»   » ಚೆನ್ನೈನ, ಕುಂಭದ್ರೋಣ ಮಳೆಗೆ ಮುಳುಗಿದ ನಟ ಸಿದ್ದಾರ್ಥ್ ಮನೆ..!

ಚೆನ್ನೈನ, ಕುಂಭದ್ರೋಣ ಮಳೆಗೆ ಮುಳುಗಿದ ನಟ ಸಿದ್ದಾರ್ಥ್ ಮನೆ..!

Posted By:
Subscribe to Filmibeat Kannada

ತಮಿಳುನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ತತ್ತರಗೊಂಡಿದ್ದು, ಎಲ್ಲರ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಈ ಮಳೆ ಸಂಪನ್ನ ನಾಗರಿಕರನ್ನೇ ಅಲುಗಾಡಿಸಿದೆ. ಅಂತದ್ರಲ್ಲಿ, ಇನ್ನು ಬಡಜನರ ಪಾಡೇನು ಎಂಬಂತಾಗಿದೆ.

Chennai rains: actor siddharth forced to leave house to make pick ups and drop arround the city

ಇದಕ್ಕೆ ಸರಿಯಾಗಿ 'ಜಿಗರ್ಥಂಡಾ' ಖ್ಯಾತಿಯ ತಮಿಳು ನಟ ಸಿದ್ದಾರ್ಥ್ ಅವರು 'ನನ್ನಂತಹ ಸಂಪನ್ನ ನಟನ ಮನೆಯಲ್ಲೇ ಈ ತರ ನೀರು ತುಂಬಿ ತುಳುಕುತ್ತಿದೆ. ಶೌಚಾಲಯಗಳು ಅರ್ಧ ಮುಳುಗಿವೆ. ಅಂತಹದರಲ್ಲಿ ಇನ್ನು ಉಳಿದ ತಮಿಳುನಾಡು ಜನತೆಯ ಪರಿಸ್ಥಿತಿ ಹೇಗಿರಬೇಡ ಎಂದು ಊಹಿಸಿ' ಎಂದು ನಟ ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ.[ಚೆನ್ನೈ ಮಳೆ: ಹೆದರಬೇಡಿ ನಿಮಗೆ ನಾವಿದ್ದೇವೆ ಎಂದ ಕಾಲಿವುಡ್ ಸ್ಟಾರ್ಸ್..!]

'ಬಾಂಬೆಯಲ್ಲಿ ಪ್ರವಾಹ ಬಂದಾಗ ಹಲವಾರು ಜನ ಮುರಿದ ಕಾರುಗಳಲ್ಲಿ ಕುಳಿತು ಮೃತಪಟ್ಟರು. ದಯವಿಟ್ಟು ಕಾರುಗಳಲ್ಲಿ ರಕ್ಷಣೆ ಪಡೆಯಬೇಡಿ' ಎಂದು ಮನವಿ ಮಾಡಿದ್ದಾರೆ.


ಜೊತೆಗೆ ನಾಳೆ (ಡಿಸೆಂಬರ್ 3) ಮನೆಯಿಂದ ಹೊರಬಿದ್ದು ಜನರನ್ನು ಮುಳುಗಿದ ಪ್ರದೇಶದಿಂದ ಸುರಕ್ಷಿತ ಜಾಗಕ್ಕೆ ಕರೆತರಲು ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ', ಪ್ರವಾಹದಲ್ಲಿ ಸಿಲುಕಿರುವವರು ತಮ್ಮನ್ನು ಮತ್ತು ಆರ್ ಜೆ ಬಾಲಾಜಿ ಅವರನ್ನು ಸಂಪರ್ಕಿಸಲು ನಟ ಸಿದ್ದಾರ್ಥ್ ಅವರು ಕೋರಿದ್ದಾರೆ.

English summary
South Indian actor Siddharth described his woes faced due to the heavy rains that have been lashing for the past two days in Chennai. The Jigarthanda-actor posted images of his waterlogged house on Twitter and sought relief for the rest of Tamil Nadu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada