For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ಮುಗಿದ ಮೇಲೂ ಹೊರಗೆ ಬರುವುದಿಲ್ಲವಂತೆ ರಕ್ಷಿತ್ ಶೆಟ್ಟಿ!

  |

  ಕೊರೊನಾ ತಂದಿರುವ ಅಚಾನಕ್ ರಜಾ ದಿನಗಳನ್ನು ಹೇಗೆ ಕಳೆಯಬೇಕು ಎಂಬುದೇ ಹಲವರ ಚಿಂತೆಯಾಗಿದೆ. ಮೊದ-ಮೊದಲಿಗೆ ಜೋಶ್‌ ಆಗಿ ಪಾನಿಪೂರಿ, ಕೇಕ್‌ಗಳನ್ನು ಮಾಡಿ ಫೋಟೊ ಅಪ್‌ಲೋಡ್‌ ಮಾಡುತ್ತಿದ್ದವರೂ ಸಹ ಯಾಕೋ ಸುಸ್ತು ಹೊಡೆದಿದ್ದಾರೆ.

  ಲಾಕ್‌ಡೌನ್ ನಡುವೆ ಧೃವ ಸರ್ಜಾ ಸೂಪರ್ ವರ್ಕ್ ಔಟ್ | Dhruva Sarja Workout | Filmibeat Kannada

  ಸ್ಟಾರ್ ನಟ-ನಟಿಯರೂ ಸಹ ಲಾಕ್‌ಡೌನ್‌ ನಿಂದಾಗಿ ಮೊದಲ ಕೆಲ ದಿನಗಳು ಮನೆಯಿಂದ ಹೊರಗೆ ಬಾರದೆ ಹಾಗೋ-ಹೀಗೋ ಕಳೆದರು. ಆದರೆ ದಿನಗಳೆದಂತೆ ಅವರಿಗೂ ಹೊರ ಹೋಗುವ, ಚಿತ್ರೀಕರಣದಲ್ಲಿ ಭಾಗವಹಿಸುವ ಹಪಹಪಿ ಪ್ರಾರಂಭವಾಗಿದೆ.

  ಎಲ್ಲರೂ ಈ ಲಾಕ್‌ಡೌನ್ ಯಾವಾಗ ಮುಗಿಯುತ್ತೋ, ಸ್ವಚ್ಛಂಧವಾಗಿ ಹೊರಗೆ ಯಾವಾಗ ಓಡಾಡುತ್ತೇವೆಯೋ ಎಂದುಕೊಳ್ಳುತ್ತಿರುವಾಗ, ನಟ ರಕ್ಷಿತ್ ಶೆಟ್ಟಿ ಮಾತ್ರ ಇದಕ್ಕೆ ವಿರುದ್ಧ. ಲಾಕ್‌ಡೌನ್ ಮುಗಿದರೂ ಅವರು ಹೊರಗೆ ಬರುವುದು ಅನುಮಾನವೇ?!

  ಕೊರೊನಾ ಸಂಕಷ್ಟದಿಂದಾಗಿ ಒದಗಿಬಂದಿರುವ ಈ ಉಚಿತ ಕಾಲವನ್ನು ಬಹಳ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವ ಸೆಲೆಬ್ರಿಟಿಗಳಲ್ಲಿ ರಕ್ಷಿತ್ ಶೆಟ್ಟಿ ಸಹ ಒಬ್ಬರು. ಈ ಅವಧಿಯಲ್ಲಿ ಅವರು ತಮ್ಮ ಕತೆಯನ್ನು ಪೂರ್ಣಗೊಳಿಸುವುದರಲ್ಲಿ ಪೂರ್ಣವಾಗಿ ತೊಡಿಗಿಸಿಕೊಂಡಿದ್ದಾರೆ.

  ತಾವೇ ಕತೆ ಬರೆದು ನಿರ್ದೇಶಿಸಲಿರುವ ಪುಣ್ಯಕೋಟಿ ಕತೆಯನ್ನು ಪೂರ್ಣಗೊಳಿಸುವ ಕಾರ್ಯದಲ್ಲಿ ರಕ್ಷಿತ್ ಶೆಟ್ಟಿ ತೊಡಗಿಸಿಕೊಂಡಿದ್ದಾರೆ. ಅವರೇ ಹೇಳಿರುವಂತೆ, ಲಾಕ್‌ಡೌನ್ ಮುಗಿದ ಮೇಲೂ ಕತೆ ಮುಗಿಯುವವರೆಗೂ ನನ್ನನ್ನು ನಾನು ಲಾಕ್‌ಡೌನ್ ಗೆ ಒಳಪಡಿಸಿಕೊಳ್ಳಲು ಸಹ ನಾನು ಸಿದ್ಧ ಎಂದಿದ್ದಾರೆ.

   Actor Rakshit Shetty Engaged In Scripting Of A Story

  ಉಳಿದವರು ಕಂಡತೆ ಯಂಥಹಾ ಅತ್ಯುತ್ತಮ ಸಿನಿಮಾ ನೀಡಿದ್ದ ರಕ್ಷಿತ್ ಶೆಟ್ಟಿ ಉತ್ತಮ ಕತೆಗಾರ ಮತ್ತು ನಿರ್ದೇಶಕ. ಇದೀಗ ಪುಣ್ಯಕೋಟಿ ಸಿನಿಮಾಕ್ಕಾಗಿ ರಕ್ಷಿತ್ ಶೆಟ್ಟಿ ಹೆಚ್ಚಿನ ಶ್ರಮವಹಿಸಿದ್ದು, ಈಗಾಗಲೇ ಸುಮಾರು ಅರ್ಧಕ್ಕೂ ಹೆಚ್ಚು ಭಾಗ ಕತೆಯ ರಚನೆ ಮುಗಿಸಿದ್ದಾರೆ. ಲಾಕ್‌ಡೌನ್ ಮುಗಿವ ವೇಳೆಗೆ ಉಳಿದ ಕಥಾಭಾಗವನ್ನು ಮುಗಿಸುವ ಉಮೇದಿನಲ್ಲಿದ್ದಾರೆ.

  ಲಾಕ್‌ಡೌನ್ ಗೆ ಮುನ್ನಾ ಚಾರ್ಲಿ 777 ಸಿನಿಮಾ ಚಿತ್ರೀಕರಣದಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿಯಾಗಿದ್ದರು. ಚಿತ್ರೀಕರಣ ಬಹುತೇಕ ಮುಗಿದಿತ್ತು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇದ್ದಾಗ ಲಾಕ್‌ಡೌನ್ ಪ್ರಾರಂಭವಾದ ಕಾರಣ, ಬಿಡುಗಡೆ ಇನ್ನಷ್ಟು ತಡವಾಗಲಿದೆ.

  ರಕ್ಷಿತ್ ಶೆಟ್ಟಿ ಮತ್ತು ಅವರ ಅಭಿಮಾನಿಗಳು ಬಹುವಾಗಿ ನಿರೀಕ್ಷೆ ಇಟ್ಟಿದ್ದ ಅವನೇ ಶ್ರೀಮನ್ನಾರಾಯಣ ಸಿನಿಮಾ ಅಷ್ಟೇನೂ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಹಾಗಾಗಿ ಪುಣ್ಯಕೋಟಿ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ರಕ್ಷಿತ್ ಶೆಟ್ಟಿ ಕತೆಯನ್ನು ತಿದ್ದಿ ತೀಡಿ ಸಿದ್ಧಪಡಿಸುತ್ತಿದ್ದಾರೆ.

  English summary
  Actor Rakshit Shetty scripting a story for his next directorial venture 'Punyakoti'. He says i will lock myself till i finish work on my story and script.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X