»   » ಅಭಿಮಾನಿಗೆ ಕೊಟ್ಟ ಮಾತು ಉಳಿಸಿಕೊಂಡ 'ರಾಜಕುಮಾರ'

ಅಭಿಮಾನಿಗೆ ಕೊಟ್ಟ ಮಾತು ಉಳಿಸಿಕೊಂಡ 'ರಾಜಕುಮಾರ'

Posted By:
Subscribe to Filmibeat Kannada

ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪ್ರೀತಿ ಎಂಬ ಪುಟ್ಟ ಬಾಲಕಿ, ಪುನೀತ್ ರಾಜ್ ಕುಮಾರ್ ಅವರನ್ನ ನೋಡಬೇಕು ಎಂಬ ಕೊನೆ ಆಸೆಯನ್ನ ವ್ಯಕ್ತಪಡಿಸಿದ್ದರು. ಈ ವಿಷ್ಯ ತಿಳಿದ ಪುನೀತ್ ಅವರು, ಆ ಬಾಲಕಿಯನ್ನ ಭೇಟಿ ಮಾಡಿ ಮಾತನಾಡಿಸಿದ್ದರು. ಈ ಸ್ಟೋರಿಯನ್ನ ಇತ್ತೀಚೆಗಷ್ಟೇ ನಿಮ್ಮ 'ಫಿಲ್ಮಿ ಬೀಟ್'ನಲ್ಲಿ ಓದೇ ಇರ್ತಿರಾ.[ಸಾವು-ಬದುಕಿನ ಹೋರಾಟದಲ್ಲಿರುವ ಕಂದಮ್ಮನ ಆಸೆ ಈಡೇರಿಸಿದ 'ರಾಜಕುಮಾರ']

ಈಗ ಆ ಪುಟ್ಟ ಅಭಿಮಾನಿಗೆ ಕೊಟ್ಟ ಮಾತಿನಂತೆ 'ರಾಜಕುಮಾರ' ನೆರವಾಗಿದ್ದಾರೆ. ಪ್ರೀತಿಯ ಶಸ್ತ್ರಚಿಕಿತ್ಸೆಗೆ ಪವರ್ ಸ್ಟಾರ್ ಸಹಾಯ ಮಾಡಿದ್ದು, ಆ ಬಾಲಕಿ ಗುಣಮುಖರಾಗುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮುಂದೆ ಓದಿ....

ಅಭಿಮಾನಿಗೆ ನೆರವಾದ 'ರಾಜಕುಮಾರ'

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪ್ರೀತಿಗೆ ಈಗ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ಈ ಆಪರೇಷನ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹಾಯ ಮಾಡಿದ್ದಾರಂತೆ. ಇನ್ನು ಈ ಬಾಲಕಿಗೆ ಅವರ ತಂದೆಯೆ ಕಿಡ್ನಿ ನೀಡುತ್ತಿದ್ದಾರೆ.

ಭರವಸೆ ನೀಡಿದ್ದ ಪುನೀತ್

ಕಳೆದ ತಿಂಗಳು ಪುಟ್ಟ ಬಾಲಕಿ ಪ್ರೀತಿಯನ್ನ ಕರೆಸಿಕೊಂಡು ಆರೋಗ್ಯ ವಿಚಾರಿಸಿದ್ದರು ಪುನೀತ್ ರಾಜ್ ಕುಮಾರ್. ಈ ವೇಳೆ ಪ್ರೀತಿಯ ಆರೋಗ್ಯ ವೆಚ್ಚವನ್ನ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಈಗ ಆ ಮಾತನ್ನ ಉಳಿಸಿಕೊಂಡಿದ್ದಾರೆ.

ಪುನೀತ್ ಅಭಿಮಾನಿ 'ಪ್ರೀತಿ' ಯಾರು?

ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕುಮಾರ್​ ಮತ್ತು ಮಂಜುಳಾ ಎಂಬ ಬಡ ದಂಪತಿಯ ಇಬ್ಬರು ಹೆಣ್ಣು ಮಕ್ಕಳ ಪೈಕಿ ಪ್ರೀತಿ ಕಿರಿಯವಳು. ಪ್ರೀತಿಗೆ ಎರಡು ಕಿಡ್ನಿ ವಿಫಲವಾಗಿವೆ. ಚಿಕಿತ್ಸೆಗೆ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಹಲವು ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿತ್ತು ಈ ಪುಟ್ಟು ಕಂದಮ್ಮ.

ಪುನೀತ್ ಅಂದ್ರೆ ಅಚ್ಚು-ಮೆಚ್ಚು!

ಪ್ರೀತಿಗೆ ನಟ ಪುನೀತ್ ರಾಜ್ ಕುಮಾರ್ ಅಂದ್ರೆ ಅಚ್ಚು-ಮೆಚ್ಚು. ಪುನೀತ್ ಅವರ ಡ್ಯಾನ್ಸ್, ಅವರ ಸಿನಿಮಾಗಳು ಅಂದ್ರೆ ತುಂಬಾ ಇಷ್ಟ. ಪುನೀತ್ ಅವರು ಬಾಲನಟನಾಗಿ ಅಭಿನಯಿಸಿರುವ ಚಿತ್ರಗಳನ್ನ ನೋಡಿ ಮೆಚ್ಚಿಕೊಂಡಿರುವ ಪ್ರೀತಿಗೆ, ಪುನೀತ್ ಅವರನ್ನ ನೋಡಬೇಕು ಎಂಬುದು ಬಹುದಿನಗಳ ಆಸೆಯಾಗಿತ್ತು.

English summary
Actor Puneeth Rajkumar Helps to His Fan Preethi, who is suffering from Kidney failure. Preethi who hails from Davangere.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada