For Quick Alerts
  ALLOW NOTIFICATIONS  
  For Daily Alerts

  ಯುವ ರಾಜ್ ಕುಮಾರ್ ಸಂಗೀತ ಕಾರ್ಯಕ್ರಮದಲ್ಲಿ ರಾಜ್ ಕುಟುಂಬ

  |
  ಶ್ರೀದೇವಿ ಭೈರಪ್ಪ ಜತೆ ಸಪ್ತಪದಿ ತುಳಿದ ಅಣ್ಣಾವ್ರ ಮೊಮ್ಮಗ | FILMIBEAT KANNADA

  ಡಾ.ರಾಜ್ ಕುಮಾರ್ ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ, ಸಡಗರ ಜೋರಾಗಿದೆ. ರಾಜ್ ಕುಮಾರ್ ಮೊಮ್ಮಗ ರಾಘವೇಂದ್ರ ರಾಜ್ ಕುಮಾರ್ ಎರಡನೆ ಮಗ ಯುವರಾಜ್ ಕುಮಾರ್ ಮದುವೆ ಶಾಸ್ತ್ರಗಳು ಭರ್ಜರಿಯಾಗಿ ನಡೆಯುತ್ತಿದೆ.

  ಈಗಾಗಲೆ ಶಾಸ್ತ್ರಗಳು ಪ್ರಾರಂಭವಾಗಿ ಸುಮಾರು ಆರೇಳು ದಿನಗಳಾಗಿವೆ. ರಾಜ್ ಕುಮಾರ್ ಹುಟ್ಟುರಾದ ಗಾಜನೂರಿನಿಂದ ಪ್ರಾರಂಭವಾದ ಮದುವೆ ಶಾಸ್ತ್ರ ಈಗ ಬೆಂಗಳೂರಿನಲ್ಲಿ ಜೋರಾಗಿ ನಡೆಯುತ್ತಿದೆ.

  ಗಾಜನೂರಿನಲ್ಲಿ ಯುವರಾಜ್ ಕುಮಾರ್ ಮದುವೆ ಸಂಭ್ರಮ ಗಾಜನೂರಿನಲ್ಲಿ ಯುವರಾಜ್ ಕುಮಾರ್ ಮದುವೆ ಸಂಭ್ರಮ

  ಎಣ್ಣೆ ಶಾಸ್ತ್ರ, ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರ, ಸಂಗೀತಾ ಕಾರ್ಯಕ್ರಮ ಸೇರಿದಂತೆ ಅನೇಕ ಶಾಸ್ತ್ರಗಳು ಜೋರಾಗಿ ನಡೆಯುತ್ತಿದ್ದು ಇಡೀ ರಾಜ್ ಕುಟುಂಬ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದೆ. ನಿನ್ನೆ ರಾಘವೇಂದ್ರ ರಾಜ್ ಕುಮಾರ್ ಮನೆಯಲ್ಲಿ ಮೆಹಂದಿ ಶಾಸ್ತ್ರ ಮತ್ತು ಸಂಗೀತ್ ಕಾರ್ಯಕ್ರಮದ ಸಂಭ್ರಮ ರಂಗೇರಿತ್ತು. ಮುಂದೆ ಓದಿ..

  ಟಗರು ಹಾಡಿಗೆ ಪುನೀತ್ - ಶಿವಣ್ಣ ಭರ್ಜರಿ ಡ್ಯಾನ್ಸ್ ಶಿವಣ್ಣ

  ಟಗರು ಹಾಡಿಗೆ ಪುನೀತ್ - ಶಿವಣ್ಣ ಭರ್ಜರಿ ಡ್ಯಾನ್ಸ್ ಶಿವಣ್ಣ

  ಟಗರು ಬಂತು ಟಗರು ಹವಾ ಇನ್ನು ಕಮ್ಮಿ ಆಗಿಲ್ಲ. ಯುವರಾಜ್ ಕುಮಾರ್ ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ 'ಟಗರು' ಹಾಡಿಗೆ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಅಪ್ಪು ಮತ್ತು ಶಿವಣ್ಣ ಜೊತೆಗೆ ಶ್ರೀಮುರಳಿ, ಧೀರನ್ ರಾಮ್ ಕುಮಾರ್ ಸೇರಿದಂತೆ ಇಡೀ ರಾಜ್ ಕುಟುಂಬ ಸಂಗೀತ ಕಾರ್ಯಕ್ರಮದ ಉಲ್ಲಾಸದಲ್ಲಿ ಕುಣಿದು ನಲಿದು ಸಂಭ್ರಮಸಿದ್ದಾರೆ.

  ಹೆಣ್ಮಕ್ಕಳ ಕೈಯಲ್ಲಿ ರಂಗೇರಿತ್ತು ಮದರಂಗಿ

  ಹೆಣ್ಮಕ್ಕಳ ಕೈಯಲ್ಲಿ ರಂಗೇರಿತ್ತು ಮದರಂಗಿ

  ನಿನ್ನೆ ನಡೆದ ಮದರಂಗಿ ಕಾರ್ಯಕ್ರಮದಲ್ಲಿ ರಾಜ್ ಕುಟುಂಬದ ಹೆಣ್ಣುಮಕ್ಕಳ ಕೈಯಲ್ಲಿ ಮದರಂಗಿ ರಂಗೇರಿತ್ತು. ಯುವರಾಜ್ ಕುಮಾರ್ ಅಮ್ಮ ಮಂಗಳ ಅವರು ಕೈತುಂಬ ಮೆಹಂದಿ ಹಾಕಿಕೊಂಡು ಫೋಟೋಗೆ ಫೋಸ್ ನೀಡಿದ್ದಾರೆ. ಇನ್ನು ಯುವರಾಜ್ ಕುಮಾರ್ ಚಿಕ್ಕಪ್ಪ ಮಕ್ಕಳು, ಚಿಕ್ಕಮ್ಮನ ಮಕ್ಕಳು ಸೇರಿದಂತೆ ಎಲ್ಲಾ ಮಹಿಳೆಯರು ಮಹಂದಿ ಹಾಕಿಕೊಂಡು ಸಂತಸ ಪಟ್ಟಿದ್ದಾರೆ.

  ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ 'ಪುಟ್ಟಗೌರಿ' ಖ್ಯಾತಿಯ ಮಹೇಶ್ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ 'ಪುಟ್ಟಗೌರಿ' ಖ್ಯಾತಿಯ ಮಹೇಶ್

  ಶ್ರೀಮುರಳಿ ಮಗಳ ಕೈಯಲ್ಲಿ ಮದರಂಗಿಯ ರಂಗು

  ಶ್ರೀಮುರಳಿ ಮಗಳ ಕೈಯಲ್ಲಿ ಮದರಂಗಿಯ ರಂಗು

  ರೋರಿಂಗ್ ಸ್ಟಾರ್ ಶ್ರೀಮುರಳಿ ಮಗಳು ಅಥೀವಾ ಯುವರಾಜ್ ಕುಮಾರ್ ಮದುವೆ ಸಂಭ್ರಮದಲ್ಲಿ ಜೋರಾಗಿ ಮಿಂಚುತ್ತಿದ್ದಾರೆ. ಮದರಂಗಿ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಮಕ್ಕಳಿಗಂತು ಕೇಳೋದೆ ಬೇಡ. ಯುವರಾಜ್ ಕುಮಾರ್ ಮದುವೆಯಲ್ಲಿ ಶ್ರೀಮುರಳಿ ಮಗಳು ಕೈತುಂಬ ಮೆಹಂದಿ ಹಾಕಿಕೊಂಡ ಸಂತಸದಲ್ಲಿ ಅಪ್ಪನ ಜೊತೆ ನಿಂತು ಫೋಟೋಗೆ ಪೊಸ್ ನೀಡಿದ್ದಾರೆ.

  ಅಪ್ಪು ಮನೆಯಲ್ಲಿ ಅರಿಶಿಣ ಶಾಸ್ತ್ರ

  ಅಪ್ಪು ಮನೆಯಲ್ಲಿ ಅರಿಶಿಣ ಶಾಸ್ತ್ರ

  ಪವರ್ ಸ್ಟಾರ್ ಮನೆಯಲ್ಲಿ ಯುವರಾಜ್ ಕುಮಾರ್ ಅರಿಶಿಣ ಶಾಸ್ತ್ರ ಅದ್ಧೂರಿಯಾಗಿ ನಡೆದಿದೆ. ಇಡೀ ರಾಜ್ ಕುಟುಂಬ ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾಗಿತ್ತು. ಎಣ್ಣೆ ಶಾಸ್ತ್ರ ಮತ್ತು ಅರಿಶಿಣ ಶಾಸ್ತ್ರ ಗಾಜುನೂರಿನಿಂದ ಪ್ರಾರಂಭವಾಗಿ ಶಿವಣ್ಣ, ಪುನೀತ್ ರಾಜ್ ಕುಮಾರ್ ಮನೆ ಸೇರಿದಂತೆ ಯುವರಾಜ್ ಕುಮಾರ್ ಕುಟುಂಬದವರ ಮನೆಯಲ್ಲಿ ಆಚರಿಸಲಾಗಿದೆ. ಅರಿಶಿಣ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವಿನಯ್ ರಾಜ್ ಕುಮಾರ್ ಸೇರಿದಂತೆ ಇಡೀ ರಾಜ್ ಫ್ಯಾಮಿಲಿ ಮೈತುಂಬ ಅರಿಶಿಣ ಹಾಕಿಕೊಂಡು ಸಂಭ್ರಮಿಸಿದ್ದಾರೆ. ಯುವರಾಜ್ ಕುಮಾರ್ ಪ್ರತೀ ಶಾಸ್ತ್ರವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

  ಅರಮನೆ ಮೈದಾನದಲ್ಲಿ ಅದ್ಧೂರಿ ಮದುವೆ

  ಅರಮನೆ ಮೈದಾನದಲ್ಲಿ ಅದ್ಧೂರಿ ಮದುವೆ

  ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಮದುವೆ ಇದೆ ತಿಂಗಳು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಶಿವರಾಜ್ ಕುಮಾರ್ ಮಗಳ ಮದುವೆ ಕೂಡ ಅರಮನೆ ಮೈದಾನದಲ್ಲೇ ಅದ್ಧೂರಿಯಾಗಿ ನೆರವೇರಿತ್ತು. ಈಗ ರಾಘಣ್ಣನ ಮಗನ ಮದುವೆ ಕೂಡ ಅದೆ ಸ್ಥಳದಲ್ಲಿ ನಡೆಯುತ್ತಿದೆ. ಈಗಾಗಲೆ ಯುವ ರಾಜ್ ಕುಮಾರ್ ಮದುವೆಗೆ ಅರಮನೆ ಮೈದಾನ ಸಿದ್ಧವಾಗಿದೆ. 26ರಂದು ಅರಮನೆ ಮೈದಾನ ಯುವರಾಜ್ ಕುಮಾರ್ ಮದುವೆಯಿಂದ ಕಂಕೊಳಿಸಲಿದೆ.

  ಚಿರಂಜೀವಿ ಫ್ಯಾಮಿಲಿಗೆ ರಾಜ್ ಕುಟುಂಬದ ವಿವಾಹ ಆಮಂತ್ರಣಚಿರಂಜೀವಿ ಫ್ಯಾಮಿಲಿಗೆ ರಾಜ್ ಕುಟುಂಬದ ವಿವಾಹ ಆಮಂತ್ರಣ

  ಸಂಜೆ ನಡೆಯಲಿದೆ ಅದ್ಧೂರಿ ಆರತಕ್ಷತೆ

  ಸಂಜೆ ನಡೆಯಲಿದೆ ಅದ್ಧೂರಿ ಆರತಕ್ಷತೆ

  ಮೇ 26ರ ಸಂಜೆ 6.30ರಿಂದ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಆರತಕ್ಷತೆಯಲ್ಲಿ ಚಿತ್ರರಂಗದ ಮತ್ತು ರಾಜಕೀಯ ಗಣ್ಯರು ಸುಂದರ ಮದುವೆ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ. ಇನ್ನು ರಾಜ್ ಮೊಮ್ಮಗನ ಮದುವೆ ಅಂದ್ಮೇಲೆ ಬೇರೆ ಬೇರೆ ಭಾಷೆಯ ಸ್ಟಾರ್ ನಟರು ಸಹ ಭಾಗಿಯಾಗುವ ಸಾಧ್ಯತೆ ಇದೆ.

  English summary
  Actor Puneeth and Shivarajkumar and other family members are performed a dance in the Yuvaraj Kumar Sangeeth ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X