳಿಕೊಟ್ಟಿದ್ದಾರೆ.'' - ಧ್ರುವ ಸರ್ಜಾ, ನಟ
'ನಾಚಿಕೆ
ಆಗಬೇಕು'
:
ಶ್ರುತಿ
ವಿರುದ್ಧ
ಅರ್ಜುನ್
ಸರ್ಜಾ
ಕೆಂಡಾಮಂಡಲ!

ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ಆಟ ಆಡಲು ಬರುವುದಿಲ್ಲ
''ಸುಮ್ಮನೆ ಸುಳ್ಳು ಸುಳ್ಳು ಹೇಳುವುದು ತಪ್ಪು. ಹುಡುಗಿ ಆಗಿರುವುದರಿಂದ ತಡೆದುಕೊಂಡು ಮಾತನಾಡುತ್ತಿದ್ದೇನೆ. ಇವರ ಹಿಂದೆ ಗ್ಯಾಂಗ್ ಇದ್ದು, ಯಾವನಾದರೂ ಇದ್ದರೆ ನನ್ನ ನಂಬರ್ ಕೊಡಿ. ಆ ಮನುಷ್ಯನ ಜೊತೆಗೆ ನಾನು ಒಬ್ಬನೇ ಕೈ ಮಿಲಾಹಿಸುತ್ತೇನೆ. ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ಈ ರೀತಿ ಆಟ ಆಡುವುದು ನನಗೆ ಬರುವುದಿಲ್ಲ.'' - ಧ್ರುವ ಸರ್ಜಾ, ನಟ

ಫ್ಯಾಮಿಲಿ ವಿಷಯ ಬಂದಾಗ
''ಮೀ ಟೂ ಗೆ ನಾನು ಗೌರವ ನೀಡುತ್ತೇನೆ. ಆದರೆ, ಇಲ್ಲದೆ ಇರುವುದನ್ನು ಹೇಳಿದರೆ ಆಗುವುದಿಲ್ಲ. ಆಯಮ್ಮ ಯಾರು ಅಂತ ನನಗೆ ಗೊತ್ತಿಲ್ಲ. ಇದು ದುರಹಂಕಾರ ಎನಿಸಬಹುದು ಆದರೆ ನಮ್ಮ ಫ್ಯಾಮಿಲಿ ವಿಷಯ ಬಂದಾಗ ನಾನು ಹೀಗೆಯೇ ರಿಯಕ್ಟ್ ಮಾಡುತ್ತೇನೆ.'' - ಧ್ರುವ ಸರ್ಜಾ, ನಟ

ಪಬ್ಲಿಸಿಟಿ ತೆಗೆದುಕೊಂಡಿದ್ದು ಸಾಕು
''ಪಬ್ಲಿಸಿಟಿ ತೆಗೆದುಕೊಂಡಿದ್ದು ಸಾಕು. ಮುಂದೆ ಬನ್ನಿ ಮಾತಾಡಿ. ಅವರ ವಯಸ್ಸಿನ ಮಗಳ ಅವರಿಗೆ ಇದ್ದಾರೆ. ಸುಮ್ಮನೆ ಮಾತನಾಡುವುದು ಸುಲಭ. ಯಾರೋ ಬಂದು ಏನೋ ಹೇಳಿದರೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ.'' - ಧ್ರುವ ಸರ್ಜಾ, ನಟ