»   » ಪಾವಗಡದ ಶನೈಶ್ಚರ ದೇಗುಲದಲ್ಲಿ ತೆಲುಗು ನಟ ಶ್ರೀಕಾಂತ್

ಪಾವಗಡದ ಶನೈಶ್ಚರ ದೇಗುಲದಲ್ಲಿ ತೆಲುಗು ನಟ ಶ್ರೀಕಾಂತ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕರ್ನಾಟಕ ಮೂಲದ ಬಹುಭಾಷಾ ನಟ ಶ್ರೀಕಾಂತ್ ಅವರು ಇತ್ತೀಚೆಗೆ ತುಮಕೂರು ಜಿಲ್ಲೆ ಪಾವಗಡ ಶನೈಶ್ಚರ ದೇಗುಲಕ್ಕೆ ಭೇಟಿ ನೀಡಿ ಹರಕೆ ತೀರಿಸಿಕೊಂಡಿದ್ದಾರೆ. ಕನ್ನಡ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.

ತುಮಕೂರಿನಲ್ಲಿರುವ ಗೆಳೆಯರ ಮನೆಗೆ ಆಗಮಿಸಿದ ಶ್ರೀಕಾಂತ್‌ ಅವರು ನಂತರ ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ಐತಿಹಾಸಿಕ ಶನಿ ಮಹಾತ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ಶನಿ ದೋಷ ನಿವಾರಣೆಗಾಗಿ ನವಗ್ರಹ ಹೋಮ ಮಾಡಿಸಿದರು.

Actor Srikanth visits Pavagada Shani Temple

ಕರ್ನಾಟದ ಗಂಗಾವತಿ ಮೂಲದವರಾದ ಶ್ರೀಕಾಂತ್ ಅವರು ಕನ್ನಡದಲ್ಲಿ ಈ ಹಿಂದೆ ರವಿಚಂದ್ರನ್ ಜತೆ ಒಂದು ಚಿತ್ರದಲ್ಲಿ ನಟಿಸಿದ್ದರು. ಮಿಕ್ಕಂತೆ ತೆಲುಗು ಚಿತ್ರರಂಗದಲ್ಲಿ ಚಿರಂಜೀವಿ ಸೇರಿದಂತೆ ಎಲ್ಲಾ ಟಾಪ್ ನಟರ ಜತೆ ನಟಿಸಿದ್ದಾರೆ.

Actor Srikanth visits Pavagada Shani Temple

ಸರೈನೋಡು, ಟೆರರ್‌, ಗೋವಿಂದು ಅಂದರಿವಾಡೆಲಿ, ಶ್ರೀ ರಾಮ ರಾಜ್ಯಂ ಇತ್ತೀಚಿನ ಅವರ ಯಶಸ್ವಿ ಚಿತ್ರಗಳು.

500 ವರ್ಷಗಳ ಇತಿಹಾಸ ಹೊಂದಿರುವ ಪಾವಗಡದ ಶನೈಶ್ಚರ ದೇಗುಲದಲ್ಲಿ 50ರ ದಶಕದಲ್ಲಿ ಶನಿಮಹಾತ್ಮನ ವಿಗ್ರಹದ ಮರು ಪ್ರತಿಷ್ಟಾಪನೆಯಾಯಿತು. ನಂತರ ನವಗ್ರಹಗಳ ಪ್ರತಿಷ್ಟಾಪನೆ. ಗಣಪತಿ, ಲಕ್ಷ್ಮಿ ಹಾಗೂ ಶ್ರೀ ಸತ್ಯನಾರಾಯಣ ಸ್ವಾಮಿಯ ಪುಟ್ಟ ದೇಗುಲಗಳು ದೇವಾಲಯದ ಪ್ರಾಂಗಣದಲ್ಲೇ ನಿರ್ಮಿಸಲಾಯಿತು.

Actor Srikanth visits Pavagada Shani Temple

ಕರ್ನಾಟಕ ಮಾತ್ರವಲ್ಲದೆ ಪಕ್ಕದ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಎಲ್ಲೆಡೆಯಿಂದ ಈ ದೇಗುಲಕ್ಕೆ ಭಕ್ತಾದಿಗಳು ಬಂದು ಹರಕೆ, ಶನಿ ಪ್ರದೋಷ, ನವಗ್ರಹ ಯಾಗ ಮುಂತಾದ ವಿಶೇಷ ಪೂಜೆಗಳನ್ನು ನಡೆಸುತ್ತಾರೆ ಎಂದು ಸ್ಥಳೀಯರಾದ ಧರ್ಮಪಾಲ್ ಹೇಳಿದ್ದಾರೆ.

English summary
Multilingual actor Srikanth recently visited Pavagada Shani Temple and offered special prayers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada