For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ದಿನ 'ಅವತಾರ ಪುರುಷ'ನಾಗಿ ಬಂದ ನಟ ಶರಣ್

  |

  ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಕಾಮಿಡಿ ಸ್ಟಾರ್ ಶರಣ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 48ನೇ ವಸಂತಕ್ಕೆ ಕಾಲಿಟ್ಟ ನಟ ಶರಣ್ ಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿವೆ. ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದ ಶರಣ್ ಈಗ ಸ್ಯಾಂಡಲ್ ವುಡ್ ನ ದೊಡ್ಡ ನಟನಾಗಿ ಬೆಳೆದು ನಿಂತಿದ್ದಾರೆ.

  ಸಹ ಕಲಾವಿದನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶರಣ್ ನಂತರ ಕಾಮಿಡಿ ನಟನಾಗಿ ಕನ್ನಡ ಚಿತ್ರ ಪ್ರೇಕ್ಷಕರನ್ನು ನಗಿಸಿ ಈಗ ನಾಯಕ ನಟನಾಗಿ ಮಿಂಚುತ್ತಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಅನೇಕ ವರ್ಷಗಳ ಬಳಿಕ ನಾಯಕನಾಗಿ ಮಿಂಚಿದ ಶರಣ್ ಈಗ ಸ್ಯಾಂಡಲ್ ವುಡ್ ನ ಬೇಡಿಕೆಯ ನಟರಾಗಿದ್ದಾರೆ.

  ಅಂದು ಆರ್ಕೆಸ್ಟ್ರಾದಲ್ಲಿದ್ದ ಯುವಕ ಇಂದು ಸ್ಯಾಂಡಲ್ ವುಡ್ ಸ್ಟಾರ್ ನಟಅಂದು ಆರ್ಕೆಸ್ಟ್ರಾದಲ್ಲಿದ್ದ ಯುವಕ ಇಂದು ಸ್ಯಾಂಡಲ್ ವುಡ್ ಸ್ಟಾರ್ ನಟ

  ನಾಯಕ ನಟನಾಗಿ ಶರಣ್ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ವಿಕ್ಟರಿ, ಅಧ್ಯಕ್ಷ, ಜಯಲಲಿತಾ ಅಂತಹ ಸೂಪರ್ ಹಿಟ್ ಸಿನಿಮಾಗಳು, ಶರಣ್ ನಾಯಕನಟನಾಗಿ ಮುಂದುವರೆಯಲು ಸಹಕಾರಿಯಾಗಿದೆ. ಕಾಮಿಡಿ ನಟನಾಗಿ ಮಿಂಚುತ್ತಿದ್ದ ಶರಣ್ ಅನ್ನು ನಾಯಕನಾದ ಮೇಲು ಅಭಿಮಾನಿಗಳು ಅಷ್ಟೆ ಪ್ರೀತಿಯಿಂದ ಸ್ವೀಕರಿಸಿ ಹರಸಿದ್ದಾರೆ.

  ಇತ್ತೀಚಿಗೆ ಶರಣ್ ಅಧ್ಯಕ್ಷ ಇನ್ ಅಮೆರಿಕಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈಗ ಅವತಾರ ಪುರುಷನಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಅವತಾರ ಪುರುಷ ಚಿತ್ರದ ಟೀಸರ್ ಅನ್ನು ಅಭಿಮಾನಿಗಳಿಗೆ ಗಿಫ್ಟ್ ಆಗಿ ನೀಡಲಾಗಿದೆ.

  ಕುತೂಹಲ ಹೆಚ್ಚಿಸುವ ಟೀಸರ್ ಇದಾಗಿದ್ದು ಚಿತ್ರಕ್ಕೆ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿದ್ದಾರೆ. ಅಂದ್ಹಾಗೆ ಅವತಾರ ಪುರುಷ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾ. ಶರಣ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. 'ಚುಟು ಚುಟು' ಹಾಡಿನ ಮೂಲಕ ಮೋಡಿಮಾಡಿದ್ದ ಈ ಜೋಡಿ ಮತ್ತೆ ಒಂದಾಗಿ ಬರ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ, ನಿರೀಕ್ಷೆ ಹೆಚ್ಚಿಸಿದೆ.

  Read more about: sharan ಶರಣ್
  English summary
  Kannada Actor Sharan Starrer Avatar Purusha teaser released for his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X