For Quick Alerts
  ALLOW NOTIFICATIONS  
  For Daily Alerts

  ಮುದ್ದು ಮಗಳ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಯೋಗಾಭ್ಯಾಸ

  By Naveen
  |
  International Yoga Day 2018 : ಅಂತಾರಾಷ್ಟ್ರೀಯ ಯೋಗ ದಿನದಂದು ಗಣೇಶ್ ಪುತ್ರಿ ಯೋಗ...!!

  ಇಂದು ವಿಶ್ವ ಯೋಗ ದಿನ. ಸಾಮಾನ್ಯರಿಂದ ಹಿಡಿದು ಸಿನಿಮಾ ನಟರ ವರೆಗೆ ಇಂದು ಎಲ್ಲರೂ ಯೋಗ ಮಾಡುತ್ತಿದ್ದಾರೆ. ಇಂತಹ ದಿನ ಯೋಗದ ಮಹತ್ವವನ್ನು ನಟ ಗಣೇಶ್ ಸಾರಿದ್ದಾರೆ.

  ನಟ ಗಣೇಶ್ ತಮ್ಮ ಪುಟ್ಟ ಮಗಳೊಂದಿಗೆ ಯೋಗ ಮಾಡಿದ್ದಾರೆ. ಅಪ್ಪನ ಜೊತೆಗೆ ಸೇರಿ ಮಗಳು ಚಾರಿತ್ರ್ಯ ಕೂಡ ಯೋಗ ಮಾಡಿ ತೋರಿಸಿದ್ದಾರೆ. ಕಷ್ಟ ಇರುವ ಆಸನಗಳನ್ನೂ ಗಣೇಶ್ ಪುತ್ರಿ ನೀರು ಕುಡಿದಷ್ಟು ಸುಲಭವಾಗಿ ಮಾಡಿದ್ದಾರೆ. ನಟ ಗಣೇಶ್ ತಮ್ಮ ಮಗಳ ಜೊತೆಗೆ ಇರುವ ಫೋಟೋಗಳನ್ನು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ತಮ್ಮ ದೇಹ ಹಾಗೂ ಆರೋಗ್ಯದ ಬಗ್ಗೆ ತುಂಬ ಕೇರ್ ತೆಗೆದುಕೊಳ್ಳುವ ಗಣೇಶ್ ಜಿಮ್ ಜೊತೆಗೆ ಯೋಗ ಕೂಡ ಮಾಡುತ್ತಾರೆ. ಅದು ಅವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಫಿಟ್ ಆಗಿರಲು ಸಹಾಯ ಮಾಡಿದೆಯಂತೆ.

  ಅಂದಹಾಗೆ, ಗಣೇಶ್ ಜೊತೆಗೆ ಕನ್ನಡ ಸಾಕಷ್ಟು ನಟ ನಟಿಯರು ಯೋಗ ಮಾಡುತ್ತಿರುವ ಫೋಟೋಗಳ ಮೂಲಕ ವಿಶ್ವ ಯೋಗ ದಿನಕ್ಕೆ ಶುಭ ಕೋರಿದ್ದಾರೆ. 'ಎರಡನೇ ಸಲ' ಖ್ಯಾತಿಯ ನಟಿ ಸಂಗೀತ ಭಟ್, ಸಂಜನಾ ಗಲ್ರಾನಿ, ಪ್ರಜ್ವಲ್ ದೇವರಾಜ್ ಪತ್ನಿ ರಾಧಿಕಾ ಚಂದ್ರನ್, ನಿರೂಪಕಿ ಅನುಶ್ರೀ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ವಿಶ್ ಮಾಡಿದ್ದಾರೆ.

  English summary
  International Yoga Day 2018 : Kannada actor Ganesh does yoga with his daughter Charithriya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X