For Quick Alerts
  ALLOW NOTIFICATIONS  
  For Daily Alerts

  ಖಳನಟ ರವಿಶಂಕರ್ ಅಪೊಲೋ ಆಸ್ಪತ್ರೆಗೆ ದಾಖಲು

  By Rajendra
  |

  ಕನ್ನಡ, ತೆಲುಗು ಹಾಗೂ ತಮಿಳು ಚಿತ್ರಗಳ ನಟ ಹಾಗೂ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರ ಸಹೋದರ ರವಿಶಂಕರ್ ಅವರು 'ಬಚ್ಚನ್' ಚಿತ್ರೀಕರಣದ ವೇಳೆ ಮಂಗಳವಾರ (ನ.20) ಬೆಂಗಳೂರಿನಲ್ಲಿ ಗಾಯಗೊಂಡಿದ್ದಾರೆ. ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ 'ಬಚ್ಚನ್' ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಅವರು ಗಾಯಗೊಂಡರು.

  ಕೂಡಲೆ ಅವರನ್ನು ಚಿಕಿತ್ಸೆಗಾಗಿ ಸಾಗರ್ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಚಿತ್ರದಲ್ಲಿ ರವಿಶಂಕರ್ ಅವರು ಖಳನಟನಾಗಿ ಅಭಿನಯಿಸುತ್ತಿದ್ದಾರೆ. ಬೆಂಗಳೂರಿನ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಚಿತ್ರದ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತಿತ್ತು.

  ರವಿಶಂಕರ್ ಅವರು ಹಗ್ಗದ ಮೇಲೆ ಸಾಹಸ ಮಾಡುವ ದೃಶ್ಯವನ್ನು ಸೆರೆಹಿಡಿಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವ ಅವರ ಬೆನ್ನಿಗೆ ಬಲವಾದ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ.

  ಶಶಾಂಕ್ ನಿರ್ದೇಶಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಭಾವನಾ, ತುಲಿಪ್ ಜೋಷಿ, ಪಾರುಲ್ ಯಾದವ್, ಆಶಿಶ್ ವಿದ್ಯಾರ್ಥಿ, ಪ್ರದೀಪ್ ರಾವತ್, ಜಗಪತಿ ಬಾಬು ಮುಂತಾದವರಿದ್ದಾರೆ. ಚಿತ್ರದಲ್ಲಿ ಡೈಸಿ ಶಾ ಅವರು ಮಸ್ತ್ ಐಟಂ ಸಾಂಗ್ ಸಹ ಇದೆ.

  ಶೇಖರ್ ಚಂದ್ರು ಅವರ ಛಾಯಾಗ್ರಹಣವಿರುವ 'ಬಚ್ಚನ್' ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತವಿದೆ. ಕನ್ನಡದಲ್ಲಿ ಖಳನಟನಾಗಿ ಗುರುತಿಸಿಕೊಂಡಿರುವ ರವಿಶಂಕರ್ ಅವರು ಇತ್ತೀಚೆಗೆ ಶಿವ ಚಿತ್ರದಲ್ಲಿ ಅಭಿನಯಿಸಿದ್ದರು.

  ದಂಡಂ ದಶಗುಣಂ, ಕೆಂಪೇಗೌಡ, ಕೋಟೆ, ಎದೆಗಾರಿಕೆ, ಟೋಪಿವಾಲ, ಘರ್ಷಣೆ ಮುಂತಾದ ಚಿತ್ರಗಳು ರವಿಶಂಕರ್ ಅಭಿನಯದ ಚಿತ್ರಗಳು. ಕನ್ನಡದ 'ಡಂಡುಪಾಳ್ಯ' (ತೆಲುಗಿನಲ್ಲಿ ದಂಡುಪಾಳ್ಯಂ ಎಂದು ಡಬ್ ಆಗಿದೆ) ಚಿತ್ರದಲ್ಲೂ ಅವರು ಅಭಿನಯಿಸಿದ್ದಾರೆ. (ಏಜೆನ್ಸೀಸ್)

  English summary
  Kannada films actor Ravishankar injured during shooting of a fight sequence of his latest film Bachchan in Bangalore at Abbai naidu studio. He was taken to a Sagar Apollo hospital where he is said to be out of danger. Bachchan is an upcoming Action oriented Kannada film directed by Shashank featuring Sudeep, Bhavana, Tulip Joshi and Parul Yadav in the lead roles. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X