For Quick Alerts
  ALLOW NOTIFICATIONS  
  For Daily Alerts

  'ಸಿಲಿಕಾನ್ ಸಿಟಿ'ಯಲ್ಲಿ ಕ್ರೈಮ್ ಮಾಡುತ್ತಿದ್ದಾರೆ ಶ್ರೀನಗರ ಕಿಟ್ಟಿ

  By Suneetha
  |

  'ನಮಸ್ತೇ ಮೇಡಂ' ಚಿತ್ರದ ನಂತರ ನಟ ಶ್ರೀನಗರ ಕಿಟ್ಟಿ ಅವರು ಪೂರ್ಣ ಪ್ರಮಾಣದ ನಾಯಕನಾಗಿ ಸ್ಯಾಂಡಲ್ ವುಡ್ ನಿಂದ ಬಹುತೇಕ ನಾಪತ್ತೆಯಾಗಿದ್ದರು. ತದನಂತರ 'ಅಭಿನೇತ್ರಿ', 'ರಿಂಗ್ ರೋಡ್', 'ವ್ಯಾಟ್ಸಾಪ್ ಲವ್', 'ಹ್ಯಾಪಿ ಬರ್ತ್ ಡೇ' ಚಿತ್ರಗಳಲ್ಲಿ ಅತಿಥಿ ಪಾತ್ರ ನಿಭಾಯಿಸಿದ್ದರು.

  'ಬಹುಪರಾಕ್' ಚಿತ್ರದ ಸೋಲಿನ ನಂತರ ಮತ್ತೆ ಹೊಸ ಚಿತ್ರದ ಮೂಲಕ, ಕಿಟ್ಟಿ ಅವರು ನಾಯಕನಾಗಿ ತೆರೆಯ ಮೇಲೆ ಮಿಂಚಲಿದ್ದಾರೆ. ಚಿತ್ರರಂಗದಿಂದ ಕೊಂಚ ದಿನಗಳ ಕಾಲ ದೂರವಿದ್ದ ಕಿಟ್ಟಿ ಅವರು ಹೊಸ ಚಿತ್ರಕ್ಕೆ ಸಹಿ ಮಾಡಿ, ಮತ್ತೆ ಸುದ್ದಿಯಲ್ಲಿದ್ದಾರೆ.[ಗಣೇಶ್ ಜೊತೆ 'ಬುಗುರಿ' ಆಟ ಆಡಿದ ಶ್ರೀನಗರ ಕಿಟ್ಟಿ]

  ಕಳೆದ ಎರಡು ವರ್ಷಗಳಿಂದ ದೂರವಿದ್ದ ಕಿಟ್ಟಿ ಅವರು ಯಾವ ಚಿತ್ರದ ಮೂಲಕ ಇದೀಗ ಬಣ್ಣ ಹಚ್ಚಲು ತಯಾರಾಗಿದ್ದಾರೆ, ಅನ್ನೋ ಮಾಹಿತಿಯನ್ನು ನೋಡೋಣ, ಮುಂದೆ ಓದಿ....

  ಸಿಲಿಕಾನ್ ಸಿಟಿಯಲ್ಲಿ ಕಿಟ್ಟಿ

  ಸಿಲಿಕಾನ್ ಸಿಟಿಯಲ್ಲಿ ಕಿಟ್ಟಿ

  ಬಹಳ ಲಾಂಗ್ ಗ್ಯಾಪ್ ತೆಗೆದುಕೊಂಡಿದ್ದ ಶ್ರೀನಗರ ಕಿಟ್ಟಿ ಅವರು ಇದೀಗ 'ಸಿಲಿಕಾನ್ ಸಿಟಿ' ಎಂಬ ಹೊಸ ಸಿನಿಮಾದ ಮೂಲಕ, ಮತ್ತೆ ಬಣ್ಣ ಹಚ್ಚಲು ತಯಾರಿ ನಡೆಸಿದ್ದಾರೆ. ನವ ನಿರ್ದೇಶಕ, ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಬಹು ತಾರಾಗಣ ಇದೆ.[ಹೇ..ರಾಮ್..! ಮತ್ತೊಮ್ಮೆ ವಿವಾದ ಭುಗಿಲೇಳುತ್ತಾ.?]

  ನಿರ್ದೇಶಕ ಯಾರು?

  ನಿರ್ದೇಶಕ ಯಾರು?

  ಮುರಳಿ ಗುರಪ್ಪ ಎಂಬುವವರು 'ಸಿಲಿಕಾನ್ ಸಿಟಿ' ಚಿತ್ರಕ್ಕೆ ಕಥೆ ಬರೆದು, ನಿರ್ದೇಶನದ ಜವಾಬ್ದಾರಿಯನ್ನು ಕೂಡ ಹೊತ್ತಿದ್ದಾರೆ.[ಪತ್ನಿಯಿಲ್ಲದೆ 'ತುಳಸಿ ಹಬ್ಬ' ಆಚರಿಸಿದ ಶ್ರೀನಗರ ಕಿಟ್ಟಿ]

  ಸಿನಿಮಾದಲ್ಲಿ ಯಾರ್ಯಾರಿದ್ದಾರೆ?

  ಸಿನಿಮಾದಲ್ಲಿ ಯಾರ್ಯಾರಿದ್ದಾರೆ?

  ಚಿತ್ರದಲ್ಲಿ 'ಮದುವೆಯ ಮಮತೆಯ ಕರೆಯೋಲೆ' ಖ್ಯಾತಿಯ ನಟ ಸೂರಜ್ ಗೌಡ, ಕಾಮಿಡಿ ನಟ ಚಿಕ್ಕಣ್ಣ, ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಅಣ್ಣ-ತಮ್ಮಂದಿರಿಬ್ಬರ ಕ್ರೈಮ್ ನ ಜಾಡು ಹಿಡಿಯೋದೇ 'ಸಿಲಿಕಾನ್ ಸಿಟಿ' ಚಿತ್ರದ ಪ್ರಮುಖ ಕಥಾಹಂದರ.

  ಮೊದಲ ಬಾರಿಗೆ ಅಣ್ಣ-ತಮ್ಮನಾದ ಸೂರಜ್-ಕಿಟ್ಟಿ

  ಮೊದಲ ಬಾರಿಗೆ ಅಣ್ಣ-ತಮ್ಮನಾದ ಸೂರಜ್-ಕಿಟ್ಟಿ

  ಈ ಚಿತ್ರದಲ್ಲಿ 'ಮಮತೆಯ' ಹುಡುಗ ಸೂರಜ್ ಗೌಡ ಅವರು ಶ್ರೀನಗರ ಕಿಟ್ಟಿ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ನಟಿ ಏಕ್ತಾ ರಾಥೋಡ್ ಅವರು ಡ್ಯುಯೆಟ್ ಹಾಡಲಿದ್ದಾರೆ.

  ಕಿಟ್ಟಿಗೆ ನಾಯಕಿ ಯಾರು?

  ಕಿಟ್ಟಿಗೆ ನಾಯಕಿ ಯಾರು?

  'ಇಷ್ಟಕಾಮ್ಯ' ಚಿತ್ರದ ಖ್ಯಾತಿಯ ನಟಿ ಕಾವ್ಯ ಶೆಟ್ಟಿ ಅವರು, ಶ್ರೀನಗರ ಕಿಟ್ಟಿ ಅವರ ಜೊತೆ ಈ ಚಿತ್ರದಲ್ಲಿ ರೋಮ್ಯಾನ್ಸ್ ಮಾಡಲಿದ್ದಾರೆ. 'ಇಷ್ಟಕಾಮ್ಯ' ಚಿತ್ರದಲ್ಲಿ ಕಾವ್ಯ ಶೆಟ್ಟಿ ಅವರ ಪ್ರಬುದ್ಧ ನಟನೆಯಿಂದ ಅವರಿಗೆ ಅವಕಾಶಗಳ ಸುರಿಮಳೆ ಸುರಿಯುತ್ತಿದೆ.

  ಮುಹೂರ್ತ ಯಾವಾಗ?

  ಮುಹೂರ್ತ ಯಾವಾಗ?

  ಅಂದಹಾಗೆ 'ಸಿಲಿಕಾನ್ ಸಿಟಿ' ಚಿತ್ರದ ಮುಹೂರ್ತ ಇದೇ ಬುಧವಾರ (ಅಕ್ಟೋಬರ್ 19), ಬೆಳಗ್ಗೆ 11 ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿ ಜರುಗಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಭಾಗವಹಿಸಲಿದ್ದಾರೆ. ಶಿವಣ್ಣ ಅವರು ಫಸ್ಟ್ ಕ್ಲ್ಯಾಪ್ ಮಾಡಲಿದ್ದು, ರವಿಚಂದ್ರನ್ ಅವರು ಮೊದಲ ದೃಶ್ಯಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ.

  English summary
  Kannada Actor Srinagara Kitty was launched and now the actor is all set to star in a new film called 'Silicon City'. The film is written and directed by Murali Gurappa and the film will be launched on October 19th at Kanteerava Studio.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X