For Quick Alerts
  ALLOW NOTIFICATIONS  
  For Daily Alerts

  ಅನ್ನದಾತನ ಅವತಾರ ಎತ್ತಿದ ಫೈರಿಂಗ್ ಸ್ಟಾರ್ ವೆಂಕಟ್

  By Suneetha
  |

  ಫೈರಿಂಗ್ ಸ್ಟಾರ್ ವೆಂಕಟ್ ಅವರು ಸದ್ಯಕ್ಕೆ ಸಖತ್ ಬ್ಯುಸಿಯಾಗಿರೋ ನಟ ಕಮ್ ಹಾಡುಗಾರ. ಇತ್ತೀಚೆಗೆ ತೆರೆ ಕಾಣುತ್ತಿರುವ ಹಲವರ ಚಿತ್ರಕ್ಕೆ ವೆಂಕಟ್ ಅವರ ಧ್ವನಿಯಲ್ಲಿ ಒಂದಾದರೂ ಹಾಡು ಇದ್ದೇ ಇರುತ್ತದೆ. ಅಷ್ಟರಮಟ್ಟಿಗೆ ವೆಂಕಟ್ ಅವರು ಗಾಂಧಿನಗರದಲ್ಲಿ ಫೇಮಸ್ ಆಗಿದ್ದಾರೆ.

  ಇನ್ನು ಎಸ್.ನಾರಾಯಣ್ ಅವರು ಆಕ್ಷನ್-ಕಟ್ ಹೇಳಲಿರುವ ವೆಂಕಟ್ ಅವರ 'ಡಿಕ್ಟೇಟರ್' ಸಿನಿಮಾ ಯಾವಾಗ ಸೆಟ್ಟೇರುತ್ತೆ, ಅದ್ಯಾವಾಗ ಶೂಟಿಂಗ್ ಆರಂಭ ಆಗುತ್ತೆ ಅನ್ನೋದು ಇನ್ನು ಯಾರಿಗೂ ಗೊತ್ತಿಲ್ಲ.[ಪ್ರೀತಿ ಮಾಡೋರಿಗೆ ಬುದ್ಧಿವಾದ ಹೇಳೋಕೆ ಬಂದ ವೆಂಕಟ್]

  ಆದರೆ ಅದಕ್ಕಿಂತ ಮುನ್ನ ವೆಂಕಟ್ ಅವರು 'ಅಳಿಲುಗಳ ಅಳಲು' ಎಂಬ ಹೊಸ ಸಿನಿಮಾವೊಂದರಲ್ಲಿ ಇಲ್ಲಿಯವರೆಗೆ ಮಾಡಿರದಂತಹ ವಿಶಿಷ್ಟ ಹಾಗು ಸಣ್ಣ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಈ ಚಿತ್ರದ ಹಾಡೊಂದಕ್ಕೆ ತಮ್ಮ ಧ್ವನಿ ಕೂಡ ನೀಡಿದ್ದಾರೆ.[ಪತ್ನಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ 'ಫೈರಿಂಗ್ ಸ್ಟಾರ್']

  ಕಲಾತ್ಮಕತೆಯ ಚಿತ್ರದ ಜೊತೆಗೆ ಮಕ್ಕಳ ಚಿತ್ರವಾಗಿರುವ 'ಅಳಿಲುಗಳ ಅಳಲು' ಬಾಲ ಕಾರ್ಮಿಕ ಪದ್ದತಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಜೊತೆಗೆ ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತಲಿದೆ. ಚಿತ್ರದಲ್ಲಿ ಫೈರಿಂಗ್ ಸ್ಟಾರ್ ವೆಂಕಟ್ ಅವರು ನಮ್ಮ ದೇಶದ ಬೆನ್ನುಲುಬು, ಅನ್ನದಾತ ರೈತನ ಪಾತ್ರ ವಹಿಸಿದ್ದು, ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಇಂತಹ ವಿಶೇಷ ಪಾತ್ರ ವಹಿಸಿದ್ದಾರೆ.[ವೆಂಕಟ್ 'ಡಿಕ್ಟೇಟರ್'ಗೆ ಎಸ್.ನಾರಾಯಣ್ ಆಕ್ಷನ್-ಕಟ್]

  ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆಯ ಜೊತೆಗೆ ನಿರ್ದೇಶನವನ್ನು ಗೋವಿಂದು ಮಧುಗಿರಿ ಅವರು ಮಾಡಿದ್ದಾರೆ. ಗ್ರಾಮೀಣ ಪರಿಸರದ ಕಥೆಯನ್ನು ಹೊಂದಿರುವ 'ಅಳಿಲುಗಳ ಅಳಲು' ಚಿತ್ರದಲ್ಲಿ ಮೂರು ಬೀಟ್ ಸಾಂಗ್ ಇದ್ದು, ಅದರಲ್ಲಿ ಒಂದನ್ನು ವೆಂಕಟ್ ಅವರು ಹಾಡಿದ್ದಾರೆ. ಚಿತ್ರಕ್ಕೆ ನಿರ್ಮಾಪಕ ವೇಣುಗೋಪಾಲ್ ಅವರು ಬಂಡವಾಳ ಹೂಡಿದ್ದಾರೆ.

  English summary
  Kannada Actor-Director Huchcha Venkat After starting his own film 'Porki Huchcha Venkat', Venkat has made a special appearance in a film called 'Alilugala Alalu'. The movie is directed By Govindaraj Madhugiri

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X