For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಲಿರುವ ಕೋಮಲ್

  By Rajendra
  |

  ಹಾಸ್ಯ ನಟ ಕೋಮಲ್ ಕುಮಾರ್ ಗರಂ ಆಗಿದ್ದಾರೆ. ಸ್ಯಾಂಡಲ್ ವುಡ್ ಚಿತ್ರರಂಗದ ಬಗ್ಗೆ ಅವರು ಕಿಡಿಕಿಡಿಯಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಅವರು ಹಿಂದೆಮುಂದೆ ನೋಡುತ್ತಿಲ್ಲ. ಪಕ್ಕದ ತಮಿಳುನಾಡು ಚಿತ್ರರಂಗದಲ್ಲಿ ಸೆಟ್ಲ್ ಆಗುವ ಮಾತುಗಳನ್ನೂ ಆಡಿದ್ದಾರೆ.

  ತಮ್ಮ ಇತ್ತೀಚಿನ ಚಿತ್ರಗಳು ಸಾಲುಸಾಲಾಗಿ ಮಕಾಡೆ ಮಲಗುತ್ತಿವೆ. ಸೋಲು ಎಂಬುದು ಯಾವ ನಾಯಕ ನಟನಿಗಿಲ್ಲ ಹೇಳಿ. ಅದೇ ರೀತಿ ನನ್ನ ಚಿತ್ರಗಳು ಉದ್ದಂಡ ಮಲಗಿದವು. ನಾನು ಸದಾ ನಿರ್ಮಾಪಕರ ಬೆನ್ನಿಗೆ ನಿಂತವನು. ಕಡೆಗೆ ನಿರ್ಮಾಪಕರೇ ನನ್ನ ಬೆನ್ನಿಗೆ ಚೂರಿ ಹಾಕಿದರು ಎಂದು ಕೋಮಲ್ ಕಣ್ಣೀರಿಟ್ಟಿದ್ದಾರೆ. [ಕನ್ನಡಕ್ಕೆ ಕೋಮಲ್ ಜೊತೆ ತೆಲುಗು ಹಾಸ್ಯನಟ ಆಲಿ]

  ಇತ್ತೀಚೆಗೆ ಅವರ 'ಡೀಲ್ ರಾಜ' ಚಿತ್ರ ಸೆಟ್ಟೇರಿದ ಸಂದರ್ಭದಲ್ಲಿ ಈ ನೋವನ್ನು ಮಾಧ್ಯಮಗಳ ಮುಂದೆ ಕೋಮಲ್ ತೋಡಿಕೊಂಡರು. ನಿರ್ಮಾಪಕರನ್ನು ಅತಿಯಾಗಿ ನಂಬಿ ಅವರಿಗೆ ಕೇಳಿದಾಗಲೆಲ್ಲಾ ದುಡ್ಡು ಕೊಟ್ಟಿದ್ದೇನೆ. ಇದುವರೆಗೂ ಆರು ಕೋಟಿ ಹಣ ಕೈಜಾರಿದೆ. ನಯಾ ಪೈಸೆ ವಾಪಸ್ ಬಂದಿಲ್ಲ ಎಂದು ಕಣ್ಣೊರೆಸಿಕೊಂಡಿದ್ದಾರೆ ಕೋಮಲ್.

  ಕೊನೆಯ ಪ್ರಯತ್ನವಾಗಿ 'ನಮೋ ಭೂತಾತ್ಮ' ಚಿತ್ರ ಮಾಡುತ್ತಿದ್ದೇನೆ. ಇದೂ ಸೋತರೆ ಕನ್ನಡ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ತಮಿಳು ಚಿತ್ರರಂಗದಲ್ಲಿ ಸೆಟ್ಲ್ ಆಗುತ್ತೇನೆ ಎಂದು ತುಂಬು ನೋವಿನಲ್ಲಿ ಕೋಮಲ್ ಹೇಳಿದ್ದಾರೆ.

  ಕೋಮಲ್ ತಮಿಳಿಗೆ ಹೋದರೆ ನಿಜಕ್ಕೂ ಸೂಪರ್ ಡೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಅವರು ಮತ್ತೊಬ್ಬ ವಡಿವೇಲು ಆಗಿ ತಮಿಳು ಚಿತ್ರರಂಗ ಬೆಳಗುತ್ತಾರೆ. ಎಲ್ಲಾದರು ಇರು ಎಂತಾದರು ಇರು ಎಂದಿದೆಂದಿಗು ನೀ ಕನ್ನಡವಾಗಿರು ಎಂದು ಅಭಿಮಾನಿಗಳೂ ನೋವಿನಿಂದ ಹೇಳುತ್ತಿದ್ದಾರೆ. (ಫಿಲ್ಮಿಬೀಟ್ ಕನ್ನಡ)

  English summary
  Kannada films comedy actor Komal upset with Sandalwood film producers. Kannada film industry. Till now the actor lost nearly six crores for helping producers. Now he plans to walk out of Kannada film industry and settle down in Tamil film industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X