»   » 'ಷೆವಾಲಿಯಾರ್' ಪ್ರಶಸ್ತಿ ಸ್ವೀಕರಿಸಲು ಕಮಲ್ ಗೆ ಫ್ರಾನ್ಸ್ ನಿಂದ ಬುಲಾವ್

'ಷೆವಾಲಿಯಾರ್' ಪ್ರಶಸ್ತಿ ಸ್ವೀಕರಿಸಲು ಕಮಲ್ ಗೆ ಫ್ರಾನ್ಸ್ ನಿಂದ ಬುಲಾವ್

Posted By:
Subscribe to Filmibeat Kannada

ತೆರೆಯ ಮೇಲೆ ಕಮಲ್ ಹಾಸನ್ ಅವರು ಬಂದ್ರೆ ಸಾಮಾನ್ಯವಾಗಿ ಎಲ್ಲರ ಮುಖದಲ್ಲೂ ನಗು ಅರಳುತ್ತದೆ. ಕಮಲ್ ಹಾಸನ್ ಅವರು ಯಾವ ಪಾತ್ರ ಮಾಡಲು ಹಿಂದೆ-ಮುಂದೆ ನೋಡುವುದಿಲ್ಲ.

ಅವರು ಸಕಲಕಲಾವಲ್ಲಭ ಅನ್ನೋದಕ್ಕೆ ಅವರ ಅಭಿನಯದ 'ದಶಾವತಾರಂ' ಚಿತ್ರವೇ ಉತ್ತಮ ನಿದರ್ಶನ. ಕನ್ನಡ ಚಿತ್ರ 'ರಾಮ ಶಾಮ ಭಾಮ'ದಲ್ಲೂ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ್ದರು.[ಮಗಳು-ಪ್ರಿಯತಮೆಯ ಜಗಳದಿಂದ ಹೈರಾಣಾದ ಕಮಲ್ ಹಾಸನ್]

Actor Kamal Haasan chosen for France's 'Chevalier' award

ಇದೀಗ ಈ ಅಪರೂಪದ ನಟನಿಗೆ ಫ್ರಾನ್ಸ್ ನ ಸಂಸ್ಕೃತಿ ಮತ್ತು ಸಂವಹನ ಇಲಾಖೆ ಫಿದಾ ಆಗಿ, ಪಾರಿತೋಷಕ ನೀಡಲು ನಿರ್ಧರಿಸಿದೆ. ಚಿತ್ರರಂಗದಲ್ಲಿ ಕಮಲ್ ಮಾಡಿರುವ ಅಮೋಘ ಸೇವೆಯನ್ನು ಪರಿಗಣಿಸಿ ಫ್ರಾನ್ಸ್ ದೇಶ, ‍‍‍'ಷೆವಾಲಿಯಾರ್' ಎಂಬ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನ ಮಾಡಿದೆ.

ಫ್ರಾನ್ಸ್ ನ ಸಂಸ್ಕೃತಿ ಮತ್ತು ಸಂವಹನ ಇಲಾಖೆಯಿಂದ ನೀಡಲ್ಪಡುವ 'ಷೆವಾಲಿಯಾರ್' ಪ್ರಶಸ್ತಿಗೆ ಕಮಲ್ ಹಾಸನ್ ಆಯ್ಕೆಯಾಗಿದ್ದು, ಪ್ರಶಸ್ತಿ ಸ್ವೀಕರಿಸಲು ಬನ್ನಿ ಎಂಬುದಾಗಿ ಫ್ರಾನ್ಸ್ ನಿಂದ ಕಮಲ್ ಅವರಿಗೆ ಬುಲಾವ್ ಬಂದಿದೆ.[ಕಾಲಿನ ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಕಮಲ್ ಹಾಸನ್]

Actor Kamal Haasan chosen for France's 'Chevalier' award

ಫ್ರಾನ್ಸ್ ನಲ್ಲಿ ವಿಶೇಷ ಸಮಾರಂಭವನ್ನು ಆಯೋಜಿಸಿ ಈ ಪ್ರಶಸ್ತಿ ನೀಡಲಾಗುವುದು ಎಂದು ಫ್ರಾನ್ಸ್ ಸಂಸ್ಕೃತಿ ಇಲಾಖೆಯ ವಕ್ತಾರ ಮಾಹಿತಿ ನೀಡಿದ್ದಾರೆ.

ಫ್ರಾನ್ಸ್ ಸರ್ಕಾರದಿಂದ ನೀಡಲಾಗುವ ಈ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ನಟ ಕಮಲ್ ಹಾಸನ್ ಎಂಬ ಹೆಗ್ಗಳಿಕೆಗೆ 'ಉಳಗನಾಯಗನ್' ಪಾತ್ರವಾಗಿದ್ದು, ಈ ಮೊದಲು 1995 ರಲ್ಲಿ ತಮಿಳು ನಟ ಶಿವಾಜಿ ಗಣೇಶನ್ ಅವರು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.[ಆಸ್ಪತ್ರೆಯಿಂದ ಮನೆಗೆ ಮರಳಿದ ಕಮಲ್, ಅಭಿಮಾನಿಗಳ ಹರ್ಷೋದ್ಘಾರ]

Actor Kamal Haasan chosen for France's 'Chevalier' award

ಈಗಾಗಲೇ ರಾಜ್ಯ-ರಾಷ್ಟ್ರ ಪ್ರಶಸ್ತಿ ಸೇರಿದಂತೆ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ನಟ ಕಮಲ್ ಹಾಸನ್ ಅವರ ಪ್ರಶಸ್ತಿಗಳ ಪಟ್ಟಿಗೆ 'ಷೆವಾಲಿಯಾರ್' ಹೊಸ ಸೇರ್ಪಡೆ.

ಈ ಅಪರೂಪದ ಪ್ರಶಸ್ತಿಗೆ ಆಯ್ಕೆಯಾದ 'ವಿಶ್ವರೂಪಂ' ನಟ ಕಮಲ್ ಹಾಸನ್ ಅವರನ್ನು ಇಡೀ ಕಾಲಿವುಡ್ ಚಿತ್ರರಂಗ ಕೊಂಡಾಡಿದೆ.[ಪುಷ್ಪಕವಿಮಾನದಲ್ಲಿ ಟ್ವಿಟ್ಟರ್ ಊರಿಗೆ ಬಂದ ರಾಮ ಶಾಮ ಭಾಮ!]

English summary
Tamil Actor Kamal Haasan has been chosen for the coveted French honor of 'Chevalier' award.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada