»   » ಅಭಿಮಾನಿಗಳ ಕ್ಷಮೆ ಕೋರಿದ ಕನಸುಗಾರ ರವಿಚಂದ್ರನ್

ಅಭಿಮಾನಿಗಳ ಕ್ಷಮೆ ಕೋರಿದ ಕನಸುಗಾರ ರವಿಚಂದ್ರನ್

Posted By:
Subscribe to Filmibeat Kannada
Crazy Star Ravichandran
ತನ್ನ ಬಹುನಿರೀಕ್ಷಿತ ಮಂಜಿನಹನಿ ಚಿತ್ರ ಬಿಡುಗಡೆ ವಿಳಂಬವಾಗುತ್ತಿರುವುದಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿಮಾನಿಗಳ ಕ್ಷಮೆಕೋರಿದ್ದಾರೆ. ಚಿತ್ರವನ್ನು ಅದ್ಭುತವಾಗಿ ತೆರೆಗೆ ತರುವ ಉದ್ದೇಶ ಹೊಂದಿದ್ದೇನೆ. ಹೀಗಾಗಿ ಚಿತ್ರ ಬಿಡುಗಡೆ ವಿಳಂಬವಾಗುತ್ತಿದೆ, ಅಭಿಮಾನಿಗಳು ಸಹಕರಿಸಬೇಕೆಂದು ಕೋರಿದ್ದಾರೆ.

ಚಿತ್ರದ 75% ಚಿತ್ರೀಕರಣ ಮುಗಿದಿದೆ. ಮೊದಲ 15ನಿಮಿಷ ಯಾವ ರೀತಿಯಲ್ಲಿ ತೆರೆಗೆ ತರುವುದು ಎನ್ನುವ ವಿಚಾರದಲ್ಲಿ ಗೊಂದಲದಲ್ಲಿದ್ದೇನೆ. ಗ್ರಾಫಿಕ್ಸ್ ಕೆಲಸಗಳು ಹೆಚ್ಚುಕಮ್ಮಿ ಮುಗಿದಿವೆ. ಇಷ್ಟುದಿನ ಕಾದಿದಕ್ಕೂ ಎಲ್ಲರೂ ಒಪ್ಪಿಕೊಳ್ಳುವಂತ ಚಿತ್ರ ನೀಡುತ್ತೇನೆ ಎಂದು ರವಿಚಂದ್ರನ್ ಟಿವಿ9ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರೆಮಲೋಕದಂತಹ ಚಿತ್ರದಿಂದ ಇಂದಿಗೂ ಅಭಿಮಾನಿಗಳು ನನ್ನನ್ನು ಗುರುತಿಸುತ್ತಿದ್ದಾರೆ. ನಾನು ನಿರ್ಮಿಸುವ ಚಿತ್ರಗಳು ವಿಭಿನ್ನವಾಗಿರುತ್ತದೆ, ಕೊಟ್ಟ ಕಾಸಿಗೆ ಮೋಸವಿಲ್ಲ ಎಂದು ಜನ ನನ್ನ ಮೇಲೆ ಭರವಸೆ ಇಟ್ಟಿದ್ದಾರೆ. ನಾನು ಚಿತ್ರ ನಿರ್ಮಿಸುವಾಗ ಒಬ್ಬ ಕಲಾವಿದನಾಗಿ ನನಗೆ ಆತ್ಮಸಂತಸ ಸಿಕ್ಕದರೆ ಮಾತ್ರ ಮುಂದುವರಿಸುತ್ತೇನೆ. ಇಲ್ಲಾಂದ್ರೆ ದುಡ್ಡಿನ ಮುಲಾಜು ನೋಡದೆ ಮತ್ತೆ ಚಿತ್ರೀಕರಿಸುತ್ತೇನೆ ಎಂದಿದ್ದಾರೆ.

ಸುಮಾರು 25 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. ಇನ್ನು ಒಳ್ಳೆ ಒಳ್ಳೆ ತಾಂತ್ರಿಕವಾಗಿ ಶ್ರೀಮಂತವಾಗಿರುವ ಚಿತ್ರವನ್ನು ನೀಡಬೇಕೆಂದಿದ್ದೇನೆ. ನನಗೆ ಸಿನಿಮಾ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ನನ್ನ ಮಗನನ್ನು ಸದ್ಯದಲ್ಲೇ ಚಿತ್ರಂಗಕ್ಕೆ ಪರಿಚಯಿಸುತ್ತೇನೆ. ನನ್ನನ್ನು ಪ್ರೋತ್ಸಾಹಿಸಿ ಬೆಳೆಸಿದಂತೆ ನನ್ನ ಮಗನಿಗೂ ಆಶೀರ್ವಾದ ಮಾಡುತ್ತೀರಾ ಎಂದು ಅಂದುಕೊಂಡಿದ್ದೇನೆ ಎಂದು ರವಿಚಂದ್ರನ್ ಹೇಳಿದ್ದಾರೆ.

English summary
Kannada actor Ravichandran pleads sorry to his fans for the inordinate delay in completion of his next flick " Manjina Hani" ( Due Drops)
Please Wait while comments are loading...