For Quick Alerts
  ALLOW NOTIFICATIONS  
  For Daily Alerts

  'Rambo 2' ಬಳಿಕ ಬರ್ತಿದೆ 'ವಿಕ್ಟರಿ 2' : ಶರಣ್ ಗೆ ಜೋಡಿಯಾದ ಅಪೂರ್ವ

  By Naveen
  |
  ಶರಣ್ ಮತ್ತೆ ವಿಕ್ಟರಿ ಅವತಾರದಲ್ಲಿ ಬರಲಿದ್ದಾರೆ..!! | Filmibeat Kannada

  ನಟ ಶರಣ್ 'Rambo 2' ಯಶಸ್ಸಿನ ನಂತರ ರಾಗಿಣಿ ದ್ವಿವೇದಿ ಜೊತೆಗೆ ನಟಿಸುತ್ತಿರುವ ಚಿತ್ರದ ಚಿತ್ರೀಕರಣಕ್ಕಾಗಿ ಅಮೇರಿಕಾಕ್ಕೆ ತೆರಳಿದಿದ್ದರು. ಆದರೆ, ಇದೀಗ 'Rambo 2' ನಂತರ 'ವಿಕ್ಟರಿ 2' ಹೆಸರಿನಲ್ಲಿಯೂ ಸಿನಿಮಾ ಬರ್ತಿದೆ.

  'ಅಲೆಮಾರಿ' ಖ್ಯಾತಿಯ ನಿರ್ದೇಶಕ ಹರಿ ಸಂತೋಷ್ ನಟ ಶರಣ್ ಜೊತೆಗೆ ಒಂದು ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು. ಅದೇ ಸಿನಿಮಾಗೆ ಈಗ 'ವಿಕ್ಟರಿ 2' ಎಂಬ ಟೈಟಲ್ ಫಿಕ್ಸ್ ಆಗಿದೆ. ವಿಶೇಷ ಅಂದರೆ, ಈ ಚಿತ್ರದಲ್ಲಿ ಶರಣ್ ಗೆ ನಾಯಕಿಯಾಗಿ ಅಪೂರ್ವ ಕಾಣಿಸಿಕೊಳ್ಳುತ್ತಿದ್ದಾರೆ.

  'ಕಾಲೇಜ್ ಕುಮಾರ್' ಡೈರೆಕ್ಟರ್ ಮುಂದಿನ ಚಿತ್ರದ ನಾಯಕ ಇವರೇ ನೋಡಿ 'ಕಾಲೇಜ್ ಕುಮಾರ್' ಡೈರೆಕ್ಟರ್ ಮುಂದಿನ ಚಿತ್ರದ ನಾಯಕ ಇವರೇ ನೋಡಿ

  ರವಿಚಂದ್ರನ್ ಅವರ 'ಅಪೂರ್ವ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಅಪೂರ್ವ ಆ ಸಿನಿಮಾದ ಆದ ಮೇಲೆ ಬೇರೆ ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಆದರೆ, ಈಗ 'ವಿಕ್ಟರಿ 2' ಚಿತ್ರಕ್ಕೆ ಅವರೇ ನಾಯಕಿ ಆಗಿದ್ದು, ಈಗಾಗಲೇ ಸಿನಿಮಾದ ಟಾಕಿ ಪೋಷನ್ ಮುಗಿದಿದೆಯಂತೆ. ಈ ಚಿತ್ರದ ಜೊತೆಗೆ ರವಿಚಂದ್ರನ್ ಜೊತೆಗೆ ಅಪೂರ್ವ 'ಕೀಚಕ' ಎಂಬ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇದೆ.

  ಸಿನಿಮಾದ ಮತ್ತೊಬ್ಬ ನಾಯಕಿಯಾಗಿ 'ವಿಕ್ಟರಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಸ್ಮಿತಾ ಸೂದ್ ಅವರು ಸಹ ನಟಿಸಲಿದ್ದಾರಂತೆ. ಉಳಿದಂತೆ ನಿರ್ದೇಶಕ ತರುಣ್ ಸುಧೀರ್ ಈ ಚಿತ್ರದ ಕ್ರಿಯೇಟಿವ್ ಹೆಡ್ ಹಾಗೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ. 'ಕಾಲೇಜ್ ಕುಮಾರ' ನಂತರ ಹರಿ ಸಂತೋಷ್ ಈ ಚಿತ್ರಕ್ಕೆ ಕೈ ಹಾಕಿದ್ದಾರೆ.

  English summary
  Kannada actor Sharan and kannada actess Apoorva's new movie tilted as 'Victory 2'. 'College Kumar' director Hari Santhosh will be directing a movie to actor Sharan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X