»   » 'ಸವಾರಿ' ನಿರ್ದೇಶಕರ ಜೊತೆ 'ಕ್ವಾಟ್ಲೆ' ಸತೀಶ್ 'ಚಂಬಲ್'ಗೆ ಪಯಣ

'ಸವಾರಿ' ನಿರ್ದೇಶಕರ ಜೊತೆ 'ಕ್ವಾಟ್ಲೆ' ಸತೀಶ್ 'ಚಂಬಲ್'ಗೆ ಪಯಣ

Posted By:
Subscribe to Filmibeat Kannada

'ರಾಕೆಟ್' ಚಿತ್ರದ ಸೋಲಿನಿಂದ ಜರ್ಜರಿತರಾಗಿದ್ದ ನಟ ನೀನಾಸಂ ಸತೀಶ್ ಸದ್ಯಕ್ಕೆ ಕೊಂಚ ಚೇತರಿಸಿಕೊಂಡು 'ಬ್ಯೂಟಿಫುಲ್ ಮನಸುಗಳು' ಚಿತ್ರದ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಮತ್ತೆ 'ಲೂಸಿಯಾ' ಜೋಡಿ ಮೋಡಿ ಮಾಡಿದ್ದು, ನಟಿ ಶ್ರುತಿ ಹರಿಹರನ್ ಅವರು ಸತೀಶ್ ಅವರಿಗೆ ಸಾಥ್ ಕೊಟ್ಟಿದ್ದಾರೆ.

ಇದೀಗ 'ಬ್ಯೂಟಿಫುಲ್ ಮನಸುಗಳು' ಚಿತ್ರದ ಮುಗಿಸಿದ ಬೆನ್ನಲ್ಲೇ ಸದ್ದಿಲ್ಲದೇ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಹಾಕುವ ಮೂಲಕ ಮತ್ತೆ ಅದೃಷ್ಟ ಪರೀಕ್ಷೆ ಎದುರಿಸಲು ಸಿದ್ಧವಾಗಿದ್ದಾರೆ. ಈ ಬಾರಿ ಸತೀಶ್ ಒಪ್ಪಿಕೊಂಡಿರುವ ಚಿತ್ರ 'ಚಂಬಲ್'.['ಬ್ಯೂಟಿಫುಲ್ ಮನಸುಗಳ' ಚಾಯ್ ಪೇ ಚರ್ಚಾ]

Actor Ninasam Satish's next movie with director Jacob Varghese

'ಸವಾರಿ', 'ಪೃಥ್ವಿ' ಮತ್ತು 'ಸವಾರಿ 2' ಚಿತ್ರಗಳ ಖ್ಯಾತಿಯ ನಿರ್ದೇಶಕ ಜೇಕಬ್ ವರ್ಗೀಸ್ ನಿರ್ದೇಶನ ಮಾಡುತ್ತಿರುವ 'ಚಂಬಲ್' ಚಿತ್ರಕ್ಕೆ ಸದ್ಯಕ್ಕೆ ಸತೀಶ್ ಅವರು ಮಾತ್ರ ಆಯ್ಕೆ ಆಗಿದ್ದಾರೆ. ಇನ್ನುಳಿದ ತಾರಾಗಣ ಹಾಗೂ ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ.[ರಾಕೆಟ್ ಚಿತ್ರದ ಲಾಭದಲ್ಲಿ ರೈತರಿಗೆ ಪಾಲು : ನೀನಾಸಂ ಸತೀಶ]

ಅಂದಹಾಗೆ 'ಚಂಬಲ್' ಅನ್ನೋ ವಿಭಿನ್ನ ಹೆಸರು ಕೇಳಿದ ತಕ್ಷಣ ನಿಮಗೆ 'ಚಂಬಲ್ ಕಣಿವೆ' ನೆನಪಾಗಬಹುದು. ಅದಕ್ಕೂ ಈ ಚಿತ್ರಕ್ಕೂ ಸಂಬಂಧ ಇದೆಯಾ ಅಂತ ಕೂಡ ನೀವು ಯೋಚನೆ ಮಾಡಬಹುದು.[ಸೆನ್ಸೇಷನಲ್ ಸುದ್ದಿಯನ್ನು 'ಬಹಿರಂಗ' ಪಡಿಸಿದ ಕ್ವಾಟ್ಲೆ ಸತೀಶ]

Actor Ninasam Satish's next movie with director Jacob Varghese

ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ 'ಚಂಬಲ್' ಚಿತ್ರ ಸೆಟ್ಟೇರುವಾಗ ತಿಳಿದು ಬರಲಿದೆ. 'ಸವಾರಿ 2' ನಂತರ ಯಾವುದೇ ಸಿನಿಮಾಗಳನ್ನು ಕೈಗೆತ್ತಿಕೊಳ್ಳದ ನಿರ್ದೇಶಕ ಜೇಕಬ್ ವರ್ಗೀಸ್ ಅವರು ಇದೀಗ ಕ್ವಾಟ್ಲೆ ಸತೀಶ ಅವರಿಗೆ ಸಿನಿಮಾ ಮಾಡಲು ಹೊರಟಿದ್ದಾರೆ. 'ಚಂಬಲ್' ಚಿತ್ರಕ್ಕೆ ಕಥೆ-ಚಿತ್ರಕಥೆ ಜೊತೆಗೆ ನಿರ್ದೇಶನವನ್ನು ಕೂಡ ಜೇಕಬ್ ಅವರೇ ಮಾಡುತ್ತಿದ್ದಾರೆ.[ತಾಜಾ ಕತೆಯೊಂದಿಗೆ ಮರಳಿದ ಜೇಕಬ್ ವರ್ಗೀಸ್]

English summary
Kannada Actor Ninasam Satish's next movie 'Chambal' with 'Savari 2' fame director Jacob Varghese.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada