»   » ಒಗ್ಗೂಡದ ಕಲಾವಿದರ ಬಗ್ಗೆ ನಟ ಜಗ್ಗೇಶ್ ಗರಂ

ಒಗ್ಗೂಡದ ಕಲಾವಿದರ ಬಗ್ಗೆ ನಟ ಜಗ್ಗೇಶ್ ಗರಂ

Posted By: ಹರಾ
Subscribe to Filmibeat Kannada

'ಬೇರೆಲ್ಲಾ ಚಿತ್ರರಂಗಕ್ಕಿಂತ ಕನ್ನಡ ಚಿತ್ರರಂಗದಲ್ಲಿ ಸಮಸ್ಯೆಗಳು ಹೆಚ್ಚು. ನಿರ್ಮಾಪಕರ ಗೋಳನ್ನ ಕೇಳೋರು ಯಾರು ಇಲ್ಲ' ಅಂತ ಕನ್ನಡ ನಿರ್ಮಾಪಕರೆಲ್ಲಾ ಸೇರಿ ಇಂದಿನಿಂದ 10 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ನಿರ್ಮಾಪಕರಿಗೆ ಸಾಥ್ ನೀಡಿರುವ ನಟ ಕಮ್ ನಿರ್ಮಾಪಕ ಜಗ್ಗೇಶ್ ''ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ'' ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ''ಕನ್ನಡ ಚಿತ್ರರಂಗದಲ್ಲಿ ಸಮಸ್ಯೆ ಹೆಚ್ಚಾಗಿದೆ. ಕಲಾವಿದರಲ್ಲಿ ಒಗ್ಗಟ್ಟಿಲ್ಲ. ಪ್ರಮೋಷನ್ ಅಂದ್ರೆ ಮುಂಚೆ ಪೋಸ್ಟರ್ ಹಾಕಿದ್ರೆ ಸಾಕಿತ್ತು. ಅದೇ ಪ್ರಮೋಷನ್ ಆಗ್ತಿತ್ತು. ಈಗ ಇಂಟರ್ನೆಟ್ ಮತ್ತು ಎಲ್ಲಾ ಟಿವಿಗಳಲ್ಲೂ ಬರಬೇಕು''. [ಹೊಟ್ಟೆಪಾಡಿಗಾಗಿ ಬೀದಿಗಿಳಿದ ಕನ್ನಡ ನಿರ್ಮಾಪಕರು]

Actor Jaggesh's reaction on Producers protest in KFCC

''ದೊಡ್ಡೋರ ಸಿನಿಮಾಗಳಿಗೆ ಪ್ರಮೋಷನ್ ಗಂತ ಮಿನಿಮಂ 1 ಕೋಟಿ ಬೇಕು. ಮಾಮೂಲಿ ಸಿನಿಮಾ ಅಂದ್ರೆ 40 ಲಕ್ಷ ಬೇಕೇಬೇಕು. ಸಿನಿಮಾ ಮೇಕಿಂಗ್ 100 ದಿನ ಮಾಡ್ತಾರೆ. ಇಷ್ಟೆಲ್ಲಾ ಮಾಡಿದ್ರೂ, ವಾಹಿನಿಯವರು ಚಿತ್ರಗಳನ್ನ ಕೊಂಡುಕೊಳ್ತಾಯಿಲ್ಲ. ಇದರಿಂದ ಇಂಡಸ್ಟ್ರಿಯನ್ನ ನಡುನೀರಲ್ಲಿ ಕೈಬಿಟ್ಟಹಾಗಾಗಿದೆ. ಅದನ್ನ ಸರಿಪಡಿಸಿಕೊಳ್ಳಬೇಕು'' ಅಂತ ನಟ ಜಗ್ಗೇಶ್ ಆಗ್ರಹಿಸಿದರು. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

'ನಿರ್ಮಾಪಕರ ಬೇಡಿಕೆಯಲ್ಲಿ ಅರ್ಥ ಇದೆ' ಅಂತ್ಹೇಳಿರುವ ನವರಸ ನಾಯಕ ಜಗ್ಗೇಶ್, ಕಲಾವಿದರು ಮತ್ತು ನಿರ್ಮಾಪಕರು ಒಗ್ಗೂಡಿದರೆ ಸಮಸ್ಯೆ ಇತ್ಯರ್ಥ ಸಾಧ್ಯ ಅಂದಿದ್ದಾರೆ. ಜಗ್ಗೇಶ್ ಅವರಿಗೆ ಆಗಿರುವ ಈ ಮನವರಿಕೆ ಬೇರೆಲ್ಲಾ ನಟರಿಗೆ ಆಗಬೇಕಲ್ಲಾ ಅನ್ನೋದು ಸದ್ಯ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ.

English summary
More than 100 Kannada Film Producers are protesting in KFCC today (June 1st). In support for Producers, Kannada Actor Jaggesh suggests that all Actors should unite for Kannada Film Industry welfare.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada