»   » ಸಪ್ತಸಾಗರದಾಚೆಗೆ ಜಿಗಿದ ಹಾಸ್ಯನಟ ಶರಣ್ 'ವಿಕ್ಟರಿ'

ಸಪ್ತಸಾಗರದಾಚೆಗೆ ಜಿಗಿದ ಹಾಸ್ಯನಟ ಶರಣ್ 'ವಿಕ್ಟರಿ'

Posted By:
Subscribe to Filmibeat Kannada

ಹಾಸ್ಯನಟ ಶರಣ್ ಅವರು ಕಾಮಿಡಿ ಹೀರೋ ಆಗಿ ನಟಿಸಿದ 'ವಿಕ್ಟರಿ' ಚಿತ್ರ ಬಾಕ್ಸ್ ಆಫೀಸಲ್ಲಿ ಗೆದ್ದಿದೆ. ಸರಿಸುಮಾರು ಈ ಚಿತ್ರ ರು.5 ಕೋಟಿ ಕಲೆಕ್ಷನ್ ಮಾಡಿದೆ. ಸಣ್ಣ ಬಜೆಟ್ ಚಿತ್ರಗಳ ಮೂಲಕವೂ ಲಾಭ ಮಾಡಬಹುದು ಎಂಬುದನ್ನು ವಿಕ್ಟರಿ ತೋರಿಸಿಕೊಟ್ಟಿದೆ.

ಈಗ ಈ ಚಿತ್ರವನ್ನು ಯುಎಸ್ಎನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ರ್‍ಯಾಂಬೋ ಚಿತ್ರದ ಬಳಿಕ ಶರಣ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿದ 'ವಿಕ್ಟರಿ' ಚಿತ್ರ ಈಗ ಸಪ್ತಸಾಗರದಾಚೆಗೆ ಹಾರುತ್ತಿದೆ. 'ರ್‍ಯಾಂಬೋ' ಚಿತ್ರವನ್ನು ಅಟ್ಲಾಂಟಾ ನಾಗರಾಜ್ ಅವರು ಯುಎಸ್ಎ ನಲ್ಲಿ ಬಿಡುಗಡೆ ಮಾಡಲಾಗಿತ್ತು.

ಈಗ ವಿಕ್ಟರಿ ಕೂಡ ಅವರ ಮುಂದಾಳತ್ವದಲ್ಲಿ ಯುಎಸ್ಎ ನಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಸೆ.6,7 ಹಾಗೂ 8ರಂದು ತೆರೆಕಾಣುತ್ತಿದೆ. ಸ್ಯಾನ್ ಜೋಶ್ ನ ಸೆರ್ರಾ ಥಿಯೇಟರ್ಸ್, ಮಿಲ್ ಪಿಟಸ್, ಕ್ಯಾಲಿಫೋರ್ನಿಯಾದಲ್ಲಿ ಸೆ.6ರಂದು ರಾತ್ರಿ 8ಕ್ಕೆ, ಸೆ.7ರಂದು ಮಧ್ಯಾಹ್ನ 2.30ಕ್ಕೆ ಹಾಗೂ ಸಂಜೆ 5.30ಕ್ಕೆ, ಸೆ.8ರಂದು ಸಂಜೆ 5.30ಕ್ಕೆ ಪ್ರದರ್ಶನ ಕಾಣಲಿದೆ.

ಅಮೆರಿಕಾದ ಇನ್ನಷ್ಟು ಕೇಂದ್ರಗಳಲ್ಲೂ ವಿಕ್ಟರಿ

ಸಿಯಾಟಲ್, ಪೋರ್ಟ್ ಲ್ಯಾಂಡ್, ಆಸ್ಟಿನ್, ಹೂಸ್ಟನ್, ಡಲ್ಲಾಸ್, ಅಟ್ಲಾಂಟಾ, ನ್ಯೂಜೆರ್ಸಿ, ಬೋಸ್ಟನ್, ನ್ಯೂಯಾರ್ಕ್, ಫ್ಲೋರಿಡಾ, ಟಾಂಪಾ, ಅರಿಜೋನಾ ಹಾಗೂ ಚಿಕಾಗೋದಲ್ಲೂ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.

ಪಾತ್ರವರ್ಗದಲ್ಲಿ ತಬಲಾ ನಾಣಿ, ಅವಿನಾಶ್

ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣ ಇರುವ ಚಿತ್ರದ ನಾಯಕಿ ಅಸ್ಮಿತಾ ಸೂದ್. ಪಾತ್ರವರ್ಗದಲ್ಲಿ ತಬಲಾ ನಾಣಿ, ಅವಿನಾಶ್, ರಮೇಶ್ ಭಟ್, ಸಾಧು ಕೋಕಿಲ ಮುಂತಾದವರಿದ್ದಾರೆ.

ವಿಭಿನ್ನ, ವಿನೋದ, ವಿಸ್ಮಯ ಚಿತ್ರ

ಚಿತ್ರದ ಸಿಂಬಲ್ ವಿಭಿನ್ನ, ವಿನೋದ, ವಿಸ್ಮಯ ಎಂದು ಅಂದುಕೊಳ್ಳಬಹುದು. ಎರಡು ಎಂದಾದರೂ ಭಾವಿಸಕೊಳ್ಳಬಹುದು ಎನ್ನುತ್ತಾರೆ ಶರಣ್. ಸಂಪೂರ್ಣ ಹಾಸ್ಯಮಯ ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದಾರೆ. ಎಸ್.ಆರ್.ಎಸ್ ಮೀಡಿಯಾ ವಿಷನ್ ಎಂಬ ಲಾಂಛನದಲ್ಲಿ ಆನಂದ್ ಆಡಿಯೋ ಮೋಹನ್ ಈ ಚಿತ್ರದ ನಿರ್ಮಾಪಕರು.

ಶ್ರೀನಾಥ್ ಕಥೆ, ಚಿತ್ರಕಥೆ; ಪ್ರಶಾಂತ್ ಸಂಭಾಷಣೆ

ಶ್ರೀನಾಥ್ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತವಿರುವ ಈ ಚಿತ್ರಕ್ಕೆ ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ.

ಚಿತ್ರದ ಟೂ ಲೈನ್ ಸ್ಟೋರಿ ಹಿಂಗಿದೆ

ಚಿತ್ರದ ಒಂದು ಸ್ಯಾಂಪಲ್ ಡೈಲಾಗ್ ಹೀಗಿದೆ, ಗಂಡಸು ಕೆಟ್ಟವನಾದರೆ ಆತನ ಅದೃಷ್ಟ ಸರಿ ಇಲ್ಲ ಅಂತಾರೆ, ಆದೇ ಹೆಣ್ಣು ಕೆಟ್ಟವಳಾದರೆ ಅವಳೇ ಸರಿ ಇಲ್ಲ ಅಂತಾರೆ...ಪತಿ ಪತ್ನಿ ಮಧ್ಯದ ಸಂಬಂಧಗಳ ಸಾಮರಸ್ಯ ಹೇಳುತ್ತಾ ಬದುಕಿನ ಸರಿ, ತಪ್ಪುಗಳನ್ನು ವಿವರಿಸುವ ಯತ್ನವನ್ನು ಚಿತ್ರದ ನಿರ್ದೇಶಕ ನಂದಕಿಶೋರ್ ಮಾಡಿದ್ದಾರೆ.

English summary
Comedy actor Sharan lead super hit Kannada film 'Victory' releases in USA on 6th September, 2013. SAN JOSE: Serra Theatres, Milpitas, California, September 6th: 8:00 PM, September 7th: 2:30 PM and 5:30 PM, September 8th: 5:30 PM.
Please Wait while comments are loading...