twitter
    For Quick Alerts
    ALLOW NOTIFICATIONS  
    For Daily Alerts

    ರಿಮೇಕ್ ಓಕೆ? ಡಬ್ಬಿಂಗ್ ಯಾಕೆ?: ಗಿರೀಶ್ ಕಾರ್ನಾಡ್

    By Mahesh
    |

    ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಭ್ಯರ್ಥಿಗಳ ಪರ ಪೋಷಕ ಪಾತ್ರ ನಿರ್ವಹಿಸಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ಅವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ರುದ್ರತಾಂಡವ ಚಿತ್ರದ ಸುದ್ದಿಗೋಷ್ಠಿಯಲ್ಲಿ ರಿಮೇಕ್, ಡಬ್ಬಿಂಗ್ ಬಗ್ಗೆ ಮಾತನಾಡಿದ್ದಾರೆ.

    ನನಗೆ ರಿಮೇಕ್ ಚಿತ್ರಗಳಲ್ಲಿ ನಟಿಸಲು ಯಾವುದೇ ಮುಜುಗರವಿಲ್ಲ ಅದರೆ, ಡಬ್ಬಿಂಗ್ ನಮ್ಮ ಸಂಸ್ಕೃತಿಗೆ ಒಗ್ಗಿಕೊಳ್ಳುವುದಿಲ್ಲ, ನಾನು ನಟಿಸಿದ ಚಿತ್ರಗಳು ಡಬ್ಬಿಂಗ್ ಆಗುವುದನ್ನು ನಾನು ಬೆಂಬಲಿಸಲಾರೆ. ಇಷ್ಟಕ್ಕೂ ನಾನು ಚಿತ್ರದ ಕಥೆಗಿಂತ ನನಗೆ ಕೊಟ್ಟ ಪಾತ್ರಕ್ಕೆ ನಾನು ಎಷ್ಟರ ಮಟ್ಟಿಗೆ ಜೀವ ತುಂಬಬಲ್ಲೆ ಎಂಬುದನ್ನು ಮಾತ್ರ ಯೋಚಿಸುತ್ತೇನೆ. ಪಾತ್ರಕ್ಕೆ ನ್ಯಾಯ ಸಲ್ಲಿಸಲು ಯತ್ನಿಸುತ್ತೇನೆ ಎಂದು ಗಿರೀಶ್ ಕಾರ್ನಾಡ್ ಹೇಳಿದ್ದಾರೆ.

    ಭಾರತದಲ್ಲಿ ಸಾವಿರಾರು ಚಿತ್ರಗಳು ತೆರೆ ಕಾಣುತ್ತವೆ. ಸಾವಿರಾರು ಕಥೆಗಳನ್ನು ಹೆಕ್ಕಿ ತೆಗೆಯುವುದು ಕಷ್ಟದ ಕೆಲಸ. ಉತ್ತಮ ಚಿತ್ರಗಳನ್ನು ರಿಮೇಕ್ ಮಾಡುವುದರಲ್ಲಿ ತಪ್ಪೇನಿಲ್ಲ. ಇದನ್ನು ತಪ್ಪಿಸಲೂ ಸಾಧ್ಯವಿಲ್ಲ. ರಿಮೇಕ್ ಚಿತ್ರಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಡಬ್ಬಿಂಗ್ ಚಿತ್ರವನ್ನು ನಾನು ವಿರೋಧಿಸುತ್ತೇನೆ ಎಂದಿದ್ದಾರೆ.

    Actor-director Girish Karnad bats for Remake movies against dubbing

    ಕನ್ನಡ ಸಾಹಿತ್ಯ ಸಮೃದ್ಧವಾಗಿದ್ದರೂ ಕನ್ನಡ ಚಿತ್ರರಂಗ ಸೂಕ್ತವಾಗಿ ಏಕೆ ಬಳಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಕಾರ್ನಾಡ್, ನಿರ್ದೇಶಕರು ಕಥೆ ಅಥವಾ ಕಾದಂಬರಿಗಳನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ಆದರೆ, ಕಥೆಯಲ್ಲಿರುವ ಎಲ್ಲಾ ಅಂಶಗಳನ್ನು ತೆರೆಗೆ ತಂದು ನ್ಯಾಯ ಸಲ್ಲಿಸಲು ಕಷ್ಟಸಾಧ್ಯ. ಸಿನಿಮಾಗೆ ತನ್ನದೇ ಆದ ಚೌಕಟ್ಟಿಗೆ ಅದೇ ರೀತಿ ಕಥೆಗೂ ಕೂಡಾ ತನ್ನದೇ ಪ್ರಪಂಚವಿರುತ್ತದೆ ಎರಡನ್ನು ಹೊಂದಿಸಿ ಪ್ರೇಕ್ಷಕರನ್ನು ರಂಜಿಸುವುದು ಸುಲಭದ ಮಾತಲ್ಲ.

    ಸುಮಾರು 700 ಪುಟಗಳಲ್ಲಿ ಬರೆದ ಕೃತಿಯನ್ನು 2 ಗಂಟೆಯಲ್ಲಿ ಹೇಳಿ ಮುಗಿಸಲು ಹೇಗೆ ಸಾಧ್ಯ. ಕಾದಂಬರಿಯ ಮೂಲ ಆಶಯಕ್ಕೆ ಧಕ್ಕೆ ತರುವ ಸಾಧ್ಯತೆಗಳಿರುತ್ತವೆ. ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ಮಾಣ, ನಿರ್ದೇಶನ ಎರಡೂ ಕಷ್ಟದ ಕೆಲಸ ಎಂದು ನನ್ನ ಅನುಭವದಿಂದ ಹೇಳಬಲ್ಲೆ ಎಂದರು.

    English summary
    Jnanapeeth award winner and actor-director Girish Karnad has said that he don't have any problems acting in remakes, instead is strictly against dubbing.
    Friday, April 18, 2014, 16:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X