For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ರಿಯಾಲಿಟಿ ಶೋ'ಗೆ ಕಮಲ್ ಹಾಸನ್ ನಿರೂಪಕ!

  By Bharath Kumar
  |

  ಟಿವಿ ಲೋಕದಲ್ಲಿ 'ಬಿಗ್ ಬಾಸ್' ಎಂಬ ಕಾರ್ಯಕ್ರಮ ಹೊಸದೊಂದು ರೀತಿಯಲ್ಲಿ ಮನರಂಜನೆ ನೀಡುವ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದು ಮಾತ್ರ ಸುಳ್ಳಲ್ಲ.

  ಹಾಲಿವುಡ್ ನಲ್ಲಿ ಮೂಡಿ ಬರುತ್ತಿದ್ದ 'ಬಿಗ್ ಬಾಸ್' ಕಾಲಕ್ರಮೇಣ ಹಿಂದಿಯಲ್ಲಿ ಶುರುವಾಯಿತು. ಅದಾದ ಬಳಿಕ ಕನ್ನಡದಲ್ಲೂ ಶುರುವಾಗಿ ಯಶಸ್ಸು ಕಂಡಿದೆ.

  ಹೀಗೆ, ಕನ್ನಡ ಮತ್ತು ಹಿಂದಿಯಲ್ಲಿ ಜನ ಮನ್ನಣೆಗಳಿಸಿರುವ 'ಬಿಗ್ ಬಾಸ್' ರಿಯಾಲಿಟಿ ಶೋ, ಈಗ ನಮ್ಮ ಪಕ್ಕದ ರಾಜ್ಯಕ್ಕೂ ಕಾಲಿಡುತ್ತಿದೆ. ಹೌದು, ತಮಿಳಿನಲ್ಲಿ 'ಬಿಗ್ ಬಾಸ್' ಕಾರ್ಯಕ್ರಮ ಶುರುಮಾಡಲು ಚಿಂತನೆ ನಡೆಸಿದ್ದು, ಇದಕ್ಕಾಗಿ ದೊಡ್ಡ ಸ್ಟಾರ್ ನಟನನ್ನ ನಿರೂಪಕನಾಗಿ ಕರೆತರುವ ಸಾಧ್ಯತೆಯಿದೆಯಂತೆ. 'ಬಿಗ್ ಬಾಸ್' ತಮಿಳಿನ ನಿರೂಪಕರ ಪಟ್ಟಿಯಲ್ಲಿ ಯಾವ ನಟರ ಹೆಸರು ಇದೆ ಎಂಬುದನ್ನ ಮುಂದೆ ಓದಿ.....

  ತಮಿಳಿನಲ್ಲಿ 'ಬಿಗ್ ಬಾಸ್' ಹವಾ!

  ತಮಿಳಿನಲ್ಲಿ 'ಬಿಗ್ ಬಾಸ್' ಹವಾ!

  ಇಂಗ್ಲೀಷ್, ಹಿಂದಿ, ಕನ್ನಡದ ನಂತರ ಈಗ ತಮಿಳಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾಗಲಿದೆ. ಈಗಾಗಲೇ ಸಿದ್ದತೆಗಳು ನಡೆದಿದ್ದು, ಯಾವ ವಾಹಿನಿಯಲ್ಲಿ ಪ್ರಸಾರವಾಗುತ್ತೆ ಎಂಬುದು ನಿಗೂಡವಾಗಿ ಉಳಿದಿದೆ.

  ಕಮಲ್ ಹಾಸನ್ ಸಾರಥ್ಯ!

  ಕಮಲ್ ಹಾಸನ್ ಸಾರಥ್ಯ!

  ಅಂದ್ಹಾಗೆ, ತಮಿಳು ಬಿಗ್ ಬಾಸ್ ಶೋವನ್ನ ಯಾರು ಹೋಸ್ಟ್ ಮಾಡ್ತಾರೆ ಎಂಬ ಪ್ರಶ್ನೆ ಸಹಜವೇ. ಸದ್ಯ ಕಾಲಿವುಡ್ ಟಾಕ್ ಪ್ರಕಾರ, ಕಮಲ್ ಹಾಸನ್ ಬಿಗ್ ಬಾಸ್ ಶೋವನ್ನು ಮುನ್ನಡೆಸಲಿದ್ದಾರೆಂದು ಹೇಳಲಾಗ್ತಿದೆ.

  ಮೊದಲ ಆವೃತ್ತಿಗೆ ಸಕಲ ಸಿದ್ದತೆ!

  ಮೊದಲ ಆವೃತ್ತಿಗೆ ಸಕಲ ಸಿದ್ದತೆ!

  ಕಮಲ್ ಹಾಸನ್ ಒಬ್ಬರನ್ನ ಬಿಟ್ಟು, ಮೊದಲ ಆವೃತ್ತಿಯ 'ಬಿಗ್ ಬಾಸ್' ಶೋಗೆ ಸಕಲ ತಯಾರಿಗಳು ಭರದಿಂದ ಸಾಗುತ್ತಿವೆ. ನಿರೀಕ್ಷೆಯಂತೆ ಈ ಮೊದಲ ಸೀಸನ್ ನಲ್ಲಿ ರಾಜಕಾರಣ ಮತ್ತು ಸಿನಿಮಾ ರಂಗದಲ್ಲಿ ಫೇಮಸ್ ಆಗಿರುವವರು ಬಿಗ್ ಬಾಸ್ ಪ್ರವೇಶ ಮಾಡಲಿದ್ದಾರಂತೆ.

  ದೊಡ್ಡ ನಟರು 'ಬಿಗ್ ಬಾಸ್' ಹೋಸ್ಟ್ ಮಾಡಿದ್ದಾರೆ!

  ದೊಡ್ಡ ನಟರು 'ಬಿಗ್ ಬಾಸ್' ಹೋಸ್ಟ್ ಮಾಡಿದ್ದಾರೆ!

  ಈಗಾಗಲೇ ಅರ್ಶಿದ್ ವರ್ಸಿ, ಅಮಿತಾಬ್ ಬಚ್ಚನ್, ಸಂಜಯ್ ದತ್, ಸಲ್ಮಾನ್ ಖಾನ್ ಮತ್ತು ಕನ್ನಡದಲ್ಲಿ ಸುದೀಪ್ ಅಂತಹ ದೊಡ್ಡ ನಟರು ಬಿಗ್ ಬಾಸ್ ನಿರೂಪಣೆ ಮಾಡಿದ್ದಾರೆ. ಹೀಗೆ ನೋಡೊದಾದ್ರೆ, ತಮಿಳಿಗೆ ಕಮಲ್ ಹಾಸನ್ ಸೂಕ್ತವೆಂಬುದು ಅಯೋಜಕರ ಚಿಂತನೆಯಾಗಿದೆ.

  ವಿಶ್ರಾಂತಿಯಲ್ಲಿರುವ ಕಮಲ್ ಗ್ರೀನ್ ಸಿಗ್ನಲ್ ಕೊಡ್ತಾರ!

  ವಿಶ್ರಾಂತಿಯಲ್ಲಿರುವ ಕಮಲ್ ಗ್ರೀನ್ ಸಿಗ್ನಲ್ ಕೊಡ್ತಾರ!

  ಸದ್ಯ, ಶಬಾಶ್ ನಾಯ್ಡು ಚಿತ್ರವನ್ನ ಮಾಡುತ್ತಿದ್ದ ಕಮಲ್ ಹಾಸನ್ ಗಾಯದ ಸಮಸ್ಯೆಯಿಂದ ವಿಶ್ರಾಂತಿಯಲ್ಲಿದ್ದಾರೆ. ಇನ್ನು ಕೆಲ ತಿಂಗಳುಗಳ ಕಾಲ ವಿಶ್ರಾಂತಿಯಲ್ಲಿರಬೇಕು ಎಂದು ವೈದ್ಯರು ಸೂಚಿಸಿದ್ದಾರಂತೆ. ಇದ್ರ ಜೊತೆಗೆ ವಿಶ್ವರೂಪಂ 2 ಚಿತ್ರದ ಕೆಲಸವು ಪಗತಿಯಲ್ಲಿದೆ.

  English summary
  Kamal Haasan may make his television debut very soon. If sources in the tinsel town are to be believed, a private satellite television channel has approached the Ulaga Nayagan to host the Big Boss show’s Tamil version.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X