»   » ಕಮಲ್ ಹಾಸನ್ ಅವರ ಸಹೋದರ ಚಂದ್ರಹಾಸನ್ ನಿಧನ

ಕಮಲ್ ಹಾಸನ್ ಅವರ ಸಹೋದರ ಚಂದ್ರಹಾಸನ್ ನಿಧನ

Posted By:
Subscribe to Filmibeat Kannada

ಖ್ಯಾತ ನಟ ಕಮಲ್ ಹಾಸನ್ ಅವರ ಹಿರಿಯ ಸೋದರ, ನಿರ್ಮಾಪಕ ಚಂದ್ರಹಾಸನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಚಂದ್ರಹಾಸನ್ ಅವರಿಗೆ 82 ವರ್ಷ ವಯಸ್ಸಾಗಿತ್ತು.

ಇತ್ತೀಚೆಗೆ ಚಂದ್ರಹಾಸನ್ ಅವರು ಲಂಡನ್‌ ನಲ್ಲಿ ತಮ್ಮ ಮಗಳು ಅನು ಹಾಸನ್ ಅವರ ಜೊತೆ ನೆಲೆಸಿದ್ದರು. ಅನು ಹಾಸನ್ ನಿವಾಸದಲ್ಲಿ ಅವರು ಹೃದಯಾಘಾತದಿಂದ ಶನಿವಾರ (ಮಾರ್ಚ್ 18) ರಾತ್ರಿ ಕೊನೆಯುಸಿರೆಳೆದಿದ್ದಾರೆ. ಕಳೆದ ಜನವರಿ ತಿಂಗಳಿನಲ್ಲಿಯಷ್ಟೇ ಚಂದ್ರಹಾಸನ್ ಅವರ ಪತ್ನಿ ಗೀತಾಮಣಿ ನಿಧನರಾಗಿದ್ದರು.[ರಾಷ್ಟ್ರಪ್ರಶಸ್ತಿ ವಾಪಸ್: ಕಮಲ್ ಹಾಸನ್ ಹೇಳಿದ್ದೇನು?]

Actor Kamal Haasan's elder brother Chandrahasan passed way

ವೃತ್ತಿಯಲ್ಲಿ ವಕೀಲರಾಗಿದ್ದ ಚಂದ್ರಹಾಸನ್ ತಮಿಳು ಮತ್ತು ತೆಲುಗು ಚಿತ್ರಗಳು ಸೇರಿದಂತೆ ಸುಮಾರು 22 ಚಿತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾದ ರಾಜ್‍ಕಮಲ್ ಫಿಲ್ಮ್ ಇಂಟರ್ ನ್ಯಾಷನಲ್‌ನ ನಿರ್ವಾಹಕರಾಗಿದ್ದರು. ಕಮಲ್ ಹಾಸನ್ ಅಭಿನಯದ 'ವಿಶ್ವರೂಪಂ', ತೂಂಗಾವನಂ' ಮತ್ತು 'ಶಬಾಷ್ ನಾಯ್ಡು' ಅಂತಹ ಸಿನಿಮಾಗಳ ನಿರ್ಮಾಣದಲ್ಲಿ ಚಂದ್ರಹಾಸನ್ ಕಾರ್ಯವಹಿಸಿದ್ದರು.[ಕಮಲ್ ಹಾಸನ್-ಗೌತಮಿಯ 13 ವರ್ಷಗಳ ಸಂಬಂಧ ಅಂತ್ಯ]

ಚಂದ್ರ ಹಾಸನ್ ಅವರ ಪುತ್ರಿ ಅನುಹಾಸನ್ ಖ್ಯಾತ ಟಿವಿ ನಿರೂಪಕಿಯಾಗಿದ್ದಾರೆ. ಇನ್ನು ನಟಿ ಸುಹಾಸಿನಿ ಅವರ ತಂದೆ ಚಾರು ಹಾಸನ್, ಚಂದ್ರ ಹಾಸನ್, ಮತ್ತು ಕಮಲ್ ಹಾಸನ್ ಸಹೋದರರು. ತಮ್ಮ ಹಿರಿಯ ಸಹೋದರನ ನಿಧನದಿಂದ ಕಮಲ್ ಹಾಸನ್ ಅವರ ನಟನೆಯ 'ಶಹಬಾಸ್ ನಾಯ್ಡು' ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿದೆ.

English summary
Actor Kamal Haasan's elder brother Chandrahasan passed way at his daughter Anu Hasan's house in London on Saturday (march 18) night following a massive cardiac arrest.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada