»   » 'ಗೋಧಿ ಬಣ್ಣ' ಚಿತ್ರವನ್ನು ತಂದೆಗೆ ಅರ್ಪಿಸಿದ ರಕ್ಷಿತ್ ಶೆಟ್ಟಿ

'ಗೋಧಿ ಬಣ್ಣ' ಚಿತ್ರವನ್ನು ತಂದೆಗೆ ಅರ್ಪಿಸಿದ ರಕ್ಷಿತ್ ಶೆಟ್ಟಿ

Posted By:
Subscribe to Filmibeat Kannada

ನಿರ್ದೇಶಕ ಹೇಮಂತ್ ಅವರು ನಿರ್ದೇಶನ ಮಾಡಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ಈ ಶುಕ್ರವಾರ (ಜೂನ್ 3)ದಂದು ಎಲ್ಲಾ ಕಡೆ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದ್ದು, ಚಿತ್ರದ ಬಗ್ಗೆ ಎಲ್ಲರೂ ಕುತೂಹಲ ಇಟ್ಟುಕೊಂಡಿದ್ದಾರೆ.

ನಿರ್ಮಾಪಕ ಪುಷ್ಕರ್ ಅವರು ಬಂಡವಾಳ ಹೂಡಿರುವ ಚಿತ್ರದಲ್ಲಿ ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ, 'ಲೂಸಿಯಾ' ಬೆಡಗಿ ಶ್ರುತಿ ಹರಿಹರನ್ ಮತ್ತು ಎವರ್ ಗ್ರೀನ್ ನಟ ಅನಂತ್ ನಾಗ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.[ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್]


Actor Rakshit shetty dedicates 'Godhi Banna' to his father

ಅಂದಹಾಗೆ ನಟ ರಕ್ಷಿತ್ ಶೆಟ್ಟಿ ಅವರು ಈ ಚಿತ್ರವನ್ನು ತಮ್ಮ ತಂದೆಗೆ ಅರ್ಪಿಸುತ್ತಾರಂತೆ. ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಅನಂತ್ ನಾಗ್ ಅವರ ಮಗನ ಪಾತ್ರ ವಹಿಸಿದ್ದಾರೆ. ಅಪ್ಪ ಅನಂತ್ ನಾಗ್ ಅವರು 'ಅಲ್ಜೈಮರ್' ಎಂಬ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದು, ಇದ್ದಕ್ಕಿದ್ದಂತೆ ಒಂದು ದಿನ ಅವರು ಕಾಣೆಯಾಗುತ್ತಾರೆ. ಇದು ಚಿತ್ರದ ಕಥೆ.[ಕ್ರೈಮ್-ಹುಡುಕಾಟಗಳ ನಡುವೆ ಕಳೆದು ಹೋಗುವ ಕಥೆ "GBSM"]


ಸಾಮಾನ್ಯವಾಗಿ ಗಂಡು ಮಕ್ಕಳು ತಮ್ಮ ತಾಯಂದಿರ ಜೊತೆ ಹೆಚ್ಚಾಗಿ ಭಾವನೆಗಳನ್ನು ತೆರೆದಿಡುತ್ತಾರೆ, ಹಾಗಂತ ತಂದೆಯ ಮೇಲೆ ಪ್ರೀತಿ ಇಲ್ಲಾ ಅಂತ ಅಲ್ಲ. ಪ್ರೀತಿ ಇದ್ದರೂ ಅದನ್ನು ಹೊರಗಡೆ ತೋರ್ಪಡಿಸದೆ ಮನಸ್ಸಲ್ಲೇ ಇಟ್ಟುಕೊಂಡಿರುತ್ತಾರೆ.


Actor Rakshit shetty dedicates 'Godhi Banna' to his father

ಚಿತ್ರದಲ್ಲಿ ಕೂಡ ಇದೇ ರೀತಿಯ ಪಾತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅನಂತ್ ನಾಗ್ ಅವರು ಕಳೆದು ಹೋದಾಗ ಅವರನ್ನು ಹುಡುಕಾಡುವ ಭರದಲ್ಲಿ ತಾವೇ ಕಳೆದುಹೋಗುತ್ತಾರೆ.


ಆದ್ದರಿಂದ ಇದೀಗ 'ತಂದೆ-ಮಗನ' ಬಾಂಧವ್ಯ ಇರುವ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಅವರು ತಮ್ಮ ತಂದೆಗೆ ಅರ್ಪಣೆ ಮಾಡಲು ಇಷ್ಟಪಡುತ್ತಾರೆ. ಈ ಮೂಲಕನಾದ್ರೂ ನನ್ನ ತಂದೆ ನನ್ನ ಮನಸ್ಸಿನ ಭಾವನೆ ಅರ್ಥ ಮಾಡಿಕೊಳ್ಳಲಿ ಎನ್ನುತ್ತಾರೆ ರಕ್ಷಿತ್.

English summary
Kannada actor Rakshit shetty plays the role of the son of actor Ananthnag in Kannada movie 'Godhi Banna Sadharna Mykattu'. Actor Rakshit says he is never tell his father how much he love him, So 'Ricky' Actor Rakshit now dedicating the film to his dad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada