»   » ಸುದೀಪ್ ಬರ್ತ್ ಡೇ ಗೆ ವಿಶ್ ಮಾಡಿದ ಇಬ್ಬರು ಬಾಲಿವುಡ್ ನಟರು ಯಾರು?

ಸುದೀಪ್ ಬರ್ತ್ ಡೇ ಗೆ ವಿಶ್ ಮಾಡಿದ ಇಬ್ಬರು ಬಾಲಿವುಡ್ ನಟರು ಯಾರು?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬವನ್ನ ಸೆಪ್ಟಂಬರ್ 2 ರಂದು ಆಚರಿಸಲಾಯಿತು. ಈ ವರ್ಷ ಬರ್ತ್ ಡೇಯನ್ನ ಸುದೀಪ್ ಆಚರಿಸಿಕೊಂಡಿಲ್ಲವಾದರೂ, ಅವರ ಅಭಿಮಾನಿಗಳು ಮಾತ್ರ ಸಾಮಾಜಿಕ ಕಾರ್ಯಕ್ರಮಗಳನ್ನ ಮಾಡುವ ಮೂಲಕ ಹುಟ್ಟುಹಬ್ಬವನ್ನ ಅದ್ಧೂರಿಯಾಗಿಸಿದರು.

ಇನ್ನು ಸುದೀಪ್ ಹುಟ್ಟುಹಬ್ಬಕ್ಕೆ ಸ್ಯಾಂಡಲ್ ವುಡ್ ನ ಹಲವು ನಟ-ನಟಿಯರು ಶುಭ ಕೋರಿದರು. ಸುದೀಪ್ ಬರಿ ಕನ್ನಡದಲ್ಲಿ ಮಾತ್ರವಲ್ಲ, ತಮಿಳು, ತೆಲುಗು, ಹಿಂದಿಯಲ್ಲೂ ಪರಿಚಿತರು. ಹೀಗಾಗಿ, ಬೇರೆ ಭಾಷೆಯ ಯಾವ ನಟರು ಕಿಚ್ಚನ ಹುಟ್ಟುಹಬ್ಬಕ್ಕೆ ವಿಶ್ ಮಾಡಿರಬಹುದು ಎಂಬ ಕುತೂಹಲ ಕಾಡುವುದು ಸಹಜ.

ಈ ಕುತೂಹಲಕ್ಕೆ ಉತ್ತರ ಸಿಕ್ಕಿದ್ದು, ಬಾಲಿವುಡ್ ಇಬ್ಬರು ನಟರು ಟ್ವಿಟ್ಟರ್ ನಲ್ಲಿ ಸುದೀಪ್ ಗೆ ವಿಶ್ ಮಾಡಿದ್ದಾರೆ. ಯಾರದು? ಮುಂದೆ ಓದಿ.....

ರಿತೇಶ್ ದೇಶ್ ಮುಖ್

ಕಿಚ್ಚ ಸುದೀಪ್ ಗೆ ಟ್ವಿಟ್ಟರ್ ಲೋಕವನ್ನ ಪರಿಚಯಿಸಿದ ಬಾಲಿವುಡ್ ನಟ ರಿತೇಶ್ ದೇಶ್ ಮುಖ್, ತಮ್ಮ ಗೆಳೆಯ ಸುದೀಪ್ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದರು.

ಥ್ಯಾಂಕ್ಸ್ ಹೇಳಿದ ಸುದೀಪ್

ರಿತೇಶ್ ದೇಶ್ ಮುಖ್ ಮಾಡಿದ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸುದೀಪ್, ಬಾಲಿವುಡ್ ನಟನ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.

ಸುನೀಲ್ ಶೆಟ್ಟಿ

ಬಾಲಿವುಡ್ ನ ಮತ್ತೋರ್ವ ನಟ ಸುನೀಲ್ ಶೆಟ್ಟಿ ಅವರು ಕೂಡ ಸುದೀಪ್ ಬರ್ತ್ ಡೇ ವಿಶೇಷವಾಗಿ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ.

ಸುದೀಪ್ ಪ್ರತಿಕ್ರಿಯೆ

ಸುನೀಲ್ ಶೆಟ್ಟಿ ಅವರ ವಿಶ್ ಗೆ ಪ್ರತಿಕ್ರಿಯಿಸಿರುವ ಸುದೀಪ್, ''ನಿಮ್ಮ ಜೀವನದಲ್ಲಿ ನನಗೊಂದು ಸ್ಥಾನ ಕೊಟ್ಟಿರುವುದಕ್ಕೆ ಧನ್ಯವಾದಗಳು ಅಣ್ಣಾ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸೌತ್ ಇಂಡಿಯನ್ ಫ್ಯಾನ್ಸ್ ಕ್ಲಬ್

ಸುದೀಪ್ ಹುಟ್ಟುಹಬ್ಬಕ್ಕೆ ಕೇವಲ ಬಾಲಿವುಡ್ ನಟರು ಮಾತ್ರವಲ್ಲ, ದಕ್ಷಿಣ ಭಾರತದ ಸ್ಟಾರ್ ನಟರ ಅಭಿಮಾನಿಗಳು ಕೂಡ ವಿಶ್ ಮಾಡಿದ್ದಾರೆ. ಅಜಿತ್, ಕಾರ್ತಿ, ಧನುಶ್, ಜೂನಿಯರ್ ಎನ್ ಟಿ ಆರ್, ಪ್ರಭಾಸ್ ಅಭಿಮಾನಿಗಳು ಕೂಡ ಕಿಚ್ಚನ ಬರ್ತ್ ಡೇ ಶುಭ ಕೋರಿದ್ದಾರೆ.

English summary
Bollywood Actor Ritesh Deshmukh and Sunil Shetty wish to Kannada Actor Sudeep for birthday

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada