For Quick Alerts
  ALLOW NOTIFICATIONS  
  For Daily Alerts

  ಅರ್ಜುನ್ ಸರ್ಜಾರ 'ಪ್ರೇಮ ಬರಹದಲ್ಲಿ' ಪುನೀತ್ ಇದ್ದಾರಾ?

  By Suneetha
  |

  ಆಕ್ಷನ್-ಕಿಂಗ್ ಅರ್ಜುನ್ ಸರ್ಜಾ ಅವರು ತಮ್ಮ ಮಗಳಿಗಾಗಿ ಮಾಡುತ್ತಿರುವ ರೋಮ್ಯಾಂಟಿಕ್-ಥ್ರಿಲ್ಲರ್ 'ಪ್ರೇಮ ಬರಹ' ಚಿತ್ರದ ಮುಹೂರ್ತ ಭಾನುವಾರ (ಮೇ 22) ದಂದು ಇಡೀ ಸ್ಯಾಂಡಲ್ ವುಡ್ ಸ್ಟಾರ್ ನಟ-ನಟಿಯರ ಸಮ್ಮುಖದಲ್ಲಿ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಅದ್ದೂರಿಯಾಗಿ ನೆರವೇರಿದೆ.

  ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು ಬೆಂಗಳೂರಿನ ಸುತ್ತ-ಮುತ್ತ ಚಿತ್ರೀಕರಣ ನಡೆಯುತ್ತಿದೆ. ಅಂದಹಾಗೆ ಇದೀಗ ಈ ಚಿತ್ರತಂಡದಿಂದ ಹೊರಬಿದ್ದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ, ಈ ಚಿತ್ರದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಉಪಸ್ಥಿತಿಯು ಇರಲಿದೆ.[ಚಿತ್ರಗಳು: ಅದ್ದೂರಿಯಾಗಿ 'ಪ್ರೇಮ ಬರಹ' ಆರಂಭಿಸಿದ ಅರ್ಜುನ್ ಸರ್ಜಾ]

  ಹಾಗಂತ ಈ ಸಿನಿಮಾದಲ್ಲಿ ಪವರ್ ಸ್ಟಾರ್ ನಟಿಸುತ್ತಿಲ್ಲ, ಬದಲಾಗಿ ಈ ಚಿತ್ರದ ಹಾಡೊಂದಕ್ಕೆ ತಮ್ಮ ಧ್ವನಿ ನೀಡಿದ್ದಾರೆ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಧ್ವನಿಯನ್ನು ಎಲ್ಲರೂ ಲಕ್ಕಿ ವಾಯ್ಸ್ ಎನ್ನುತ್ತಿದ್ದಾರೆ. ಜೊತೆಗೆ ಯಾರೇ ಸಿನಿಮಾ ಮಾಡಿದರೂ ಆ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರ ವಾಯ್ಸ್ ಇದ್ದೇ ಇರುತ್ತದೆ.[ಮಗಳಿಗಾಗಿ ಸುಂದರ 'ಪ್ರೇಮ ಬರಹ' ಬರೆಯುತ್ತಿರುವ ಅರ್ಜುನ್ ಸರ್ಜಾ]

  ಇದೀಗ ಅರ್ಜುನ್ ಸರ್ಜಾ ಅವರು ತಾವೇ ಖುದ್ದಾಗಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಹಾಡಲು ಕೇಳಿಕೊಂಡಿದ್ದಾರೆ. ಈಗಾಗಲೇ ಪುನೀತ್ ರಾಜ್ ಕುಮಾರ್ ಅವರು ಹಾಡಿರುವ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದೆ. ಆದ್ದರಿಂದ 'ಪ್ರೇಮ ಬರಹ' ಚಿತ್ರದ ಸನ್ನಿವೇಶವೊಂದಕ್ಕೆ ತಕ್ಕದಾಗುವಂತೆ ಬಹಳ ಮುಖ್ಯವಾದ ಹಾಡೊಂದನ್ನು ಪವರ್ ಸ್ಟಾರ್ ಕೈಯಲ್ಲಿ ಹಾಡಿಸುತ್ತಿದ್ದಾರೆ 'ಆಕ್ಷನ್ ಕಿಂಗ್' ಸರ್ಜಾ ಅವರು.[ಅಪ್ಪನ ಲವ್ ಸ್ಟೋರಿಗೆ, ಮಗಳು ನಾಯಕಿ..!]

  ಈ ಚಿತ್ರದ ಮೂಲಕ ಅರ್ಜುನ್ ಸರ್ಜಾ ಅವರು ತಮ್ಮ ಮಗಳು ತಮಿಳು ನಟಿ ಐಶ್ವರ್ಯ ಅರ್ಜುನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದು, ಇವರಿಗೆ ನಾಯಕನಾಗಿ ಬಿಗ್ ಬಾಸ್ ಖ್ಯಾತಿಯ ಕನ್ನಡ ನಟ ಚಂದನ್ ಅವರು ಮಿಂಚುತ್ತಿದ್ದಾರೆ. ಅಂತೂ ಈ ಚಿತ್ರದಲ್ಲೂ ಪುನೀತ್ ಅವರ ಗಾನ ಬಜಾನ ಕೇಳೋ ಅವಕಾಶ ಅಭಿಮಾನಿಗಳಿಗೆ ಒದಗಿ ಬರಲಿದೆ ಅಂತಾಯ್ತು.

  English summary
  Kannada Actor Puneeth Rajkumar as a singer, who has lent his voice for various actors has for the first time sung for actor Arjun Sarja. He has sung the song for the actor Arjun Sarja's upcoming film 'Prema Baraha'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X