»   » ಡಬ್ಬಿಂಗ್ ಬೇಕು ಎಂದ ರಾಜಮೌಳಿಗೆ ಪುನೀತ್ ರಾಜ್ ಕುಮಾರ್ ತಿರುಗು ಬಾಣ!

ಡಬ್ಬಿಂಗ್ ಬೇಕು ಎಂದ ರಾಜಮೌಳಿಗೆ ಪುನೀತ್ ರಾಜ್ ಕುಮಾರ್ ತಿರುಗು ಬಾಣ!

Posted By: Naveen
Subscribe to Filmibeat Kannada

ಕನ್ನಡದಲ್ಲಿ ಡಬ್ಬಿಂಗ್ ಬೇಕಾ? ಬೇಡವಾ? ಎನ್ನುವ ಕೂಗು ಪದೇ ಪದೇ ಕೇಳಿ ಬರುತ್ತಿದೆ. ಡಬ್ಬಿಂಗ್ ಪರವಾಗಿ ಮತ್ತು ವಿರೋಧವಾಗಿ ಅನೇಕ ರೀತಿಯ ಹೋರಾಟಗಳು ಕನ್ನಡ ನೆಲದಲ್ಲಿ ಆಗಿವೆ. ಈಗ ಮತ್ತೆ ಡಬ್ಬಿಂಗ್ ಪರ ವಿರೋಧದ ಚರ್ಚೆಗಳು ಹುಟ್ಟಿಕೊಂಡಿದೆ.[ಕನ್ನಡಕ್ಕೆ 'ಡಬ್ಬಿಂಗ್' ಬೇಕು, ಅವಕಾಶ ಕೊಡಿ: ರಾಜಮೌಳಿ ಬೆಂಬಲ]

ಇತ್ತೀಚೆಗಷ್ಟೇ 'ಬಾಹುಬಲಿ' ಚಿತ್ರದ ನಿರ್ದೇಶಕ ರಾಜಮೌಳಿ ಬಳ್ಳಾರಿಗೆ ಆಗಮಿಸಿದ್ದರು. ಕುಟುಂಬ ಸಮೇತ ಥಿಯೇಟರ್ ನಲ್ಲಿ ಕೂತು 'ಬಾಹುಬಲಿ' ಸಿನಿಮಾ ನೋಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಾಜಮೌಳಿ ಡಬ್ಬಿಂಗ್ ಪರವಾಗಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.[ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಲಿ- ಟ್ವೀಟ್ ಅಭಿಯಾನ]

ಮತ್ತೊಂದೆಡೆ ಮಂಡ್ಯದಲ್ಲಿ ನಟ ಪುನೀತ್ ರಾಜ್ ಕುಮಾರ್ ಕೂಡ ಡಬ್ಬಿಂಗ್ ಬಗ್ಗೆ ಮಾತನಾಡಿದ್ದು, ನಿರ್ದೇಶಕ ರಾಜಮೌಳಿ ಅಭಿಪ್ರಾಯಕ್ಕೆ ವಿರೋಧವಾದ ಅಭಿಪ್ರಾಯವನ್ನ ಹೊರ ಹಾಕಿದ್ದಾರೆ. ಮುಂದೆ ಓದಿ......

'ಡಬ್ಬಿಂಗ್' ವೈಯಕ್ತಿಕ ನಿರ್ಧಾರ

''ಕನ್ನಡದಲ್ಲಿ ಡಬ್ಬಿಂಗ್ ಬೇಕು ಎಂಬ ಬಗ್ಗೆ ನಿರ್ದೇಶಕ ರಾಜಮೌಳಿ ಅವರು ಮಾತನಾಡಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ ಆಗಿದೆ''. - ಪುನೀತ್ ರಾಜ್ ಕುಮಾರ್, ನಟ ['ಮಜಾ ಟಾಕೀಸ್'ನಲ್ಲಿ 'ರಾಜಕುಮಾರ'ನ ಗೆಲುವು ಸಂಭ್ರಮಿಸಿದ ಪುನೀತ್]

ನಮಗೆ ಡಬ್ಬಿಂಗ್ ಬೇಡ

''ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳು ಖಂಡಿತ ಬೇಡ. ಇದು ಇಡೀ ಕನ್ನಡ ಚಿತ್ರರಂಗದ ಅಭಿಪ್ರಾಯ'' - ಪುನೀತ್ ರಾಜ್ ಕುಮಾರ್, ನಟ[ನಟಿ ಪ್ರಿಯಾಮಣಿ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಏನಂದ್ರು.? ]

ರಾಜಮೌಳಿ ಹೇಳಿದ್ದೇನು?

''ಕನ್ನಡದಲ್ಲಿ ಡಬ್ಬಿಂಗ್ ಮಾಡುವುದು ನಮ್ಮ ಕೈಯಲ್ಲಿ ಇಲ್ಲ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಡಬ್ಬಿಂಗ್ ಬೇಡ ಅಂತ ತೀರ್ಮಾನಿಸಿದೆ. ಆದರೆ, ಇಲ್ಲಿಯೂ ಡಬ್ಬಿಂಗ್ ಬಂದರೆ ಚೆನ್ನಾಗಿರುತ್ತದೆ. ಪ್ರಾದೇಶಿಕ ಭಾಷೆಗಳ ಡಬ್ಬಿಂಗ್ ಗೆ ಅವಕಾಶ ನೀಡಿದರೆ ಒಳ್ಳೆಯದು'' - ರಾಜಮೌಳಿ, ನಿರ್ದೇಶಕ[ಬಾಹುಬಲಿ ನಿರ್ದೇಶಕನಿಗೆ ಅಮಿತಾಬ್ ಬಚ್ಚನ್ ಜೊತೆ ಏನು ಕೆಲಸ?]

ಯಾವಾಗ ನಡೆದ ಘಟನೆ?

ನಿರ್ದೇಶಕ ರಾಜಮೌಳಿ ಇತ್ತಿಚೆಗಷ್ಟೇ ಬಳ್ಳಾರಿಗೆ ಆಗಮಿಸಿದ್ದರು. 'ಬಾಹುಬಲಿ' ಸಿನಿಮಾದ ಸಕ್ಸಸ್ ಆಚರಣೆಗಾಗಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮದವರ 'ಕನ್ನಡದಲ್ಲಿ ಡಬ್ಬಿಂಗ್ ಬೇಕಾ'... ಎಂಬ ಪ್ರಶ್ನೆಗೆ ರಾಜಮೌಳಿ ಉತ್ತರಿಸಿದ್ದರು.['ರಾಜಕುಮಾರ' ಕಲೆಕ್ಷನ್ ಬಗ್ಗೆ ಅವರಿವರ ಮಾತು ನಂಬಬೇಡಿ: ನಿರ್ದೇಶಕರು ಕೊಟ್ರು ಪಕ್ಕಾ ಲೆಕ್ಕ]

English summary
Kannada actor puneeth rajkumar and director rajamoli spoken about dubbing issue in karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada