For Quick Alerts
  ALLOW NOTIFICATIONS  
  For Daily Alerts

  ವಿಜಯಲಕ್ಷ್ಮಿಯ ಕಿರುಕುಳ ಆರೋಪಕ್ಕೆ ಸ್ಪಷ್ಟನೆ ನೀಡಿದ ನಟ

  |

  ನಟಿ ವಿಜಯಲಕ್ಷ್ಮಿ ಕೆಲ ದಿನಗಳಿಂದ ಆನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಇದ್ದಾರೆ. ಹೀಗಿರುವಾಗ ಇದ್ದಕ್ಕಿದ್ದ ಹಾಗೆ ವಿಜಯಲಕ್ಷ್ಮಿ ಕನ್ನಡ ನಟರೊಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದರು. ನಟ ರವಿ ಪ್ರಕಾಶ್ ತಮಗೆ ಹಿಂಸೆ ನೀಡಿದ್ದಾರೆ ಎಂದು ವಿಡಿಯೋ ಮೂಲಕ ದುಃಖ ಹಂಚಿಕೊಂಡಿದ್ದರು.

  ತಾವು ಆಸ್ಪತ್ರೆಯಲ್ಲಿ ಇದ್ದ ವೇಳೆ ಕಲಾವಿದರಿಗೆ ಹಣ ಸಹಾಯ ಮಾಡಿ ಎಂದು ಕೇಳಿದ್ದೆ. ಈ ವೇಳೆ ಸಾಕಷ್ಟು ನಟರು ನನ್ನ ಸಹಾಯಕ್ಕೆ ಬಂದರು. ಅದೇ ರೀತಿ ಆಸ್ಪತ್ರೆಗೆ ಬಂದು ರವಿ ಪ್ರಕಾಶ್ ಸಹ 1 ಲಕ್ಷ ಹಣ ನೀಡಿದ್ದರು. ಆದರೆ, ಹಣ ನೀಡಿದ್ದೇನೆ ಎನ್ನುವುದನ್ನು ಬೇರೆ ರೀತಿ ಬಳಸಿಕೊಳ್ಳಲು ಶುರು ಮಾಡಿ, ತಮ್ಮ ಜೊತೆಗೆ ಕೆಟ್ಟದಾಗಿ ನಡೆದುಕೊಂಡರು ಎಂದು ವಿಜಯಲಕ್ಷ್ಮಿ ಆರೋಪ ಮಾಡಿದ್ದರು.

  'ಹಣ ನೀಡಿ ಹಿಂಸೆ ನೀಡಿದ್ದಾರೆ' : ನಟನ ಮೇಲೆ ವಿಜಯಲಕ್ಷ್ಮಿ ಆರೋಪ!

  ಅಂದಹಾಗೆ, ತಮ್ಮ ಮೇಲೆ ಬಂದಿರುವ ಈ ಗಂಭೀರ ಆರೋಪದ ಬಗ್ಗೆ ನಟ ರವಿ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ. ತಾವು ಈ ರೀತಿ ಮಾಡಿಲ್ಲ ಎಂದು ತಮ್ಮ ವಿರುದ್ಧ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ. ಮುಂದೆ ಓದಿ...

  ರವಿ ಪ್ರಕಾಶ್ ಸ್ಪಷ್ಟನೆ

  ರವಿ ಪ್ರಕಾಶ್ ಸ್ಪಷ್ಟನೆ

  ''ಮಾಧ್ಯಮಗಳಲ್ಲಿ ನಟಿ ವಿಜಯಲಕ್ಷ್ಮಿ ಅವರ ಸುದ್ದಿ ಬಂದಿದ್ದನ್ನು ನೋಡಿ ಅವರಿಗೆ ಸಹಾಯ ಮಾಡಲು ಮುಂದೆ ಬಂದೆ. ಅವರ ಚಿಕಿತ್ಸೆಗೆ ಒಂದು ಲಕ್ಷ ಹಣ ಸಹಾಯ ಮಾಡಿದೆ. ಬಟ್ಟೆ, ಊಟ, ಹಣ್ಣು, ಮಾತ್ರೆ ಎಲ್ಲವನ್ನು ಮಾನವೀಯತೆ ದೃಷ್ಟಿಯಿಂದ ನೀಡಿದೆ.'' ಎಂದು ಹೇಳಿರುವ ರವಿ ಪ್ರಕಾಶ್ ಈ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

  ಸಹಾಯ ಮಾಡಿದ್ದೆ ತಪ್ಪಾ

  ಸಹಾಯ ಮಾಡಿದ್ದೆ ತಪ್ಪಾ

  ''ನಟಿ ವಿಜಯಲಕ್ಷ್ಮಿ ಅವರ ಪರಿಸ್ಥಿತಿ ಬಗ್ಗೆ ಮಾಧ್ಯಮಗಳಲ್ಲಿ ನೋಡಿ, ಅವರ ಸಹಾಯಕ್ಕೆ ಬಂದೆ. ಅವರನ್ನು ನಾನು ಕೆಟ್ಟ ದೃಷ್ಟಿಯಲ್ಲಿ ನೋಡಿಲ್ಲ. ಅವರ ಬಳಿ ಮಾತಾಡಿರೋ ಕಾಲ್ ರಿಕಾರ್ಡ್, ಮೆಸೇಜ್ ಗಳು ವಿವರ ಎಲ್ಲಾ ನನ್ನ ಬಳಿ ಇದೆ. ನಾನು ಆ ರೀತಿ ನಡೆದುಕೊಂಡಿಲ್ಲ. ಅವರಿಗೆ ಸಹಾಯ ಮಾಡಿದ್ದೆ ತಪ್ಪಾ.?'' ಎಂದಿದ್ದಾರೆ ರವಿ ಪ್ರಕಾಶ್.

  ನಟಿ ವಿಜಯಲಕ್ಷ್ಮಿ ಕಷ್ಟಕ್ಕೆ ಮಿಡಿದ ಕಾರುಣ್ಯ, ಸಂಚಾರಿ ವಿಜಯ್

  ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ

  ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ

  ಮೊದಲು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯಲಕ್ಷ್ಮಿ ಬಳಿಕ ಜಯದೇವ ಆಸ್ಪತ್ರೆಗೆ ಶಿಫ್ಟ್ ಆದರು. ಅದರ ನಂತರ ಈಗ ಬನ್ನೇರುಘಟ್ಟದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ವಿಜಯಲಕ್ಷ್ಮಿ ಈಗಾಗಲೇ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ದೂರು ನೀಡಿದ್ದಾರೆ.

  'ಡೈರೆಕ್ಟರ್ ಸ್ಪೆಷಲ್' ಚಿತ್ರದಲ್ಲಿ ನಟನೆ

  'ಡೈರೆಕ್ಟರ್ ಸ್ಪೆಷಲ್' ಚಿತ್ರದಲ್ಲಿ ನಟನೆ

  ರವಿ ಪ್ರಕಾಶ್ ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದು, ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಮೇಘವೇ ಮೇಘವೇ', 'ರಮ್ಯಾ ಚೈತ್ರ ಕಾಲ' ಹಾಗೂ 'ಡೈರೆಕ್ಟರ್ ಸ್ಪೆಷಲ್' ಸಿನಿಮಾಗಳಲ್ಲಿ ರವಿ ಪ್ರಕಾಶ್ ಕಾಣಿಸಿಕೊಂಡಿದ್ದಾರೆ. ವಿಜಯಲಕ್ಷ್ಮಿಗೆ ಮಾನಸಿಕ ಹಿಂಸೆ ನೀಡಿರುವ ಆರೋಪವನ್ನು ರವಿ ಪ್ರಕಾಶ್ ಎದುರಿಸುತ್ತಿದ್ದಾರೆ.

  English summary
  Kannada actress Vijayalakshmi unhappy with actor Ravi Prakash behavior. She accused that Ravi Prakash is giving problem to her in hospital. Now Ravi Prakash gave a clarification about vijayalakshmi allegation

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X