ನಟ ಮೋಹನ್‌ಲಾಲ್ ಮನೆಯಲ್ಲಿ ಆನೆದಂತ ಪತ್ತೆ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೊಚ್ಚಿಯ ಕೊಚ್ಚಿನಾಡ್ ಅರಣ್ಯಾಧಿಕಾರಿ ಪೆರಂಬೂರು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ. ವನ್ಯಜೀವಿ ರಕ್ಷಣಾ ಕಾಯಿದೆ 1972ರಡಿ ಪ್ರಕರಣ ದಾಖಲಾಗಿದೆ.
2010ರಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮೋಹನ್‌ಲಾಲ್ ನಿವಾಸದ ಮೇಲೆ ದಾಳಿ ನಡೆಸಿದಾಗ ಆನೆದಂತ ಪತ್ತೆಯಾಗಿತ್ತು. ಪಿಎನ್ ಕೃಷ್ಣಕುಮಾರ್, ಎನ್ ಕೃಷ್ಣಕುಮಾರ್ ಎಂಬ ಎರಡು ಮತ್ತು ಮೂರನೇ ಆರೋಪಿಗಳ ಪ್ರಕಾರ, ಈ ಆನೆದಂತವನ್ನು ಅರಣ್ಯ ಇಲಾಖೆಯ ಅಪ್ಪಣೆ ಮೇರೆಗೆ ಇಟ್ಟುಕೊಳ್ಳಲಾಗಿತ್ತು.
ಇವರಿಬ್ಬರೂ ವಿದೇಶಕ್ಕೆ ಹೋಗುತ್ತಿದ್ದ ಸಲುವಾಗಿ ಆನೆದಂತವನ್ನು ಮೋಹನ್‌ಲಾಲ್ ಅವರ ವಶಕ್ಕೆ ನೀಡಿ ಹೋಗಿದ್ದರು. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನೂ ಮೋಹನ್ ಲಾಲ್‌ಗೆ ನೀಡಲಾಗಿತ್ತಂತೆ. ಮೋಹನ್‌ಲಾಲ್ ಮನೆ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸೆಕ್ಷನ್ 44(6)ರಡಿ ಪ್ರಕರಣ ದಾಖಲಿಸಿಕೊಂಡಿದೆ. (ಪಿಟಿಐ)
More from Filmibeat
English summary
A case has been registered against Malayalam superstar Mohanlal in connection with seizure of ivory from his house by Income Tax officials in 2010. Forest officials registered the case against Mohanlal and two others, filing the first information report (FIR) before chief judicial magistrate at Perumbavoor on Thursday.


Click it and Unblock the Notifications











