»   » ಎತ್ತ ಕಳೆದುಹೋದರು 'ರಾಜ ರಾಜೇಂದ್ರ' ಶರಣ್..?

ಎತ್ತ ಕಳೆದುಹೋದರು 'ರಾಜ ರಾಜೇಂದ್ರ' ಶರಣ್..?

Posted By:
Subscribe to Filmibeat Kannada

'ರ್ಯಾಂಬೋ', 'ವಿಕ್ಟರಿ', 'ಅಧ್ಯಕ್ಷ'....ಹೀಗೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದ ಕಾಮಿಡಿ ಖಿಲಾಡಿ ಶರಣ್ 'ರಾಜ ರಾಜೇಂದ್ರ' ಸಿನಿಮಾ ನಂತರ ಕೊಂಚ ಮಂಕಾಗಿದ್ದಾರೆ.

ನಿರೀಕ್ಷಿಸಿದ ಮಟ್ಟಕ್ಕೆ 'ರಾಜ ರಾಜೇಂದ್ರ' ಯಶಸ್ವಿ ಆಗಲಿಲ್ಲ. ಕಲೆಕ್ಷನ್ ನಲ್ಲಿ ಡಲ್ ಹೊಡೆಯುತ್ತಿರುವ 'ರಾಜ ರಾಜೇಂದ್ರ' ಚಿತ್ರದ ಕಥೆ ಹಾಗಿರಲಿ. ಈಗ ಶರಣ್ ಎಲ್ಲಿ ಅಂದ್ರೆ, 'ಬುಲ್ಲೆಟ್ ಬಸ್ಯ' ಸಿನಿಮಾದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. [ನಟ ಶರಣ್ ಗೆದ್ದಿದ್ದೆಲ್ಲಿ, ಉಳಿದವರು ಎಡವಿದ್ದೆಲ್ಲಿ?]


Actor Sharan's upcoming movie titled Maruthi-800

'ಟೋನಿ' ಖ್ಯಾತಿಯ ಜಯತೀರ್ಥ ನಿರ್ದೇಶನ ಮಾಡುತ್ತಿರುವ 'ಬುಲ್ಲೆಟ್ ಬಸ್ಯ' ಶೂಟಿಂಗ್ ಕೊನೆಯ ಹಂತದಲ್ಲಿದೆ. ಅಷ್ಟರೊಳಗೆ ಹೊಸ ಚಿತ್ರವೊಂದಕ್ಕೆ ನಟ ಶರಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರವೇ 'ಮಾರುತಿ-800'. ['ಬುಲ್ಲೆಟ್' ಏರಿ ಬಂದ ಬರ್ತಡೆ ಬಾಯ್ ಶರಣ್]


'ಮಾರುತಿ-800'...ಟೈಟಲ್ ಕೇಳಿದ ತಕ್ಷಣ ಇದು ಕಾರ್ ಕಥೆ ಅಂದುಕೊಳ್ಳಬೇಡಿ. ಇದು ಅಪ್ಪಟ ಇಂದಿನ ರಿಯಲ್ ಎಸ್ಟೇಟ್ ಕಥೆ. ಅದರಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಮಾರುತಿ ಪಾತ್ರ ನಿಭಾಯಿಸುತ್ತಿದ್ದಾರಂತೆ ನಟ ಶರಣ್.


ಇನ್ನೂ 800 ಬಗ್ಗೆ ಹೇಳ್ಬೇಕಂದ್ರೆ, 800 ಎಕರೆ ಜಮೀನನ್ನ ಮಾರಿಸುವ ಡೀಲ್ ಮಾರುತಿಯದ್ದು. ಕಿರಿಕ್ಕು-ಕಾಮಿಡಿ ಟ್ರ್ಯಾಕ್ ನಲ್ಲೇ ಚಿತ್ರ ಸಾಗಲಿದೆ. ಸದ್ಯಕ್ಕೆ 'ಮಾರುತಿ-800' ಚಿತ್ರದ ಬಗ್ಗೆ ಇಷ್ಟನ್ನೇ ಬಿಟ್ಟುಕೊಟ್ಟಿರುವ ಶರಣ್, ಚಿತ್ರದ ನಿರ್ದೇಶಕರು ಮತ್ತು ಪಾತ್ರವರ್ಗದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. 'ಬುಲ್ಲೆಟ್ ಬಸ್ಯ' ಮುಗಿಯುವವರೆಗೂ ಶರಣ್ 'ಮಾರುತಿ-800' ಬಗ್ಗೆ ಮಾತಾಡೋಲ್ವಂತೆ. (ಏಜೆನ್ಸೀಸ್)

English summary
After 'Raja Rajendra', Actor Sharan is currently busy shooting for Jayatheertha's 'Bullet Basya'. Meanwhile, the Actor has signed new project called 'Maruthi-800'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada