For Quick Alerts
  ALLOW NOTIFICATIONS  
  For Daily Alerts

  ತಬಲ ನಾಣಿ ನಿರ್ಮಾಣ.. ನೆನಪಿರಲಿ ಪ್ರೇಮ್ ಸ್ಪೆಷಲ್ ರೋಲ್: ಯಾವುದೀ ಸಿನಿಮಾ?

  |

  ನೆನಪಿರಲಿ ಪ್ರೇಮ್ ಇತ್ತೀಚೆಗೆ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ, ಅವರ ಅಭಿಮಾನಿಗಳಿಗೆ ಪ್ರೇಮ್ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಆಸೆ. ಆ ಆಸೆ ಕೊನೆಗೂ ಈಡೇರಿದೆ.

  ನೆನಪಿರಲಿ ಪ್ರೇಮ್ ಹೊಸ ಸಿನಿಮಾ ಇಂದು(ಜನವರಿ 23) ಸೆಟ್ಟೇರಿದೆ. ಈಗಾಗಲೇ 'ಜೂಟಾಟ' ಹಾಗೂ 'ಗುಬ್ಬಚ್ಚಿ' ಅಂತಹ ಸಿನಿಮಾಗಳನ್ನ ನಿರ್ದೇಶಿಸಿರೋ ಅಥರ್ವ ಆರ್ಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಇವರ ಮೂರನೇ ಸಿನಿಮಾ ಕೂಡ ಹೌದು.

  "ಎದುರಾಳಿಗಳು ಏನಾದರೂ ಮಾಡಿಕೊಳ್ಳಲಿ.. ಅವ್ರಿಂದ ಬಾಸ್ ಆರ್ಮಿಯನ್ನು ತಡೆಯೋಕೆ ಆಗುತ್ತಾ?"

  ಹಾಗಂತ ಈ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಹೀರೊ ಅಲ್ಲ. ಹಾಗಂತ ಗೆಸ್ಟ್ ರೋಲ್ ಕೂಡ ಅಲ್ಲ. ಒಂದು ವಿಶಿಷ್ಟ ಪಾತ್ರದಲ್ಲಿ ನೆನಪಿರಲಿ ಪ್ರೇಮ್ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಈ ಸಿನಿಮಾದಲ್ಲಿ ಸಂಜಯ್ ಹಾಗೂ ಜೀವಿತ ವಸಿಷ್ಠ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆ ನೆನಪಿರಲಿ ಪ್ರೇಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ.

  ಈ ಸಿನಿಮಾ ಬಗ್ಗೆ ಹೇಳುವುದಕ್ಕೆ ಮತ್ತೊಂದು ಕಾರಣವಿದೆ. ಇದೇ ಮೊದಲ ಬಾರಿಗೆ ಹಾಸ್ಯ ನಟ ತಬಲ ನಾಣಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸ್ನೇಹಿತರೊಂದಿಗೆ ಸೇರಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. "ನೆನಪಿರಲಿ ಪ್ರೇಮ್ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಇಡೀ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಸಿನಿಮಾಗೆ ಸ್ಟೋರಿ ಹಾಗೂ ಡೈರೆಕ್ಷನ್ ಅಥರ್ವ ಆರ್ಯ ಮಾಡುತ್ತಿದ್ದಾರೆ. ಹಾಗೇ ಸಂಭಾಷಣೆ ಜವಾಬ್ದಾರಿಯನ್ನು ನಾನು ಹಾಗೂ ಅಥರ್ವ ಆರ್ಯ ಹೊತ್ತುಕೊಂಡಿದ್ದೇವೆ. ಅಲ್ಲದೆ ಈ ಚಿತ್ರದಲ್ಲಿ ತಂದೆ ಪಾತ್ರ ಮಾಡುತ್ತಿದ್ದೇನೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ 45ರಿಂದ 60 ದಿನಗಳ ಕಾಲ ಶೂಟಿಂಗ್ ನಡೆಯುತ್ತೆ" ಎಂದು ತಬಲ ನಾಣಿ ಮಾಹಿತಿ ನೀಡಿದ್ರು.

  "ಈ ಪ್ರೊಡಕ್ಷನ್ ಹೌಸ್‌ಗೆ ಮೊದಲ ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು ಅನ್ನೋದು ಆಸೆ. ಅದ್ರಂತೆ ಹೊಸ ನಿರ್ದೇಶಕ, ನಟ, ನಟಿಗೆ ಅವಕಾಶ ನೀಡಿದ್ದಾರೆ.ನಾನೂ ಕೂಡ ಈ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಸಿನಿಮಾದ ಕಥೆ ಕೇಳಿ ತುಂಬಾ ಇಷ್ಟ ಆಯ್ತು. ಕಥೆಯಲ್ಲಿ ಸಿಕ್ಕಾಪಟ್ಟೆ ಟ್ವಿಸ್ಟ್ ಇದೆ.ನನ್ನ ಪಾತ್ರ ಸಖತ್ ಇಂಟ್ರಸ್ಟಿಂಗ್ ಆಗಿದ್ದು, ಯಾರಿಗೂ ಪಾತ್ರ ಬಿಟ್ಟು ಕೊಡಲೇಬಾರದು ಒಪ್ಪಿಕೊಂಡೆ" ಎನ್ನುತ್ತಾರೆ ಪ್ರೇಮ್.

  ಈ ಸಿನಿಮಾದ ನಾಯಕ ನಟ ಸಂಜಯ್ ಅವಕಾಶ ಸಿಕ್ಕಿದ್ದು ಲವ್ಲಿ ಸ್ಟಾರ್ ಪ್ರೇಮ್ ಅವರಿಂದಲೇ ಅಂತೆ. ಹಾಗೇ ನಟಿ ಜೀವಿತಾ ವಸಿಷ್ಠ ಕೂಡ ಸ್ಯಾಂಡಲ್‌ವುಡ್‌ಗೆ ಹೊಸಬರೇ. ಸಿನಿಮಾದ ಕಾನ್ಸೆಪ್ಟ್ ಅದ್ಭುತವಾಗಿದ್ದು, ಹೊಸಬರಿಗೆ ಒಂದೊಳ್ಳೆ ಅವಕಾಶ ಅನ್ನೋ ಅಭಿಪ್ರಾಯ ಇಬ್ಬರದ್ದು.

  Actor Nenpirali Prem Special Role In New Comers Kannada Movie

  ನಾಗಾರ್ಜುನ ಆರ್ .ಡಿ ಕ್ಯಾಮೆರಾ ವರ್ಕ್, ಆಕಾಶ್ ಪರ್ವ ಸಂಗೀತ ನಿರ್ದೇಶನ, ವೇದಿಕ್ ವೀರ ಸಂಕಲನವಿದೆ. ಬಾಲ ರಾಜ್ವಾಡಿ, ಗಿರೀಶ್ ಜತ್ತಿ ಹಾಗೂ ಮಿತ್ರ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Actor Nenpirali Prem Special Role In New Comers Kannada Movie, Know Movie
  Monday, January 23, 2023, 23:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X