ಒಂಟಿಯಾಗಿದ್ದ ಸಂಚಾರಿ ವಿಜಯ್ ಜೀವನಕ್ಕೆ ಜಂಟಿ ಸಿಕ್ಕಾಯ್ತು

By Pavithra

ಸಾಕಷ್ಟು ಕನ್ನಡ ಸಿನಿಮಾ ಕಲಾವಿದರು ಬೆಂಗಳೂರಿನಲ್ಲಿ ಒಂಟಿಯಾಗಿ ಜೀವನ ನಡೆಸುತ್ತಾರೆ. ಅದೇ ರೀತಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸಹ ಸಾಕಷ್ಟು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಆದರೆ ಇಷ್ಟು ದಿನ ಮಹಾನಗರದಲ್ಲಿ ಒಂಟಿಯಾಗಿ ಇದ್ದ ಸಂಚಾರಿ ವಿಜಯ್ ಅವರ ಬಾಳಿಗೆ ಜಂಟಿ ಸಿಕ್ಕಾಗಿದೆ.

ಅರೆ, ಜಂಟಿ ಅಂದ್ರೆ ಸಂಚಾರಿ ವಿಜಯ್ ಯಾರನ್ನಾದರೂ ಪ್ರೀತಿ ಮಾಡುತ್ತಿದ್ದಾರಾ? ಅಥವಾ ಮದುವೆಯಾಗುತ್ತಿದ್ದಾರಾ? ಎಂದು ತಲೆ ಕೆಡಿಸಿಕೊಳ್ಳಬೇಡಿ. ಯಾಕೆಂದ್ರೆ ವಿಷ್ಯ ಅದಲ್ಲ. ಹೌದು ಸಂಚಾರಿ ವಿಜಯ್ ಗೆ ಈಗ ಜೊತೆಯಾಗಿ ಒಂದು ಪುಟ್ಟ ನಾಯಿ ಮರಿ ಸಿಕ್ಕಿದೆ. ಮಧ್ಯರಾತ್ರಿ ರಸ್ತೆ ಬದಿ ಒಂಟಿಯಾಗಿ ಅಳುತ್ತಿದ್ದ ಈ ನಾಯಿಮರಿಗೆ ಸಂಚಾರಿ ವಿಜಯ್ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದಾರೆ. ಈ ವಿಚಾರವನ್ನು ಸಂಚಾರಿ ವಿಜಯ್ ಸಂತಸದಿಂದ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Actor Sanchari vijay Adopt Street Dog

ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಸಂಚಾರಿ ವಿಜಯ್ ಬ್ಯುಸಿಯಾಗಿರುವುದರಿಂದ ನಾಯಿಮರಿಯನ್ನು ತಮ್ಮ ಸ್ನೇಹಿತರ ಮನೆಯಲ್ಲಿ ಸಾಕಲು ನೀಡಿದ್ದಾರೆ. ಶೂಟಿಂಗ್ ನಲ್ಲಿ ಬಿಡುವ ಸಿಕ್ಕಾಗ ಆಗಾಗ ಸ್ನೇಹಿತರ ಮನೆಗೆ ಹೋಗಿ ತನ್ನ ಮುದ್ದಾದ ನಾಯಿ ಮರಿಯನ್ನು ನೋಡಿಕೊಂಡು ಬರುತ್ತಿದ್ದಾರೆ. ಉಳಿದಂತೆ, ಸಂಚಾರಿ ವಿಜಯ್ ಈಗ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ಮಲೆಯಾಳಂ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

More from Filmibeat

English summary
National Award Winning Kannada Actor Sanchari vijay Adopt Street Dog.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X