»   » ಕನ್ನಡದಲ್ಲಿ ಅಧ್ಯಕ್ಷರಾಗಲು ಹೊರಟ ಹಾಸ್ಯ ನಟ ಶರಣ್

ಕನ್ನಡದಲ್ಲಿ ಅಧ್ಯಕ್ಷರಾಗಲು ಹೊರಟ ಹಾಸ್ಯ ನಟ ಶರಣ್

Posted By:
Subscribe to Filmibeat Kannada

ಹಾಸ್ಯ ನಟ ಶರಣ್ ಅವರು ಅಧ್ಯಕ್ಷರಾಗಲು ಹೊರಟಿದ್ದಾರೆ. ಯಾವ ಸಂಘ, ಸಂಸ್ಥೆ ಎಂದಿರಾ? ಅಯ್ಯೋ ಅವರ ಹೊಸ ಚಿತ್ರದ ಹೆಸರೇ 'ಅಧ್ಯಕ್ಷ'. 'ವಿಕ್ಟರಿ' ಚಿತ್ರದ ಯಶಸ್ಸಿನ ಬಳಿಕ ಮತ್ತೆ ಅದೇ ತಂಡ ಮತ್ತೊಂದು ಚಿತ್ರಕ್ಕೆ ರೆಡಿಯಾಗಿರುವುದು ಗೊತ್ತೇ ಇದೆ.

ತಮಿಳಿನ ಯಶಸ್ವಿ ಚಿತ್ರ 'ವರುತಪದತಾ ವಲಿಬಾರ್ ಸಂಘಂ' ಚಿತ್ರದ ರೀಮೇಕ್ ಚಿತ್ರವೇ ಅಧ್ಯಕ್ಷ. ವಿಕ್ಟರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಂದಕಿಶೋರ್ ಚಿತ್ರದ ನಿರ್ದೇಶಕರು. ಬಿ.ಕೆ.ಗಂಗಾಧರ್ ಹಾಗೂ ಬಿ.ಬಸವರಾಜ್ ನಿರ್ಮಿಸುತ್ತಿರುವ ಚಿತ್ರವಿದು. [ವಿಕ್ಟರಿ ಚಿತ್ರವಿಮರ್ಶೆ]

Actor Sharan

ಅರ್ಜುನ್ ಜನ್ಯಾ ಅವರ ಸಂಗೀತ ಇರುವ ಚಿತ್ರಕ್ಕೆ ಸುಧಾಕರ್ ಅವರ ಛಾಯಾಗ್ರಹಣವಿದೆ. ಈ ಚಿತ್ರದ ಹಾಡುಗಳ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಹರ್ಷ, ಇಮ್ರಾನ್, ದಿನೇಶ್ ಹಾಗೂ ಮುರಳಿ ಅವರ ನೃತ್ಯ ಸಂಯೋಜನೆ ಚಿತ್ರಕ್ಕಿದೆ.

ಪಾತ್ರವರ್ಗದಲ್ಲಿ ರವಿಶಂಕರ್, ಸಾಧುಕೋಕಿಲ, ಅವಿನಾಶ್, ಕೀರ್ತಿರಾಜ್, ಗಿರಿಜಾಲೋಕೇಶ್ ಸೇರಿದಂತೆ ಹಲವರಿದ್ದಾರೆ. ಮೇಲುಕೋಟೆ, ಶ್ರವಣಬೆಳಗೊಳ, ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ತಮಿಳಿನ 'ವಲಿಬಾರ್ ಸಂಘಂ' ಚಿತ್ರವನ್ನು ರು.7 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿತ್ತು. ಬಾಕ್ಸ್ ಆಫೀಸಲ್ಲಿ ಈ ಚಿತ್ರ ಸುಮಾರು ರು.30 ಕೋಟಿ ಕಲೆಕ್ಷನ್ ಮಾಡಿತ್ತು.

ಈಗ ಅದೇ ರೀತಿಯ ನಿರೀಕ್ಷೆಗಳು ಕನ್ನಡದ 'ಅಧ್ಯಕ್ಷ'ನ ಮೇಲಿವೆ. ಕಡಿಮೆ ಬಜೆಟ್ ನಲ್ಲಿ ಭರ್ಜರಿ ಫಸಲು ತೆಗೆಯುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಈಗಾಗಲೆ ಶರಣ್ ಪೂರ್ಣಪ್ರಮಾಣದ ನಾಯಕನಾಗಿ 'ರ್‍ಯಾಂಬೋ' ಹಾಗೂ 'ವಿಕ್ಟರಿ' ಮೂಲಕ ಗೆದ್ದಿದ್ದಾರೆ. ಈಗ ಹ್ಯಾಟ್ರಿಕ್ ಹೊಡೆಯುವ ತವಕ ಅವರದು. ಚಿತ್ರಕ್ಕೆ ನಾಯಕಿಯ ಆಯ್ಕೆ ನಡೆಯುತ್ತಿದೆ. (ಏಜೆನ್ಸೀಸ್)

English summary
After Kannada movie 'Victory' success comedy actor Sharan and director Nanda Kishore teamed up again. This time Sharan picked a remake of Tamil film Varuthapadatha Valibar Sangam. Kannada film has been titled 'Adyaksha'.
Please Wait while comments are loading...