For Quick Alerts
  ALLOW NOTIFICATIONS  
  For Daily Alerts

  ಶ್ರೀಮುರಳಿ ಜೊತೆ ಮಹೇಶ್ ಬಾಬು : ಯಾವ್ ಸಿನಿಮಾ, ಏನ್ ವಿಶೇಷ?

  |
  ಶ್ರೀಮುರಳಿ ಜೊತೆ ಮಹೇಶ್ ಬಾಬು : ಯಾವ್ ಸಿನಿಮಾ, ಏನ್ ವಿಶೇಷ? | FILMIBEAT KANNADA

  ನಟ ಶ್ರೀಮುರಳಿ ಹಾಗೂ ಮಹೇಶ್ ಬಾಬು ಇಬ್ಬರು ಎರಡು ಬೇರೆ ಬೇರೆ ಚಿತ್ರರಂಗದ ದೊಡ್ಡ ನಟರು. ಟಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನ ದೊಡ್ಡ ನಟರು ಇದೀಗ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

  ಶ್ರೀ ಮುರಳಿ ಹಾಗೂ ಪ್ರಿನ್ಸ್ ಮಹೇಶ್ ಬಾಬು ಫೋಟೋ ನೋಡಿದ ತಕ್ಷಣ ಈ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರ? ಎನ್ನುವ ಕುತೂಹಲ ಕೆಲವರಿಗೆ ಬರಬಹುದು. ಅಲ್ಲದೆ, ಈ ಇಬ್ಬರು ನಟರು ಎಲ್ಲಿ ಯಾವ ವಿಚಾರವಾಗಿ ಭೇಟಿ ಮಾಡಿದ್ದಾರೆ ಎನ್ನುವ ಪ್ರಶ್ನೆ ಕೂಡ ಹುಟ್ಟಬಹುದು. ಅಂತಹ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.

  ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರೀಮುರಳಿ

  ಶ್ರೀ ಮುರಳಿ ಹಾಗೂ ಮಹೇಶ್ ಬಾಬು ಅವರ ಫೋಟೋ 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ. ಈ ಫೋಟೋದ ಕೆಲ ವಿವರ ಮುಂದಿದೆ ಓದಿ..

  ರಾಮೋಜಿ ಫಿಲಂ ಸಿಟಿಯಲ್ಲಿ ಭೇಟಿ

  ರಾಮೋಜಿ ಫಿಲಂ ಸಿಟಿಯಲ್ಲಿ ಭೇಟಿ

  ಹೈದರಾಬಾದಿನ ರಾಮೋಜಿ ಫಿಲಂ ಸಿಟಿಯಲ್ಲಿ ನಟ ಶ್ರೀ ಮುರಳಿ ಹಾಗೂ ಮಹೇಶ್ ಬಾಬು ಭೇಟಿ ಮಾಡಿದ್ದಾರೆ. ಚೇತನ್ ಕುಮಾರ್ ನಿರ್ದೇಶನದ 'ಭರಾಟೆ' ಸಿನಿಮಾದ ಚಿತ್ರೀಕರಣಕ್ಕಾಗಿ ಶ್ರೀಮುರಳಿ ಅಲ್ಲಿಗೆ ಹೋಗಿದ್ದರು. ಮಹೇಶ್ ಬಾಬು ಕೂಡ 'ಮಹರ್ಷಿ' ಸಿನಿಮಾದ ಶೂಟಿಂಗ್ ನಲ್ಲಿ ಇದ್ದರು. ಈ ವೇಳೆ ಈ ಇಬ್ಬರು ನಟರು ಭೇಟಿ ಮಾಡಿದ್ದಾರೆ.

  ಆಡೋ ಮಾತ್ಮೇಲೆ ಜವಾಬ್ದಾರಿ ಇರಬೇಕು: ಶ್ರೀಮುರಳಿ ಹೇಳಿದ್ದು ಯಾರಿಗೆ?

  'ಉಗ್ರಂ' ಮೆಚ್ಚಿದ ಮಹೇಶ್ ಬಾಬು

  'ಉಗ್ರಂ' ಮೆಚ್ಚಿದ ಮಹೇಶ್ ಬಾಬು

  ಶ್ರೀ ಮುರಳಿ ಹಾಗೂ ಮಹೇಶ್ ಬಾಬು ನಡುವೆ ಹಿಂದೆಯಿಂದ ಪರಿಚಯ ಇದೆಯಂತೆ. ಈ ಹಿಂದೆ ಕೆಲವು ಬಾರಿ ಈ ನಟರು ಭೇಟಿ ಮಾಡಿದ್ದರು. ಈ ಬಾರಿ ಭೇಟಿ ಮಾಡಿದ ಸಮಯದಲ್ಲಿ ಶ್ರೀ ಮುರಳಿ ನಟನೆಯ 'ಉಗ್ರಂ' ಬಗ್ಗೆ ಮಹೇಶ್ ಬಾಬು ಮೆಚ್ಚುಗೆ ಸೂಚಿಸಿದ್ದರಂತೆ.

  ಕನ್ನಡ ಚಿತ್ರಗಳನ್ನು ಕೊಂಡಾಡಿದ ಪ್ರಿನ್ಸ್

  ಕನ್ನಡ ಚಿತ್ರಗಳನ್ನು ಕೊಂಡಾಡಿದ ಪ್ರಿನ್ಸ್

  ಸುಮಾರು ಒಂದು ಗಂಟೆಗಳ ಕಾಲ ಶ್ರೀ ಮುರಳಿ ಹಾಗೂ ಮಹೇಶ್ ಬಾಬು ನಡುವೆ ಮಾತುಕತೆ ನಡೆದಿದೆ. ಈ ವೇಳೆ ಕನ್ನಡ ಚಿತ್ರರಂಗದ ಬಗ್ಗೆ ಕೂಡ ಮಹೇಶ್ ಬಾಬು ಮಾತನಾಡಿದ್ದಾರೆ. ಕನ್ನಡ ಸಿನಿಮಾಗಳ ಟ್ರೆಂಡ್ ಬದಲಾಗುತ್ತಿದೆ ನಿಜಕ್ಕೂ ಇದು ಖುಷಿಯ ಸಂಗತಿ ಎಂದಿದ್ದಾರೆ.

  ಮೂರು ಕನ್ನಡ ಚಿತ್ರಗಳ ಶೂಟಿಂಗ್

  ಮೂರು ಕನ್ನಡ ಚಿತ್ರಗಳ ಶೂಟಿಂಗ್

  ಸದ್ಯ ರಾಮೋಜಿ ಫಿಲಂ ಸಿಟಿಯಲ್ಲಿ ಕನ್ನಡದ ಮೂರು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಸುದೀಪ್ ಅವರ 'ಪೈಲ್ವಾನ್', ಧ್ರುವ ಸರ್ಜಾ ನಟನೆಯ 'ಪೊಗರು' ಹಾಗೂ ಶ್ರೀಮುರಳಿ ಅವರ 'ಭರಾಟೆ' ಚಿತ್ರೀಕರಣ ಸಾಗುತ್ತಿದೆ. ಈ ಬಗ್ಗೆ ಕೂಡ ಮಹೇಶ್ ಬಾಬು ಮಾತನಾಡಿದ್ದು, ನಮ್ಮ ಒಂದು ಸಿನಿಮಾ ಇಲ್ಲಿ ಶೂಟಿಂಗ್ ಆಗುತ್ತಿದ್ದರೆ, ಕನ್ನಡದ ಮೂರು ಚಿತ್ರಗಳ ಕೆಲಸಗಳು ನಡೆಯುತ್ತಿದೆ ಎಂದು ಪ್ರೋತ್ಸಾಹದ ಮಾತುಗಳನ್ನು ಆಡಿದ್ದಾರೆ.

  English summary
  Kannada actor Sri Murali met Mahesh Baabu in Ramoji film city Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X