Don't Miss!
- Automobiles
ವೇಗವಾಗಿ ಮುನ್ನುಗ್ಗುತ್ತಿವೆ ಹೀರೋ, ಹೋಂಡಾ... ಹಿಂದೆಯೇ ಬಂತು ಟಿವಿಎಸ್!
- News
World Cancer Day 2023: ವಿಶ್ವ ಕ್ಯಾನ್ಸರ್ ದಿನ- ನಿಮ್ಮ ಜೀವನಶೈಲಿಯಲ್ಲಿರಲಿ ಈ ಬದಲಾವಣೆಗಳು
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಮಲ್ಲ 2' ಮಾಡಲು ರವಿಚಂದ್ರನ್ ಪತ್ನಿಯಿಂದಲೇ ಬೇಡಿಕೆ!
Recommended Video
''ಜನರು ನಮ್ಮಿಂದ ಯಾವ ರೀತಿಯ ಸಿನಿಮಾ ನೋಡಲು ಇಷ್ಟ ಪಡುತ್ತಾರೋ ಅಂತಹ ಸಿನಿಮಾ ಮಾಡಬೇಕು'' ಇದು ರವಿಚಂದ್ರನ್ ನಂಬುವ ಮಾತು. ಈ ಮಾತನ್ನು ಅವರ ಪತ್ನಿ ಸುಮತಿ ಕೂಡ ಒಪ್ಪಿದು, ಅಂತಹ ಸಿನಿಮಾ ಮಾಡಲು ಸಮ್ಮತಿ ಸೂಚಿಸಿದ್ದಾರೆ.
'ಮಲ್ಲ' ಸಿನಿಮಾದ ಬಳಿಕ ರವಿಚಂದ್ರನ್ ನಿರ್ದೇಶನದಲ್ಲಿ ಬಂದ ಯಾವ ಸಿನಿಮಾವೂ ದೊಡ್ಡ ಗೆಲುವು ಕಂಡಿಲ್ಲ. 'ಮಲ್ಲ' ಸಿನಿಮಾದ ನಂತರ ಹೋದ ಫಾರ್ಮ್ ಅನ್ನು ಅದೇ ರೀತಿಯ ಸಿನಿಮಾದ ಮೂಲಕ ಪಡೆಯಬೇಕು ಎನ್ನುವುದು ರವಿಚಂದ್ರನ್ ಪತ್ನಿಯ ಆಸೆ ಆಗಿದೆ.
ರವಿಚಂದ್ರನ್
ಪತ್ನಿ
ಕಣ್ಣೀರು
ಹಾಕಿದ್ದರು
:
ಹಳೆ
ನೆನೆಪು
ಹಂಚಿಕೊಂಡ
ಜಗ್ಗೇಶ್
ಹೀಗಾಗಿ, ರವಿಚಂದ್ರನ್ 'ಮಲ್ಲ 2' ಸಿನಿಮಾ ಮಾಡಲು ಅವರ ಪತ್ನಿಯಿಂದಲೇ ಮೊದಲ ಬೇಡಿಕೆ ಶುರುವಾಗಿದೆ.

ಪತ್ನಿ ಬಗ್ಗೆ ರವಿಚಂದ್ರನ್ ಮಾತು
ಇತ್ತೀಚಿಗಷ್ಟೆ ನಟ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಆಯೋಜಿಸಿದ್ದ ನಾಟಕ ಕಾರ್ಯಕ್ರಮದಲ್ಲಿ ರವಿಚಂದ್ರನ್ ಭಾಗಿಯಾಗಿದ್ದರು. ಆ ದಿನ ಮನೆ ಬಿಡುವ ಮುನ್ನ ಪತ್ನಿ ಹೇಳಿದ್ದ ಮಾತನ್ನು ನೆನಪು ಮಾಡಿಕೊಂಡ ರವಿಚಂದ್ರನ್, 'ಮಲ್ಲ 2' ಬಗ್ಗೆ ಮಾತನಾಡಿದರು. 'ಮಲ್ಲ 2' ಸಿನಿಮಾ ಮಾಡಲು ತಮ್ಮ ಪತ್ನಿಯೇ ಹೇಳುತ್ತಿದ್ದಾರೆ ಎಂದು ನಕ್ಕರು ರವಿಚಂದ್ರನ್.

'ಮಲ್ಲ', 'ರಣಧೀರ' ರೀತಿಯ ಸಿನಿಮಾ ಇಷ್ಟ
ರವಿಚಂದ್ರನ್ ಪತ್ನಿಗೆ 'ಮಲ್ಲ', 'ರಣಧೀರ' ರೀತಿಯ ಸಿನಿಮಾಗಳಲ್ಲಿ ರವಿಚಂದ್ರನ್ ರನ್ನು ನೋಡಲು ಇಷ್ಟವಂತೆ. ಹಾಗಾಗಿ, ಪದೇ ಪದೇ ಇಂತಹ ಸಿನಿಮಾ ಯಾವಾಗ ಮಾಡುತ್ತೀರಿ ಎಂದು ಕೇಳುತ್ತಾರಂತೆ. ಒಬ್ಬ ಕಲಾವಿದ ಆದ ಮೇಲೆ ಜನ ಆಸೆ ಪಡುವ ರೀತಿಯ ಸಿನಿಮಾ ಮಾಡಬೇಕು ಎನ್ನುವ ರವಿಚಂದ್ರನ್ ಮಾತನ್ನು ಅವರು ಪತ್ನಿಯೂ ಒಪ್ಪುತ್ತಾರೆ.
ರವಿಚಂದ್ರನ್
ಮಗಳ
ಅರಿಶಿಣ
ಮತ್ತು
ಮೆಹಂದಿ
ಶಾಸ್ತ್ರದ
ಸಂಭ್ರಮ

'ಮಲ್ಲ 2' ಹೆಸರಿನಲ್ಲಿ ಸಿನಿಮಾ ಮಾಡಿ
'ಮಲ್ಲ' ಸಿನಿಮಾ ನೋಡುವಾಗ ರವಿಚಂದ್ರನ್ ಪತ್ನಿ ಚಿತ್ರಮಂದಿರದಿಂದ ಆಚೆ ಹೋಗಿದ್ದರಂತೆ. ಆದರೆ, ಆ ಬಳಿಯ ಇದು ಸಿನಿಮಾ ಮಾತ್ರ ಎನ್ನುವುದು ಅರ್ಥ ಆಗಿದೆ. ಈಗ ಅವರೇ 'ಮಲ್ಲ' ರೀತಿಯ ಸಿನಿಮಾ ಮಾಡು... 'ಮಲ್ಲ 2' ಎಂಬ ಹೆಸರಿನಲ್ಲಿ ಒಂದು ಸಿನಿಮಾ ಮಾಡಿ ಅಂತ ಆಗಾಗ ಹೇಳುತ್ತಾರಂತೆ. ಆ ಸಿನಿಮಾ ಮಾಡಿದರೆ ಜನ ನೋಡುತ್ತಾರೆ ಎನ್ನುವುದು ಸುಮತಿ ಅವರ ಆಸೆ.

ಕಾಮಿಡಿ ಗಿಂತ ಫಿಲಾಸಫಿ ಹೆಚ್ಚಾಯ್ತು
'ಮಲ್ಲ' ಚಿತ್ರದ ರವಿಚಂದ್ರನ್ ಕಾಮಿಡಿ ಸುಮತಿ ಅವರಿಗೆ ಬಹಳ ಇಷ್ಟ. ಆ ರೀತಿಯ ಕಾಮಿಡಿ ಈಗಿನ ನಿಮ್ಮ ಸಿನಿಮಾದಲ್ಲಿ ಇರುತ್ತಿಲ್ಲ. ಕಾಮಿಡಿ ಬದಲಿಗೆ ಫಿಲಾಸಫಿ ಹೆಚ್ಚಾಗುತ್ತಿದೆ ಎನ್ನುವುದು ರವಿಚಂದ್ರನ್ ಪತ್ನಿ ಅಭಿಪ್ರಾಯ. ರವಿಚಂದ್ರನ್ ಕೂಡ ಈಗ ಏನೇ ಸಿನಿಮಾ ಮಾಡಿದರು, ಒಂದು ತಮಾಷೆಯ ಜೊತೆಗೆ ಒಂದು ವಿಷಯವನ್ನು ಹೇಳಬೇಕು ಎನ್ನುತ್ತಾರೆ.
ರವಿಚಂದ್ರನ್
ಮಗಳು
ಗೀತಾಂಜಲಿ
ಈ
ನಟನ
ಅಭಿಮಾನಿಯಂತೆ

ಪತ್ನಿಯ ಆಸೆಯನ್ನು ಈಡೇರಿಸುತ್ತಾರಾ ಕ್ರೇಜಿಸ್ಟಾರ್
ಪತ್ನಿಯ ಆಸೆಯ ರೀತಿ ಅನೇಕ ರವಿಚಂದ್ರನ್ ಅವರ ಅಭಿಮಾನಿಗಳಿಗೂ 'ಮಲ್ಲ' ರೀತಿಯ ಸಿನಿಮಾ ನೋಡಬೇಕು ಎನ್ನುವ ಆಸೆ ಇರುತ್ತದೆ. ಹೀಗಾಗಿ, ರವಿಚಂದ್ರನ್ 'ಮಲ್ಲ 2' ಹೆಸರಿನಲ್ಲಿ ಸಿನಿಮಾ ಮಾಡುತ್ತಾರೆಯೇ ಎನ್ನುವ ನಿರೀಕ್ಷೆ ಇದೆ. ಸದ್ಯ, ರವಿಚಂದ್ರನ್ 'ರಾಜೇಂದ್ರ ಪೊನ್ನಪ್ಪ' ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಆ ಚಿತ್ರವನ್ನು ಆದಷ್ಟು ಬೇಗ ತೆರೆ ಮೇಲೆ ತರಲಿದ್ದಾರೆ.