For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ ಪತ್ನಿ ಪ್ರೇರಣಾ ಸರ್ಜಾ ಅದ್ಧೂರಿ ಸೀಮಂತ ಶಾಸ್ತ್ರದ ಫೋಟೊಗಳು ವೈರಲ್

  |

  ಸರ್ಜಾ ಕುಟುಂಬ ಮತ್ತೊಬ್ಬ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದೆ. ಇತ್ತೀಚೆಗಷ್ಟೆ ಪತ್ನಿ ಪ್ರೇರಣಾರವರ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿ ಧ್ರುವ ಸರ್ಜಾ ಶೀಘ್ರದಲ್ಲೇ ತಂದೆಯಾಗುತ್ತಿರುವ ಸಿಹಿಸುದ್ದಿ ನೀಡಿದ್ದರು. ನಿನ್ನೆ(ಸೆಪ್ಟೆಂಬರ್ 7) ಖಾಸಗಿ ಹೋಟೆಲ್‌ನಲ್ಲಿ ಪ್ರೇರಣಾ ಸೀಮಂತ ಕಾರ್ಯ ನಡೆದಿದೆ. ಅರ್ಜುನ್ ಸರ್ಜಾ ಸೇರಿದಂತೆ ಕುಟುಂಬದ ಆಪ್ತರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

  ಎ. ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಚಿತ್ರದಲ್ಲಿ ಧ್ರುವ ಸರ್ಜಾ ಬ್ಯುಸಿ ಆಗಿದ್ದಾರೆ. ಆದರೂ ಬಿಡುವು ಮಾಡಿಕೊಂಡು ಮಡದಿಗೆ ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ. ಪ್ರೇರಣಾ ಆಸೆಯಂತೆ ಬಹಳ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಚಿರಂಜೀವಿ ಸರ್ಜಾ ನಿಧನದ ನಂತರ ಮೇಘನಾ ರಾಜ್, ಪುತ್ರ ರಾಯನ್‌ ಸರ್ಜಾಗೆ ಜನ್ಮ ನೀಡಿದ್ದರು. ಇನ್ನು ಇತ್ತೀಚೆಗಷ್ಟೇ ಧ್ರುವ ಸರ್ಜಾ ಅಜ್ಜಿ ಲಕ್ಷ್ಮಿ ದೇವಮ್ಮ ಕೊನೆಯುಸಿರೆಳೆದಿದ್ದರು. ಈಗ ಮತ್ತೊಬ್ಬ ಅತಿಥಿ ಸರ್ಜಾ ಕುಟುಂಬಕ್ಕೆ ಬರುತ್ತಿರುವುದು ಕುಟುಂಬ ಸದಸ್ಯರಲ್ಲಿ ಸಂತಸ ತಂದಿದೆ.

  Dhruva Sarja Wife Prerana Seemantha Function Photos

  <strong>ಸರ್ಜಾ ಕುಟುಂಬಕ್ಕೆ ಬರಲಿರುವ ಹೊಸ ಸದಸ್ಯ: ಸಂತಸದ ವಿಷಯ ಹಂಚಿಕೊಂಡ ಧ್ರುವ ಸರ್ಜಾ</strong>ಸರ್ಜಾ ಕುಟುಂಬಕ್ಕೆ ಬರಲಿರುವ ಹೊಸ ಸದಸ್ಯ: ಸಂತಸದ ವಿಷಯ ಹಂಚಿಕೊಂಡ ಧ್ರುವ ಸರ್ಜಾ

  8 ತಿಂಗಳು ಪೂರೈಸಿ ಪ್ರೇರಣಾಗೆ 9 ತಿಂಗಳಾಗಿದೆ. ಇದೇ ಸಮಯದಲ್ಲಿ ಸೀಮಂತಾ ಕಾರ್ಯ ನೆರವೇರಿಸಲಾಗಿದ್ದು ಇದೇ ತಿಂಗಳು ಧ್ರುವ ಸರ್ಜಾ ಮಗ ಅಥವಾ ಮಗಳ ನಿರೀಕ್ಷೆಯಲ್ಲಿ ಇದ್ದಾರೆ. ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬದ ಜೊತೆಗೆ ಪ್ರೇರಣಾ ಕುಟುಂಬವೂ ಭಾಗಿಯಾಗಿದ್ದು ಬಹಳ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ನೆರವೇರಿದೆ. ಇದಕ್ಕೆ ಸಂಬಂಧಿಸಿದ ಕೆಲ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಸೇರಿದಂತೆ ಸರ್ಜಾ ಕುಟುಂಬಕ್ಕೆ ಆಪ್ತರಾಗಿರುವ ಚಿತ್ರರಂಗದ ಗಣ್ಯಾತಿ ಗಣ್ಯರು ಶುಭ ಕಾರ್ಯಕ್ಕೆ ಬಂದು ಪ್ರೇರಣಾಗೆ ಆಶೀರ್ವದಿಸಿದ್ದಾರೆ. 4 ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಧ್ರುವ ಸರ್ಜಾ 'ಮಾರ್ಟಿನ್' ಆಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ಮುಗಿಸಿ ಬಂದಿದೆ ಚಿತ್ರತಂಡ.

  <strong>4 ಕೋಟಿ ರೂ. ಚೇಸ್‌ ಸೀನ್ ಮಾಡ್ತಾ ಮಾಡ್ತಾ ಮಂಗಳೂರಿಗೆ ಮಾಸ್ 'ಮಾರ್ಟಿನ್'!</strong>4 ಕೋಟಿ ರೂ. ಚೇಸ್‌ ಸೀನ್ ಮಾಡ್ತಾ ಮಾಡ್ತಾ ಮಂಗಳೂರಿಗೆ ಮಾಸ್ 'ಮಾರ್ಟಿನ್'!

  ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 30ಕ್ಕೆ 'ಮಾರ್ಟಿನ್' ಸಿನಿಮಾ ರಿಲೀಸ್ ಅಗಬೇಕಿತ್ತು. ಬಹಳ ಅದ್ಧೂರಿ ಸಿನಿಮಾ ಆಗಿರುವುದರಿಂದ ಚಿತ್ರೀಕರಣ ತಡವಾಗ್ತಿದೆ. ಹಾಗಾಗಿ ರಿಲೀಸ್‌ ಡೇಟ್‌ ಪೋಸ್ಟ್‌ಪೋನ್ ಮಾಡಿತ್ತು ಚಿತ್ರತಂಡ.

  English summary
  Dhruva Sarja Wife Prerana Seemantha Function Photos. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X