For Quick Alerts
  ALLOW NOTIFICATIONS  
  For Daily Alerts

  ಮೈಸೂರು ಬಳಿ ದ್ವಿಚಕ್ರ ವಾಹನಕ್ಕೆ ಜಗ್ಗೇಶ್ ಕಾರು ಡಿಕ್ಕಿ

  By Rajendra
  |

  ನವರಸ ನಾಯಕ ಜಗ್ಗೇಶ್ ಅವರು ಪ್ರಯಾಣಿಸುತ್ತಿದ್ದ ಶೆವರ್ಲೆ ಕಾರು (KA03-MK-3666) ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ಮೈಸೂರು ಬಳಿ ಸೋಮವಾರ (ಆ.26) ನಡೆದಿದೆ. ಅಪಘಾತದಲ್ಲಿ ಯಾರಿಗೂ ಅಪಾಯವಾಗಿಲ್ಲ. ದ್ವಿಚಕ್ರ ವಾಹನದ ಸವಾರನನ್ನು ಕನಕಪುರದ ಗೋಪಾಲ್ ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

  ಜಗ್ಗೇಶ್ ಅವರ ಕಾರು ಚಾಲಕ ಕಾರನ್ನು ಚಾಲನೆ ಮಾಡುತ್ತಿದ್ದರು. ಅವರು ಮೈಸೂರು ಚಾಮುಂಡಿ ಬೆಟ್ಟದಿಂದ ಚಾಮುಂಡೇಶ್ವರಿ ದರ್ಶನ ಭಾಗ್ಯ ಪಡೆದು ಮರಳುತ್ತಿದ್ದರು. ಕಾರಿನ ವೇಗ ಕೊಂಚ ಜಾಸ್ತಿಯಾಗಿಯೇ ಇತ್ತು ಎನ್ನಲಾಗಿದೆ. ಆದರೆ ಇದ್ದಕ್ಕಿದ್ದಂತೆ ದ್ವಿಚಕ್ರ ವಾಹನ ಸವಾರ ಅಡ್ಡಬಂದ ಕಾರಣ ಅಪಘಾತ ಸಂಭವಿಸಿದೆ.

  ರಸ್ತೆಬದಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡಿದ್ದ ಸವಾರ ಜಗ್ಗೇಶ್ ಪ್ರಯಾಣಿಸುತ್ತಿದ್ದ ಕಾರು ಹತ್ತಿರ ಬರುತ್ತಿದ್ದಂತೆ ಯೂಟರ್ನ್ ತಗೊಂಡಿದ್ದಾನೆ. ಈ ಸಂದರ್ಭದಲ್ಲಿ ಜಗ್ಗೇಶ್ ಅವರ ಕಾರು ಚಾಲಕ ಕಂಟ್ರೋಲ್ ತಪ್ಪಿ ಗೋಪಾಲ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾನೆ.

  ಜಗ್ಗೇಶ್ ಕುಟುಂಬಿಕರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗೋಪಾಲ್ ರಸ್ತೆಯ ಮತ್ತೊಂದು ಬದಿಗೆ ಹೋಗಿ ಬಿದ್ದಿದ್ದಾನೆ. ಆತನ ಸ್ಕೂಟರ್ ಕಾರಿನ ಅಡಿಗೆ ಸಿಲುಕಿದೆ. ಅದೃಷ್ಟವಶಾತ್ ಗೋಪಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃಷ್ಣರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಜಗ್ಗೇಶ್ ಅವರು ಕುಟುಂಬ ಸಮೇತರಾಗಿ ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸದ್ಯಕ್ಕೆ ಜಗ್ಗೇಶ್ ಅವರು 'ಡವ್' ಚಿತ್ರದಲ್ಲಿ ಅತಿಥಿ ಪಾತ್ರವನ್ನು ಪೋಷಿಸಿದ್ದಾರೆ. ಇತ್ತೀಚೆಗೆ ಈ ಹಾಡಿನ ಚಿತ್ರೀಕರಣ ಅಭಿಮಾನ್ ಸ್ಟುಡಿಯೋದಲ್ಲಿ ನಡೆಯಿತು. (ಏಜೆನ್ಸೀಸ್)

  English summary
  Kannada actor Jaggesh's car hit a two wheeler when he was on her way to the city from Mysore on Monday. Nobody was injured. The incident took place in morning when the car was passing Chamundi hills near Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X