»   » 'ನೀರ್ದೋಸೆ' ನಿರ್ದೇಶಕರ ಜೊತೆ ಜಗ್ಗೇಶ್ ಮತ್ತೊಂದು ಸಾಹಸ

'ನೀರ್ದೋಸೆ' ನಿರ್ದೇಶಕರ ಜೊತೆ ಜಗ್ಗೇಶ್ ಮತ್ತೊಂದು ಸಾಹಸ

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ವಿಜಯ ಪ್ರಸಾದ್ ಅವರ ಕಾಂಬಿನೇಷನ್ ನಲ್ಲಿ ಮೂದಿ ಬಂದ ಸಿನಿಮಾ 'ನೀರ್ದೋಸೆ'. ಈ ನೀರ್ದೋಸೆ ತಿಂದ ಪ್ರೇಕ್ಷಕರು ಶಬ್ಬಾಶ್ ಎಂದಿದ್ದರು. ನಿರ್ದೇಶಕನ ಕೆಲಸಕ್ಕೆ, ಜಗ್ಗೇಶ್ ಅವರ ಅಭಿನಯಕ್ಕೆ ದೊಡ್ಡ ಸಲಾಂ ಹೊಡೆದಿದ್ದರು.

ಹೀಗಾಗಿ, ಇವರಿಬ್ಬರ ಜುಗಲ್ ಬಂದಿಯಲ್ಲಿ ಮತ್ತೊಂದು ಸಿನಿಮಾ ಬಂದ್ರು ಅಚ್ಚರಿಯಿಲ್ಲ ಎಂದು ಅಂದುಕೊಂಡಿದ್ದವರೇ ಹೆಚ್ಚು. ಈಗ ಸಮಯ ಬಂದಿದೆ, 'ನೀರ್ದೋಸೆ' ನಂತರ ಜಗ್ಗೇಶ್ ಮತ್ತು ವಿಜಯ ಪ್ರಸಾದ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

ಇವರಿಬ್ಬರು ಈ ಬಾರಿ ಹಿಂದೆ ಬಿದ್ದಿರುವುದು ದೋಸೆ ಹಿಂದೆ ಅಲ್ಲಾ, 'ಲೇಡಿಸ್ ಟೈಲರ್' ಹಿಂದೆ. ಅರೇ 'ಲೇಡಿಸ್ ಟೈಲರ್'ಗೆ ಬೇರೆ ನಾಯಕ ಇದ್ದಾರೆ ಅಲ್ವಾ ಅಂತ ಆಶ್ಚರ್ಯವಾಗಬೇಡಿ. ಅದೇಲ್ಲಾ ಹಳೆ ಕಥೆ. ಇದು ತಾಜಾ ಕಥೆ. 'ಲೇಡಿಸ್ ಟೈಲರ್' ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.....

'ಲೇಡಿಸ್ ಟೈಲರ್'ಗೆ ಜಗ್ಗೇಶ್ ನಾಯಕ

'ನೀರ್ದೋಸೆ' ನಿರ್ದೇಶಕರ 'ಲೇಡಿಸ್ ಟೈಲರ್' ಸಿನಿಮಾಗೆ ನವರಸನಾಯಕ ಜಗ್ಗೇಶ್ ನಾಯಕನಾಗಿ ಆಯ್ಕೆ ಆಗಿದ್ದಾರಂತೆ. ಈ ಮೂಲಕ ರವಿಶಂಕರ್ ಗೌಡ ಮತ್ತು ನೀನಾಸಂ ಸತೀಶ್ ನಂತರ ಜಗ್ಗೇಶ್ ಅವರ ಜೋಳಿಗಿಗೆ ಈ ಸಿನಿಮಾ ಬಿದ್ದಿದೆ.

ಜಗ್ಗೇಶ್ ಸೂಕ್ತ ಎಂಬ ಆಶಯ

'ಲೇಡಿಸ್ ಟೈಲರ್' ಕಥೆ ಕೇಳಿದ್ದ ಬಹುತೇಕರು ಈ ಕಥೆಗೆ ಜಗ್ಗೇಶ್ ಅವರೇ ಸೂಕ್ತ. ಅವರಿಗಾಗಿಯೇ ಈ ಕಥೆ ಬರೆದಂತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರಂತೆ. ಇನ್ನು ಅದೇ ಸಮಯಲ್ಲಿ ಮೊದಲು ಆಯ್ಕೆ ಆದ ನಟರು ಕಾರಣಾಂತರಗಳಿಂದ ಈ ಪ್ರಾಜೆಕ್ಟ್ ನ್ನ ಕೈಬಿಡಲು ನಿರ್ಧರಿಸಿದ್ದರು. ಹೀಗಾಗಿ, ಜಗ್ಗೇಶ್ ಅವರೇ ಟೈಲರ್ ಆಗಬೇಕು ಎಂದು ಚಿತ್ರತಂಡ ನಿರ್ಧರಿಸಿದೆ.

ಜಗ್ಗೇಶ್ ಕೂಡ ಒಪ್ಪಿದ್ದಾರೆ

ಇನ್ನು 'ಲೇಡಿಸ್ ಟೈಲರ್' ಆಗಲು ಜಗ್ಗೇಶ್ ಅವರು ಕೂಡ ಒಪ್ಪಿಗೆ ಕೊಟ್ಟಿದ್ದಾರೆ. ಈ ಬಗ್ಗೆ ಜಗ್ಗೇಶ್ ಅವರು ಕೂಡ ಟ್ವೀಟ್ ಮಾಡಿದ್ದು, ಚಿತ್ರದ ಬಗ್ಗೆ ಬಿಟ್ಟು ಕೊಟ್ಟಿಲ್ಲ. ಆದ್ರೆ, ಮೂಲಗಳ ಪ್ರಕಾರ 'ಲೇಡಿಸ್ ಟೈಲರ್' ಚಿತ್ರಕ್ಕೆ ಜಗ್ಗೇಶ್ ಅವರು ಸಹಿ ಮಾಡಿದ್ದಾರೆ.

ನಾಯಕಿಯ ಹುಡುಕಾಟ

ಅಂದ್ಹಾಗೆ, 'ಲೇಡಿಸ್ ಟೈಲರ್' ಚಿತ್ರಕ್ಕಾಗಿ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ. ಮೂಲಗಳ ಪ್ರಕಾರ ನಟಿ ಶರ್ಮಿಳಾ ಮಾಂಡ್ರೆ ನಾಯಕಿ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ರೆ, ಅಧಿಕೃತವಾಗಿ ಘೋಷಣೆ ಆಗಿಲ್ಲ.

125 ಕೆಜಿ ತೂಕದ ನಾಯಕಿ

'ಲೇಡಿಸ್ ಟೈಲರ್' ನಾಯಕಿ ಪ್ರಧಾನ ಚಿತ್ರವಾಗಿದ್ದು, ನಾಯಕಿ ಇಲ್ಲಿ ಮುಸ್ಲಿಂ ಹೆಣ್ಣುಮಗಳಂತೆ. ಈ ಚಿತ್ರದಲ್ಲಿ ನಾಯಕಿ ಬರೋಬ್ಬರಿ 125 ಕೆಜಿ ತೂಕವಿರಬೇಕಾಗುತ್ತಂತೆ. ಹೀಗಾಗಿಯೇ ಚಿತ್ರದ ಟೈಟಲ್ ಕೂಡ 'ಲೇಡಿಸ್ ಟೈಲರ್ 34:34' ಎಂದು ಇಡಲಾಗಿದೆ.

ಪಕ್ಕಾ ಮನರಂಜನೆ

ಇಲ್ಲೊಂದು ಪುಟ್ಟ ಪ್ರೇಮಕಥೆಯು ಬಿಚ್ಚಿಕೊಳ್ಳುತ್ತಲೇ ಒಂದಷ್ಟು ಸಂದೇಶಗಳನ್ನು ಕೊಡುತ್ತಾ ಹೋಗುತ್ತದೆ. ಇಲ್ಲಿ ಜಾತಿ ಕುರಿತಾಗಿ ಹೇಳುತ್ತಿದ್ದೇನೆ. ಹಾಗಂತ ಅತಿಯಾದ ಬೋಧನೆ ಇಲ್ಲ. ಒಂದು ಗಂಭೀರ ವಿಷಯವನ್ನು ಹಾಸ್ಯವಾಗಿ, ನವಿರಾಗಿ ಹೇಳಲು ಹೊರಟಿದ್ದಾರೆ ನಿರ್ದೇಶಕರು.

English summary
Vijayaprasad’s upcoming directorial 34:34 - Ladies Tailor is back making headlines for the choice of its hero. The team, after considering two actors for the role, has finally settled on a third in Jaggesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada