For Quick Alerts
  ALLOW NOTIFICATIONS  
  For Daily Alerts

  ಕನ್ನಡ 'ಬಿಗ್ ಬಾಸ್'ನಲ್ಲಿ ಸುದೀಪ್, ತಮಿಳಿನಲ್ಲಿ ಕಮಲ್, ತೆಲುಗಿನಲ್ಲಿ ಯಾರು?

  By Bharath Kumar
  |

  ಹಾಲಿವುಡ್ ನಲ್ಲಿ ಮೊದಲು ಆರಂಭವಾದ 'ಬಿಗ್ ಬಾಸ್' ರಿಯಾಲಿಟಿ ಶೋ ಕಾಲ ಕ್ರಮೇಣ ಹಿಂದಿಯಲ್ಲಿ ಮೂಡಿ ಬಂತು. ನಂತರ ಕನ್ನಡದಲ್ಲೂ ಶುರುವಾಗಿ ಯಶಸ್ಸು ಕಂಡಿದೆ.

  ಹೀಗೆ, ಹಿಂದಿ ಮತ್ತು ಕನ್ನಡದಲ್ಲಿ ಟಿವಿ ಪ್ರೇಕ್ಷಕರ ಜನಮನ್ನಣೆ ಗಳಿಸಿಕೊಂಡಿರುವ 'ಬಿಗ್ ಬಾಸ್' ರಿಯಾಲಿಟಿ ಶೋ ಈಗ ತಮಿಳು ಮತ್ತು ತೆಲುಗಿನಲ್ಲಿ ಮೂಡಿ ಬರಲಿದೆಯಂತೆ. ಈಗಾಗಲೇ ತಮಿಳು ಭಾಷೆಯಲ್ಲಿ ಸಿದ್ದತೆಗಳು ನಡೆದಿದ್ದು, ಅದರ ಬೆನ್ನಲ್ಲೆ ತೆಲುಗಿನಲ್ಲೂ 'ಬಿಗ್ ಬಾಸ್'ಗೆ ಪ್ಲಾನಿಂಗ್ ನಡೆದಿದೆ.

  ಹಾಗಾದ್ರೆ, ತಮಿಳು ಮತ್ತು ತೆಲುಗಿನಲ್ಲಿ ಬಿಗ್ ಬಾಸ್ ನಿರೂಪಣೆ ಮಾಡಲಿರುವುದು ಯಾರು? ಮುಂದೆ ಓದಿ.....

  ತೆಲುಗಿನಲ್ಲಿ 'ಬಿಗ್ ಬಾಸ್' ಶುರು

  ತೆಲುಗಿನಲ್ಲಿ 'ಬಿಗ್ ಬಾಸ್' ಶುರು

  ಹಿಂದಿ, ಕನ್ನಡ ನಂತರ ತಮಿಳಿನಲ್ಲಿ 'ಬಿಗ್ ಬಾಸ್' ಕಾರ್ಯಕ್ರಮ ಶುರುವಾಗುತ್ತಿದೆ ಎನ್ನುವಷ್ಟರಲ್ಲೇ ಈಗ ತೆಲುಗಿನಲ್ಲೂ ಸಿದ್ದತೆ ನಡೆದಿದೆ. ತೆಲುಗಿನಲ್ಲಿ 'ಬಿಗ್ ಬಾಸ್' ನಿರೂಪಣೆ ಮಾಡಲು ದೊಡ್ಡ ನಟನನ್ನ ಕರೆತರಲಾಗುತ್ತಿದೆಯಂತೆ.['ಬಿಗ್ ಬಾಸ್ ರಿಯಾಲಿಟಿ ಶೋ'ಗೆ ಕಮಲ್ ಹಾಸನ್ ನಿರೂಪಕ!]

  ತೆಲುಗಿನಲ್ಲಿ ಜೂ.ಎನ್.ಟಿ.ಆರ್ 'ಬಿಗ್ ಬಾಸ್'!

  ತೆಲುಗಿನಲ್ಲಿ ಜೂ.ಎನ್.ಟಿ.ಆರ್ 'ಬಿಗ್ ಬಾಸ್'!

  ಮೂಲಗಳ ಪ್ರಕಾರ ತೆಲುಗು ಭಾಷೆಯಲ್ಲಿ ಮೂಡಿ ಬರಲಿರುವ 'ಬಿಗ್ ಬಾಸ್' ಕಾರ್ಯಕ್ರಮವನ್ನ ಜೂನಿಯರ್ ಎನ್.ಟಿ.ಆರ್ ನಿರೂಪಣೆ ಮಾಡಲಿದ್ದಾರಂತೆ.

  ಚಿರು ಬದಲು ಯಂಗ್ ಟೈಟರ್

  ಚಿರು ಬದಲು ಯಂಗ್ ಟೈಟರ್

  ಈ ಮೊದಲು ತೆಲುಗು ಭಾಷೆಯ 'ಬಿಗ್ ಬಾಸ್' ಕಾರ್ಯಕ್ರಮ ನಿರೂಪಣೆ ಮಾಡಲು ಮೆಗಾಸ್ಟಾರ್ ಚಿರಂಜೀವಿ ಅವರನ್ನ ಸಂಪರ್ಕಿಸಲಾಗಿತ್ತಂತೆ. ಆದ್ರೀಗ, ಚಿರು ಬದಲು ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್ ಅವರು ಹೋಸ್ಟ್ ಮಾಡಲಿದ್ದಾರಂತೆ.

  ದೊಡ್ಡ ಮೊತ್ತಕ್ಕೆ ಆಫರ್!

  ದೊಡ್ಡ ಮೊತ್ತಕ್ಕೆ ಆಫರ್!

  ಎನ್.ಟಿ.ಆರ್ ಅವರು 'ಬಿಗ್ ಬಾಸ್' ನಿರೂಪಣೆ ಮಾಡಲು ಖಾಸಗಿ ವಾಹಿನಿ ದೊಡ್ಡ ಮೊತ್ತವನ್ನ ಆಫರ್ ಮಾಡಿದೆಯಂತೆ. ಸದ್ಯ, ಚಿರಂಜೀವಿ 'ಕನ್ನಡದ ಕೋಟ್ಯಾಧಿಪತಿ'ಯ ತೆಲುಗು ವರ್ಷನ್ ನಿರೂಪಣೆ ಮಾಡಲಿದ್ದಾರೆ. ಹಾಗಾಗಿ, ಚಿರು ಬದಲು ಎನ್.ಟಿ.ಆರ್ ಗೆ ಗಾಳ ಹಾಕಲಾಗಿದೆ.

  ತಮಿಳಿನಲ್ಲಿ ಕಮಲ್ ಹಾಸನ್!

  ತಮಿಳಿನಲ್ಲಿ ಕಮಲ್ ಹಾಸನ್!

  ಇನ್ನು 'ಬಿಗ್ ಬಾಸ್' ತಮಿಳು ಭಾಷೆಯಲ್ಲಿ ಗ್ಲೋಬಲ್ ಸ್ಟಾರ್ ಕಮಲ್ ಹಾಸನ್ ನಿರೂಪಣೆ ಮಾಡಲಿದ್ದಾರೆ. ಈಗಾಗಲೆ ಕಮಲ್ ಹಾಸನ್ ಬಿಗ್ ಬಾಸ್ ಹೋಸ್ಟ್ ಮಾಡಲು ಸಹಿ ಕೂಡ ಮಾಡಿದ್ದು, ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.

  ದೊಡ್ಡ ನಟರು 'ಬಿಗ್ ಬಾಸ್' ಹೋಸ್ಟ್ ಮಾಡಿದ್ದಾರೆ!

  ದೊಡ್ಡ ನಟರು 'ಬಿಗ್ ಬಾಸ್' ಹೋಸ್ಟ್ ಮಾಡಿದ್ದಾರೆ!

  ಈಗಾಗಲೇ ಅರ್ಶಿದ್ ವರ್ಸಿ, ಅಮಿತಾಬ್ ಬಚ್ಚನ್, ಸಂಜಯ್ ದತ್, ಸಲ್ಮಾನ್ ಖಾನ್ ಮತ್ತು ಕನ್ನಡದಲ್ಲಿ ಸುದೀಪ್ ಅಂತಹ ದೊಡ್ಡ ನಟರು ಬಿಗ್ ಬಾಸ್ ನಿರೂಪಣೆ ಮಾಡಿದ್ದಾರೆ. ಈಗ ಈ ಸಾಲಿಗೆ ಕಮಲ್ ಹಾಸನ್ ಮತ್ತು ಜೂನಿಯರ್ ಎನ್.ಟಿ.ಆರ್ ಸೇರಲಿದ್ದಾರೆ.

  English summary
  According to Source, Tollywood star Jr NTR may soon be hosting the Telugu version of reality show Bigg Boss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X