»   » ನೇತ್ರದಾನ ಮಾಡಲು ಮುಂದಾದ ನಟ ಸಂಚಾರಿ ವಿಜಯ್

ನೇತ್ರದಾನ ಮಾಡಲು ಮುಂದಾದ ನಟ ಸಂಚಾರಿ ವಿಜಯ್

Posted By:
Subscribe to Filmibeat Kannada
ರಾಜ್ ಕುಮಾರ್ ಸಾಲಲ್ಲಿ ಸಂಚಾರಿ ವಿಜಯ್ | Filmibeat Kannada

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಈಗ 'ಕೃಷ್ಣ ತುಳಸಿ' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಅಂಧನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದೇ ಪಾತ್ರ ಈಗ ಅವರನ್ನು ನೇತ್ರದಾನ ಮಾಡಲು ಸ್ಪೂರ್ತಿ ನೀಡಿದೆ.

ಸಂಚಾರಿ ವಿಜಯ್ ಈಗ ತಮ್ಮ ಕಣ್ಣುಗಳನ್ನು ದಾನ ಮಾಡಲು ನಿರ್ಧಾರ ಮಾಡಿದ್ದಾರೆ. ಇದಕ್ಕೆ ಒಂದು ಕಾರಣ 'ಕೃಷ್ಣ ತುಳಸಿ' ಸಿನಿಮಾವಾದರೆ ಇನ್ನೊಂದು ಕಡೆ ರಾಜ್ ಕುಮಾರ್ ಅವರಂತೆ. ಅಂದಹಾಗೆ, ಇನ್ನು ಈ ಬಗ್ಗೆ ಮಾತನಾಡಿರುವ ಸಂಚಾರಿ ವಿಜಯ್ 'ನಾನು ಅವನಲ್ಲ ಅವಳು' ಸಿನಿಮಾ ಮಾಡಿದ ಸಮಯದಲ್ಲಿ ಮಂಗಳಮುಖಿಯರ ಸಮಸ್ಯೆಗಳು ಅರ್ಥ ಆಯ್ತು. ಅದೇ ರೀತಿ 'ಕೃಷ್ಣ ತುಳಸಿ' ಸಿನಿಮಾ ಮಾಡಿದಾಗ ಅಂಧರ ಕಷ್ಟಗಳು ಅರ್ಥ ಆಯ್ತು ಎಂದು ಹೇಳಿದ್ದಾರೆ.

Actor sanchari vijay planned to donate his eye

ಸಿನಿಮಾದಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ ನಲ್ಲಿಯೂ ಸಂಚಾರಿ ವಿಜಯ್ ಹೀರೋ ಆಗಿದ್ದಾರೆ. ತಮ್ಮ ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಲಿದ್ದಾರೆ. ಇನ್ನು ಸಂಚಾರಿ ವಿಜಯ್ ನಟನೆಯ 'ಕೃಷ್ಣ ತುಳಸಿ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾವನ್ನು ಸುಕೇಶ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಮೇಘಶ್ರೀ ಚಿತ್ರದ ನಾಯಕಿ ಆಗಿದ್ದಾರೆ. ಚಿತ್ರದಲ್ಲಿ ಸಂಚಾರಿ ವಿಜಯ್ ಅಂಧನಾಗಿರುವ ಒಬ್ಬ ಪ್ರವಾಸಿ ಗೈಡ್ ಪಾತ್ರ ಮಾಡಿದ್ದಾರೆ.

English summary
kannada actor sanchari vijay planned to donate his eye.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X