Just In
- 2 hrs ago
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- 3 hrs ago
'ದಳಪತಿ 65' ಸಿನಿಮಾಗೆ ಇವರೇ ನಾಯಕಿ; ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಟ್ರೆಂಡ್
- 4 hrs ago
ಶಿವಣ್ಣನಿಗೆ ಕೃಷ್ಣ-ಮಿಲನಾ ಜೋಡಿಯ ಮದುವೆ ಆಮಂತ್ರಣ- ಡಿ ಬಾಸ್ ಗೆ ಯಾವಾಗ ಕೊಡ್ತೀರಾ ಎನ್ನುತ್ತಿದ್ದಾರೆ ಅಭಿಮಾನಿಗಳು
- 12 hrs ago
ಮತ್ತೆ ಬಾಲಿವುಡ್ಗೆ ಪಯಣ ಬೆಳೆಸಿದ ದುಲ್ಕರ್ ಸಲ್ಮಾನ್
Don't Miss!
- News
ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?
- Finance
34,000 ರುಪಾಯಿ ತನಕ ಕಾರುಗಳ ಬೆಲೆ ಏರಿಕೆ ಮಾಡಿದ ಮಾರುತಿ ಸುಜುಕಿ
- Automobiles
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೋಟೋಗಳು: ಅಕ್ಷಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ
ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿಹಾರಿಕಾ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ಇಂದು (ಡಿಸೆಂಬರ್ 28) ಹಸೆಮಣೆ ಏರಿದ್ದಾರೆ. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ನಿಹಾರಿಕಾ ಮತ್ತು ಅಕ್ಷಯ್ ಮದುವೆ ನೆರವೇರಿದೆ.
ರಮೇಶ್ ಅರವಿಂದ್ ಮನೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಗಳು ನಿಹಾರಿಕಾ ಮದುವೆ ಸಂಭ್ರಮ ಜೋರಾಗಿತ್ತು. ಮೆಹಂದಿ ಶಾಸ್ತ್ರ, ಸಂಗೀತ ಸಮಾರಂಭ ಸೇರಿದಂತೆ ಮದುವೆಯ ಶಾಸ್ತ್ರಗಳು ಜೋರಾಗಿ ನಡೆದಿದೆ. ರಮೇಶ್ ಅರವಿಂದ್ ಮಗಳ ಮದುವೆಯ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಕ್ಷಯ್ ಜೊತೆ ಹಸೆಮಣೆ ಏರಿದ ನಿಹಾರಿಕಾ
ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿಯ ಮುದ್ದಿನ ಮಗಳು ನಿಹಾರಿಕಾ ಗೆಳೆಯ ಅಕ್ಷಯ್ ಜೊತೆ ಸಪ್ತಪದಿ ತುಳಿದಿದ್ದಾರೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅಕ್ಷಯ್, ನಿಹಾರಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ನಿಹಾರಿಕಾ ಮದುವೆ ಸಮಾರಂಭದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದ ಕೆಲವು ಗಣ್ಯರು ಭಾಗಿಯಾಗಿ, ನವ ಜೋಡಿಗೆ ಶುಭಕೋರಿದ್ದಾರೆ.

ಬೆಳಗ್ಗೆ 11ಗಂಟೆ ಮುಹೂರ್ತದಲ್ಲಿ ನಡೆದ ಮದುವೆ
ಇಂದು ಬೆಳಗ್ಗೆ 11 ಗಂಟೆಯಿಂದ 11.30 ಮುಹೂರ್ತದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅಕ್ಷಯ್ ಮತ್ತು ನಿಹಾರಿಕಾ ಪತಿ-ಪತ್ನಿಯರಾಗಿದ್ದಾರೆ. ನಿಹಾರಿಕಾ ಸಾಂಪ್ರದಾಯಿಕ ಉಡುಗೆ ಧರಿಸಿದ್ದರು. ಪಿಂಕ್ ಬಣ್ಣದ ಜರಿ ಸೀರಿಯಲ್ಲಿ ರಮೇಶ್ ಅರವಿಂದ್ ಮುದ್ದಿನ ಪುತ್ರಿ ನಿಹಾರಿಕಾ ಕಂಗೊಳಿಸಿದ್ದಾರೆ. ಇನ್ನು ಮಗಳ ಮದುವೆಯಲ್ಲಿ ರಮೇಶ್ ಅರವಿಂದ್ ಸಾಂಪ್ರದಾಯಿಕ ಉಡುಗೆ ಪಂಚೆ ಶಲ್ಯದಲ್ಲಿ ಮಿಂಚಿದ್ದಾರೆ.

ನಿಹಾರಿಕಾ ಅವರದ್ದು ಲವ್ ಮ್ಯಾರೇಜ್
ನಿಹಾರಿಕಾ ಮತ್ತು ಅಕ್ಷಯ್ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇಬ್ಬರು ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಪ್ರೀತಿಯ ವಿಚಾರವನ್ನು ಮನೆಯವರಿಗೆ ತಿಳಿಸಿ ಮನೆಯರ ಒಪ್ಪಿಗೆ ಪಡೆದು ಹಸೆಮಣೆ ಏರಿದ್ದಾರೆ.

ಸರಳವಾಗಿ ನೆರವೇರಿದ ಮದುವೆ ಸಮಾರಂಭ
ಕೋವಿಡ್ ಇರುವ ಕಾರಣ ನಿಹಾರಿಕಾ ಮದುವೆ ಸರಳವಾಗಿ ನಡೆಯುತ್ತಿದ್ದು ಕೆಲವೇ ಕೆಲವು ಮಂದಿ ಮಾತ್ರ ಹಾಜರಾಗಿದ್ದಾರೆ. ಕುಟುಂಬದವರು ಮತ್ತು ತೀರಾ ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ ಎನ್ನುವ ಸುದ್ದಿ ತಿಳಿದುಬಂದಿದೆ. ಕೊರೊನಾ ಮುನ್ನೆಚ್ಚರಿಕೆಯೊಂದಿಗೆ ಮದುವೆ ನೆರವೇರಿದೆ.

ಜನವರಿಯಲ್ಲಿ ಆರತಕ್ಷತೆ
ಇಂದು ಮದುವೆ ನೆರವೇರಿದರೆ ಜನವರಿ 16ರಂದು ನಿಹಾರಿಕಾ ಮತ್ತು ಅಕ್ಷಯ್ ಅವರ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ರಿಸಪ್ಷನ್ ನಲ್ಲಿ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗವಹಿಸುವ ನಿರೀಕ್ಷೆ ಇದೆ. ರಮೇಶ್ ಅರವಿಂದ್ ಹಾಗೂ ಅರ್ಚನಾ 1991 ಜುಲೈ 7 ರಂದು ವಿವಾಹ ಆಗಿದ್ದರು. ಈ ದಂಪತಿಗೆ ಅರ್ಜುನ್ ಎಂಬ ಒಬ್ಬ ಮಗ ಹಾಗೂ ನಿಹಾರಿಕಾ ಎಂಬ ಒಬ್ಬ ಮಗಳು ಇದ್ದಾರೆ.