»   » ಆಸ್ಪತ್ರೆಯಿಂದ ಮನೆಗೆ ಮರಳಿದ ಕಮಲ್, ಅಭಿಮಾನಿಗಳ ಹರ್ಷೋದ್ಘಾರ

ಆಸ್ಪತ್ರೆಯಿಂದ ಮನೆಗೆ ಮರಳಿದ ಕಮಲ್, ಅಭಿಮಾನಿಗಳ ಹರ್ಷೋದ್ಘಾರ

Posted By:
Subscribe to Filmibeat Kannada

ಕೆಲವು ದಿನಗಳ ಹಿಂದೆ ಕಾಲು ಮುರಿದುಕೊಂಡು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ನಟ ಕಮಲ್ ಹಾಸನ್ ಅವರು ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಉಳಗನಾಯಗನ್ ಕಮಲ್ ಹಾಸನ್ ಅವರು ಇಂದು (ಆಗಸ್ಟ್ 5th) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ತಮ್ಮ ಆರೋಗ್ಯ ಸುಧಾರಣೆಗಾಗಿ ಪಾರ್ಥಿಸಿದ ತಮ್ಮೆಲ್ಲಾ ಅಭಿಮಾನಿಗಳು ಹಾಗೂ ಆಪ್ತರಿಗೆ ಟ್ವೀಟ್ ಮಾಡುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಇದು ಎರಡನೇ ಬಾರಿ ಶಸ್ತ್ರಚಿಕಿತ್ಸೆ ಆಗಿರುವುದಿಂದ ಕಮಲ್ ಅವರಿಗೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ.[ಕಾಲಿನ ಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಕಮಲ್ ಹಾಸನ್]

Actor Kamal Hassan discharged from hospital

ಕಮಲ್ ಹಾಸನ್ ಮತ್ತವರ ಮಗಳು ನಟಿ ಶ್ರುತಿ ಹಾಸನ್ ಒಂದಾಗಿ ಕಾಣಿಸಿಕೊಂಡಿದ್ದ 'ಸಬಾಶ್ ನಾಯ್ಡು' ಚಿತ್ರದ ಸೆಕೆಂಡ್ ಶೆಡ್ಯೂಲ್ ಜುಲೈನಲ್ಲಿ ಆರಂಭವಾಗಬೇಕಿತ್ತು. ಆದರೆ ಕಮಲ್ ಅವರ ಕಾಲಿಗೆ ಏಟಾದ ಕಾರಣ ಇದೀಗ ಚಿತ್ರೀಕರಣವನ್ನು ಸೆಪ್ಟೆಂಬರ್ ತಿಂಗಳಿಗೆ ಮುಂದೂಡಲಾಗಿದೆ.[ಆರ್ಥಿಕ ಬಿಕ್ಕಟ್ಟಿನಲ್ಲಿ ಕಮಲ್ ಹಾಸನ್ 'ಉತ್ತಮ ವಿಲನ್']

ಇದೀಗ ಕಮಲ್ ಅವರು ಸಂಪೂರ್ಣ ಗುಣಮುಖರಾಗಿ ವಾಪಸಾಗಿರುವುದರಿಂದ, ಅವರ ಕುಟುಂಬ ವರ್ಗ ಸೇರಿದಂತೆ ಅಭಿಮಾನಿಗಳು ಕೂಡ ಫುಲ್ ಖುಷ್ ಆಗಿ ಬಿಟ್ಟಿದ್ದಾರೆ.

Actor Kamal Hassan discharged from hospital

ಜುಲೈ 14, ಗುರುವಾರದಂದು ನಟ ಕಮಲ್ ಹಾಸನ್ ಚೆನ್ನೈನಲ್ಲಿರುವ ತಮ್ಮ ಕಛೇರಿ ಬಳಿ ಮೆಟ್ಟಿಲಿಳಿಯುತ್ತಿದ್ದ ಸಂದರ್ಭದಲ್ಲಿ ಜಾರಿ ಬಿದ್ದು, ಕಾಲಿನ ಮೂಳೆ ಮುರಿದಿತ್ತು.[ಬ್ರಾಹ್ಮಣರು ಗೋಮಾಂಸ ತಿಂದಿದ್ದಾರೆ: ಕಮಲ್ ಹಾಸನ್]

English summary
Actor Kamal Haasan, who was under medical care at a private hospital here over the last week (July 14) due to a leg injury, was discharged on Friday (August 5th) .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada