For Quick Alerts
  ALLOW NOTIFICATIONS  
  For Daily Alerts

  'ಅಂಬಿ ನಿಂಗ್ ವಯಸ್ಸಾಯ್ತೋ' ನಿರ್ದೇಶಕರ 2ನೇ ಸಿನಿಮಾ ಅನೌನ್ಸ್; ನಾಯಕ ಯಾರು?

  |

  ರೆಬಲ್ ಸ್ಟಾರ್ ಅಂಬರೀಶ್ ನಟನೆಯ ಕೊನೆಯ ಸಿನಿಮಾ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರಕ್ಕೆ ನಿರ್ದೇಶನ ಮಾಡಿ ಕನ್ನಡಿಗರ ಗಮನ ಸೆಳೆದಿದ್ದ ನಿರ್ದೇಶಕ ಗುರುದತ್ ಗಾಣಿಗ, ಇದೀಗ ಎರಡನೇ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.

  ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಬಳಿಕ ಅಭಿಷೇಕ್ ಅಂಬರೀಶ್ ಗೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆದರೆ ಆ ಸಿನಿಮಾ ಸೆಟ್ಟೇರಲಿಲ್ಲ. ಇದೀಗ ಗುರುದತ್ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟನಿಗೆ ಅಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಅದು ಮತ್ಯಾರು ಅಲ್ಲ ನಟ ಪ್ರಜ್ವಲ್ ದೇವರಾಜ್.

  ಪ್ರಜ್ವಲ್ ದೇವರಾಜ್ 'ಅಬ್ಬರ'ಕ್ಕೆ ಮೂವರು ನಾಯಕಿಯರುಪ್ರಜ್ವಲ್ ದೇವರಾಜ್ 'ಅಬ್ಬರ'ಕ್ಕೆ ಮೂವರು ನಾಯಕಿಯರು

  ಹೌದು, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೊತೆ ಸಿನಿಮಾ ಮಾಡಲು ಗುರುದತ್ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿರುವ ಸಿನಿಮಾತಂಡ ಜವರಿಯಲ್ಲಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

  ಚಿತ್ರದಲ್ಲಿ ಪ್ರಜ್ವಲ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಮಾನವ ಕಳ್ಳಸಾಗಾಣಿಕೆಯ ಕುರಿತು ಇರುವ ಕಥೆ ಇದಾಗಿದೆ ಎನ್ನವ ಮಾಹಿತಿ ತಿಳಿದುಬಂದಿದೆ. ಪ್ರಜ್ವಲ್ ಇದುವರೆಗೂ ಕಾಣಿಸಿಕೊಳ್ಳದಂತ ಪಾತ್ರ ಇದಾಗಿದೆ ಎನ್ನಲಾಗುತ್ತಿದೆ.

  ಸದ್ಯ ಚಿತ್ರದ ಕಲಾವಿದರ ಆಯ್ಕೆಯಲ್ಲಿ ನಿರತರಾಗಿರುವ ಸಿನಿಮಾತಂಡ, ಜನವರಿಯಿಂದ ಚಿತ್ರೀಕರಣ ಪ್ರಾರಂಭ ಮಾಡಲು ನಿರ್ಧರಿಸಿದೆ. ಪ್ರಜ್ವಲ್ ದೇವರಾಜ್ ಸದ್ಯ ಇನ್ಸ್ ಪೆಕ್ಟರ್ ವಿಕ್ರಂ, ಅರ್ಜುನ್ ಗೌಡ, ವೀರಂ, ಅಬ್ಬರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಳ ಜೊತೆಗೀಗ ಮತ್ತೊಂದು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

  ಕರ್ನಾಟಕದಿಂದ ಹೊರಗೆ ಜಾಲಿ ರೈಡ್ ಹೊರಟ ದರ್ಶನ್ ಅಂಡ್ ಗ್ರೂಪ್ | Darshan Bike Ride | Filmibeat Kannada

  ಅಂದಹಾಗೆ ಗುರುದತ್ ಮತ್ತು ಪ್ರಜ್ವಲ್ ಸಿನಿಮಾಗೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಚಿತ್ರದ ಟೈಟಲ್ ಏನಾಗಿರಲಿದೆ, ಪ್ರಜ್ವಲ್ ಜೊತೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ. ಪ್ರಜ್ವಲ್ ಕೊನೆಯದಾಗಿ ಜಂಟಲ್ ಮ್ಯನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  English summary
  Actor Prajwal Devaraj and Ambi Ning Vayassaytho fame Gurudatta Ganiga collaborating for an Action Thriller.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X