For Quick Alerts
  ALLOW NOTIFICATIONS  
  For Daily Alerts

  ತಮಿಳು, ತೆಲುಗು, ಹಿಂದಿಯಲ್ಲಿ 'ಬೆಲ್ ಬಾಟಂ' : ನಾಯಕರ್ಯಾರು?

  |

  'ಬೆಲ್ ಬಾಟಂ' ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾ. ಫೆಬ್ರವರಿಯಲ್ಲಿ ತೆರೆಕಂಡ 'ಬೆಲ್ ಬಾಟಂ' ಯಶಸ್ವಿ ಪ್ರದರ್ಶನದೊಂದಿಗೆ 50 ದಿನಗಳತ್ತ ಮುನ್ನುಗ್ಗುತ್ತಿದೆ. ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿರುವ ಈ ಚಿತ್ರ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

  ಪ್ರತಿ ಸಿನಿಮಾದಲ್ಲು ಏನಾದರೊಂದು ಹೊಸತನ ನೀಡುವ ನಿರ್ದೇಶಕ ಜಯತೀರ್ಥ, 'ಬೆಲ್ ಬಾಟಂ' ಮೂಲಕವೂ ಹೊಸ ಅಡಿಗೆ ಮಾಡಿ ಪ್ರೇಕ್ಷಕರಿಗೆ ಉಣಬಡಿಸಿದ್ದರೆ. ನಾಯಕ ರಿಷಭ್ ಶೆಟ್ಟಿ ಮತ್ತು ನಾಯಕಿ ಹರಿಪ್ರಿಯಾ ಪಾತ್ರಗಳು ಅಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡಿತ್ತು. ಸದ್ಯ ಕನ್ನಡಿಗರನ್ನು ರಂಜಿಸುತ್ತಿರುವ 'ಬೆಲ್ ಬಾಟಂ' ಪರಭಾಷೆಯಲ್ಲೂ ಮಿಂಚಲು ತಯಾರಾಗುತ್ತಿದೆ.

  ಬಾಲಿವುಡ್ ಗೆ ಹೊರಟ 'ಬೆಲ್ ಬಾಟಮ್', ನಾಯಕ ಯಾರು?

  ಹೌದು, ಈಗಾಗಲೇ ಮೂರು ಭಾಷೆಗೆ ಚಿತ್ರದ ರಿಮೇಕ್ ರೈಟ್ಸ್ ಕೂಡ ಸೋಲ್ಡ್ ಔಟ್ ಆಗಿದೆ. ಡಿಟೆಕ್ಟಿವ್ ದಿವಾಕರ ಮತ್ತು ಕುಸುಮ ಪಾತ್ರಗಳು ಪರಭಾಷ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಗಡಿಗೂ ಮೀರಿ ಹವಾ ಸೃಷ್ಟಿಸಿರುವ ಈ ಚಿತ್ರ ಯಾವ ಯಾವ ಭಾಷೆಯಲ್ಲಿ ಬರ್ತಿದೆ ಹಾಗೂ ಅಲ್ಲಿ ಯಾರ್ ಯಾರು 'ಬೆಲ್ ಬಾಟಂ' ಧರಿಸುತ್ತಾರೆ ಎಂಬ ಮಾಹಿತಿ ಮುಂದಿದೆ ಓದಿ...

  ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲಿ 'ಬೆಲ್ ಬಾಟಂ'

  ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲಿ 'ಬೆಲ್ ಬಾಟಂ'

  ಡಿಟೆಕ್ವಿಟ್ ದಿವಾಕರನ ಕಾಮಿಡಿ ಪಂಚ್ ಗೆ ಕನ್ನಡ ಪ್ರೇಕ್ಷಕರು ಫಿದಾ ಆಗಿದ್ದರು. ಈಗ ಇದೇ ದಿವಾಕರ ಹಿಂದಿ, ತಮಿಳು ಮತ್ತು ತೆಲುಗಿನಲ್ಲೂ ಎಂಟ್ರಿ ಕೊಟ್ಟಿದ್ದಾನೆ. ಈಗಾಗಲೇ ಈ ಮೂರು ಭಾಷೆಗೆ ಚಿತ್ರದ ರಿಮೇಕ್ ರೈಟ್ಸ್ ಸೇಲ್ ಆಗಿದೆ. ಹಿಂದಿಯ ರಿಮೇಕ್ ರೈಟ್ಸ್ ಅನ್ನು ಸಾಹಸ ನಿರ್ದೇಶಕ ರವಿವರ್ಮ ಕೆ ಎನ್ ಎಂಟರ್ ಪ್ರೈಸಸ್ ಕಂಪನಿಯ ಅಡಿಯಲ್ಲಿ 75 ಲಕ್ಷಕ್ಕೆ ಖರೀದಿಸಿದ್ದಾರೆ. ತೆಲುಗಿನಲ್ಲಿ ಅಶ್ವಿನಿ ದತ್ ನಿರ್ಮಾಣ ಸಹಯೋಗ ನೀಡುತ್ತಿದ್ದಾರಂತೆ. ಇನ್ನು ತಮಿಳು ರಿಮೇಕ್ ಹಕ್ಕು ಸಹ ಉತ್ತಮ ಮೊತ್ತಕ್ಕೆ ಸೇಲ್ ಆಗಿದೆ.

  ಸಿದ್ಧರಾಗಿರಿ ಬರ್ತಾ ಇದೆ 'ಬೆಲ್ ಬಾಟಂ ಪಾರ್ಟ್ -2'

  ಬಾಲಿವುಡ್ ನಲ್ಲಿ ದಿವಾಕರನಾದ ಆಯುಷ್ಮಾನ್ ಖುರಾನಾ

  ಬಾಲಿವುಡ್ ನಲ್ಲಿ ದಿವಾಕರನಾದ ಆಯುಷ್ಮಾನ್ ಖುರಾನಾ

  ಬಾಲಿವುಡ್ ನಲ್ಲಿ ಡಿಟೆಕ್ವಿವ್ ದಿವಾಕರನಾಗಿ ನಟ ಆಯುಷ್ಮಾನ್ ಖುರಾನಾ ಕಾಣಿಸಿಕೊಳ್ಳುವ ಸಾದ್ಯತೆ ಇದೆ. ಹಿಂದಿ ರಿಮೇಕ್ ರೈಟ್ಸ್ ಕೊಂಡುಕೊಂಡಿರುವ ಸಾಹಸ ನಿರ್ದೇಶಕ ಮತ್ತು ನಿರ್ದೇಶಕ ರವಿವರ್ಮ ಈಗಾಗಲೇ ಆಯುಷ್ಮಾನ್ ಜೊತೆ ಮಾತನಾಡಿದ್ದಾರಂತೆ. ಆದರೆ, ಆಯುಷ್ಮಾನ್ ಕಡೆಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಇನ್ನು ವಿಶೇಷ ಅಂದ್ರೆ ಹಿಂದಿಯ 'ಬೆಲ್ ಬಾಟಂ'ಗೆ ನಿರ್ದೇಶಕ ರವಿವರ್ಮ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ.

  ರಿಷಬ್ ಶೆಟ್ಟಿ ಪ್ರಕಾರ ಹರಿಪ್ರಿಯಾ ಮದುವೆಯಾಗುವ ಹುಡುಗ ಹೀಗಿರಬೇಕಂತೆ.!

  ತೆಲುಗಿನಲ್ಲಿ ನಾನಿ ಧರಿಸುತ್ತಾರಾ 'ಬೆಲ್ ಬಾಟಂ'

  ತೆಲುಗಿನಲ್ಲಿ ನಾನಿ ಧರಿಸುತ್ತಾರಾ 'ಬೆಲ್ ಬಾಟಂ'

  ತೆಲುಗು ರಿಮೇಕ್ ರೈಟ್ಸ್ ಖರೀದಿಸಿರುವ ಅಶ್ವಿನಿ ದತ್ ಪತ್ತೆದಾರಿ ದಿವಾಕರನ ಪಾತ್ರದಲ್ಲಿ ನಟ ನಾನಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಹೊಂದಿದ್ದಾರಂತೆ. ಹಾಗಾಗಿ ತೆಲುಗಿನ 'ಬೆಲ್ ಬಾಟಂ' ನಲ್ಲಿ ನಾಯಕನಾಗಿ ನಾಣನಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಈ ಬಗ್ಗೆ ಮಾತುಕತೆ ಕೂಡ ಪ್ರಾರಂಭವಾಗಿದ್ದು, ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

  ಕಾಲಿವುಡ್ ನಲ್ಲಿ ಆರ್ಯ ಅಭಿನಯ

  ಕಾಲಿವುಡ್ ನಲ್ಲಿ ಆರ್ಯ ಅಭಿನಯ

  ತಮಿಳಿನಲ್ಲಿ ನಟ ಆರ್ಯ ಪತ್ತೆದಾರಿ ದಿವಾಕರನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನವ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಆರ್ಯ ಜೊತೆ ಮಾತುಕತೆ ಕೂಡ ನಡೆಸಲಾಗಿದೆಯಂತೆ. ಹಾಗಾದರೆ, ಆರ್ಯ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುವುದೊಂದೆ ಬಾಕಿ ಇದೆ. ಹಿಂದಿಯಲ್ಲಿ ನಿರ್ದೇಶಕ ರವಿವರ್ಮ 'ಬೆಲ್ ಬಾಟಂಗೆ' ಆಕ್ಷ್ ಹೇಳಿದ್ರೆ, ತಮಿಳು ಮತ್ತು ತೆಲುಗಿನಲ್ಲಿ ಯಾರು ಎನ್ನುವುದು ಇನ್ನೂ ಫೈನಲ್ ಆಗಿಲ್ಲ.

  English summary
  Actor Rishab Shetty and Haripriya's 'Bell Bottom' movie will remake in bollywood, tollywood,kollywood. Actor Ayushman Khurana will playing lead role in bollywood 'Bell Bottom' film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X