»   » ರಾಘಣ್ಣನಿಗೆ ಆಪರೇಷನ್ ಸಕ್ಸಸ್: ಶಿವಣ್ಣ ಹೇಳಿದ್ದೇನು?

ರಾಘಣ್ಣನಿಗೆ ಆಪರೇಷನ್ ಸಕ್ಸಸ್: ಶಿವಣ್ಣ ಹೇಳಿದ್ದೇನು?

Posted By:
Subscribe to Filmibeat Kannada

ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಮಾಡಲಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಈಗವರು ಆರೋಗ್ಯದಿಂದಿದ್ದು ಕೆಲ ದಿನಗಳ ವಿಶ್ರಾಂತಿಗೆ ಸೂಚಿಸಲಾಗಿದೆ ಎಂದು ಆಸ್ಪತ್ರೆಯ ನರರೋಗ ತಜ್ಞೆ ಡಾ.ಮೇಧಾ ಅವರು ಮಾಧ್ಯಮಗಳಿಗೆ ತಿಳಿಸಿದರು.

ಈ ಬಗ್ಗೆ ವಿವರ ನೀಡಿದ ಡಾ.ಮೇಧಾ ಅವರು, "ಮೆದುಳಿನ ನರವ್ಯೂಹದ ಒಂದು ಭಾಗದಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಅದನ್ನು ತೆಗೆದಿದ್ದೇವೆ. ಈಗವರು ಆರಾಮವಾಗಿದ್ದಾರೆ. ಈ ಕ್ಷಣಕ್ಕೆ ನಾವು ಇಷ್ಟು ಮಾಹಿತಿಯನ್ನು ಮಾತ್ರ ಕೊಡಲು ಸಾಧ್ಯ. ಅವರಿಗೆ ಬ್ರೈನ್ ಹ್ಯಾಮರೇಜ್ ಚಿಕಿತ್ಸೆ ನೀಡಲಾಗಿದೆ. ದೇವರ ಕೃಪೆಯಿಂದ ಈಗವರು ಆರಾಮವಾಗಿದ್ದಾರೆ ಆತಂಕಪಡುವ ಅಗತ್ಯವಿಲ್ಲ." ಎಂದು ವಿವರ ನೀಡಿದರು.

Raghavendra Rajkumar

ಆಸ್ಪತ್ರೆಗೆ ಆಗಮಿಸಿದ್ದ ಶಿವರಾಜ್ ಕುಮಾರ್ ಅವರು ಮಾತನಾಡುತ್ತಾ, "ರಾಘಣ್ಣನಿಗೆ ಮೊದಲಿಂದಲೂ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ. ದಪ್ಪ ಆಗಬಾರದು ಎಂದು ಅವನು ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದ. ಇಂದು ಬೆಳಗ್ಗೆ ಅವರು ಜಾಗ್ ಮಾಡುತ್ತಿರಬೇಕಾದರೆ ಎದೆನೋವು ಕಾಣಿಸಿಕೊಂಡಿತು. ಕೂಡಲೆ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದೆವು. ಚಿಕಿತ್ಸೆಗೆ ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ. ಅವರು ಆರಾಮವಾಗಿದ್ದಾರೆ" ಎಂದು ಹೇಳಿದರು.

ಬುಧವಾರ (ಅ.16) ಬೆಳಗ್ಗೆ ರಾಘವೇಂದ್ರ ರಾಜ್ ಕುಮಾರ್ ಅವರು ಕುಸಿದು ಬಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಘಣ್ಣನಿಗೆ ಏನಾಗಿದೆ ಎಂಬ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಈ ಬಗ್ಗೆ ಅವರ ಅಭಿಮಾನಿಗಳಲ್ಲೂ ಆತಂಕ ಮನೆ ಮಾಡಿತ್ತು. ಈಗ ಸ್ವತಃ ಶಿವರಾಜ್ ಕುಮಾರ್ ವಿವರ ನೀಡುವುದರ ಮೂಲಕ ಎಲ್ಲವೂ ನಿರಾಳವಾಗಿದೆ. (ಒನ್ಇಂಡಿಯಾ ಕನ್ನಡ)

English summary
kannada actor and producer Raghavendra Rajkumar, who was diagnosed with Brain Hemorrhage has recovered well, and was discharged from the Columbia Asia Hospital hospital on Wednesday. Raghavendra Rajkumar has been advised complete rest for few days said the Dr.Medha. 
Please Wait while comments are loading...