For Quick Alerts
  ALLOW NOTIFICATIONS  
  For Daily Alerts

  ನೀವು ಕಂಡಿರದ ಕಿಚ್ಚ ಸುದೀಪರ ಇನ್ನೊಂದು ಮುಖ

  By Suneetha
  |

  ಕನ್ನಡದ ಹಲವಾರು ಚಿತ್ರಗಳಿಗೆ ಗ್ರಾಫಿಕ್ ಡಿಸೈನರ್ ಆಗಿದ್ದ 29 ವರ್ಷ ವಯಸ್ಸಿನ 'ನಮ್ ಟೀಮ್' ರವಿ ಅವರು ತೀವ್ರ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಸಿದ್ಧಯ್ಯ ಸರ್ಕಲ್ ಸಮೀಪ ಇರುವ ಹೆಚ್.ಸಿ.ಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮೊನ್ನೆ (ಜನವರಿ 7) ನಿಧನರಾಗಿದ್ದಾರೆ.

  ಕಳೆದ ಕೆಲವು ತಿಂಗಳುಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ರವಿ ಅವರಿಗೆ ಆರ್ಥಿಕ ಸಂಕಷ್ಟ ಇದ್ದ ಕಾರಣ ಸೂಕ್ತ ಚಿಕಿತ್ಸೆ ಮಾಡಲು ಸಾಧ್ಯವಾಗಿರಲಿಲ್ಲ. ಈ ನಡುವೆ ರೋಗ ಉಲ್ಬಣಗೊಂಡು ನಗರದ ಹೆಚ್.ಸಿ.ಜಿ ಕ್ಯಾನ್ಸರ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು.[ನಿಮಗೆ ಗೊತ್ತಿಲ್ಲದ 'ನಲ್ಲ' ಸುದೀಪ್ ಇನ್ನೊಂದು ಮುಖ]

  ತದನಂತರ ಚಿಕಿತ್ಸೆ ಫಲಕಾರಿಯಾಗದೆ ರವಿ ಅವರು ಸಾವನ್ನಪ್ಪಿದ್ದು, ಆಸ್ಪತ್ರೆಯ ಬಿಲ್ ಎರಡೂವರೆ ಲಕ್ಷ ರೂಪಾಯಿಗಳಾಗಿತ್ತು. ಆದರೆ ಬಡಕುಟುಂಬದವರಾದ ರವಿ ಮನೆಯವರು ಅಷ್ಟು ಹಣವನ್ನು ಭರಿಸಲಾಗಲಿಲ್ಲ.[ಕಿಚ್ಚನಿಗೆ ಅಣ್ಣ ಆಗ್ತಾರಂತೆ ಕ್ರೇಜಿಸ್ಟಾರ್..!]

  ಅದಕ್ಕೆ ಆಸ್ಪತ್ರೆಯವರು ಮೃತದೇಹವನ್ನು ಮನೆಯವರಿಗೆ ಹಸ್ತಾಂತರ ಮಾಡದೇ ಆಸ್ಪತ್ರೆಯಲ್ಲಿಯೇ ಇಟ್ಟುಕೊಂಡಿದ್ದರು. ಆದರೆ ಈ ಸಂದರ್ಭದಲ್ಲಿ ವಿಷಯ ತಿಳಿದ ತಕ್ಷಣ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಹಿಂದೂ ಮುಂದು ಯೋಚನೆ ಮಾಡದೇ ಅಷ್ಟು ಹಣವನ್ನು ರವಿ ಅವರ ಅಕೌಂಟ್ ಗೆ ವರ್ಗಾಯಿಸಿದ್ದಾರೆ.['ಬಿಗ್ ಬಾಸ್' ನಿರ್ಣಯದಿಂದ ಮತ್ತೆ ವೀಕ್ಷಕರು ಬೇಸರ]

  ಚಿತ್ರೀಕರಣದ ನಿಮಿತ್ತ ಹೊರರಾಜ್ಯದಲ್ಲಿರುವ ಸುದೀಪ್ ಅವರು ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಇಡೀ ಚಿತ್ರರಂಗದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

  ಸ್ಯಾಂಡಲ್ ವುಡ್ ನ ಅನೇಕ ಕನ್ನಡ ಚಿತ್ರಗಳಿಗೆ ಪೋಸ್ಟರ್ ಡಿಸೈನ್ ಮಾಡಿರುವ 'ನಮ್ ಟೀಮ್' ರವಿ ಅವರಿಗೆ ಚಿತ್ರರಂಗದ ಅನೇಕ ಚಿತ್ರ ತಂಡಗಳೊಂದಿಗೆ ಕೆಲಸ ಮಾಡಿರುವ ಅನುಭವ ಇದೆ.[ಉಪ್ಪಿ-ಕಿಚ್ಚನ ಸಿನಿಮಾ ಶೂಟಿಂಗ್ ದಿನಾಂಕ ಯಾವಾಗ ಗೊತ್ತಾ?]

  ರಿಯಲ್ ಸ್ಟಾರ್ ಉಪೇಂದ್ರ ಅವರ ಹೆಚ್ಚಿನ ಚಿತ್ರಗಳಿಗೆ ಇವರೇ ಪೋಸ್ಟರ್ ಡಿಸೈನ್ ಮಾಡಿದ್ದು, ಇತ್ತೀಚೆಗೆ ಬ್ಲಾಕ್ ಬಸ್ಟರ್ ಹಿಟ್ ಆದ 'ಉಪ್ಪಿ 2' ಪೋಸ್ಟರ್ ಕೂಡ ಇವರೇ ಡಿಸೈನ್ ಮಾಡಿದ್ದರು.

  English summary
  Kannada Actor Sudeep helped to Graphics designer Ravi family. Ravi was suffering from cancer and he was in the fourth stage. Ravi who was 29 years old died in HCG Hospital. He will be cremated 7th January evening.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X