»   » 'ಓ ಮೈ ಗಾಡ್' ಕಿಚ್ಚ-ಉಪ್ಪಿ ಚಿತ್ರದ ಟೈಟಲ್ ಮತ್ತೆ ಬದಲಾಯಿತಾ?

'ಓ ಮೈ ಗಾಡ್' ಕಿಚ್ಚ-ಉಪ್ಪಿ ಚಿತ್ರದ ಟೈಟಲ್ ಮತ್ತೆ ಬದಲಾಯಿತಾ?

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರು ಒಂದಾಗಿ ಕಾಣಿಸಿಕೊಳ್ಳುತ್ತಿರುವ ಹಿಂದಿ ರಿಮೇಕ್ 'ಓ ಮೈ ಗಾಡ್' ಸಿನಿಮಾದ ಕನ್ನಡ ವರ್ಷನ್ ನ ಟೈಟಲ್ ಮತ್ತೆ ಬದಲಾಯಿಸಲಾಗಿದೆ.

ಈ ಮೊದಲು ಜನವರಿ 23 ರಿಂದ ಈ ಸಿನಿಮಾದ ಶೂಟಿಂಗ್ ಆರಂಭಿಸಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿತ್ತಾದರೂ, ಇದೀಗ ಶೂಟಿಂಗ್ ದಿನಾಂಕ ಮುಂದಿನ ತಿಂಗಳು ಫೆಬ್ರವರಿಗೆ ಮುಂದೂಡಲಾಗಿದೆ.['ಓ ಮೈ ಗಾಡ್', 'ಆರ್ಮುಗಂ' ರವಿಶಂಕರ್ ಸ್ವಾಮೀಜಿ ಆಗ್ತಾರಂತೆ]

ಈ ಮೊದಲು ಕನ್ನಡ ಅವತರಿಣಿಕೆಗೆ 'ಕೃಷ್ಣ ನೀ ಬೇಗನೇ ಬಾರೋ' ಎಂದು ಹೆಸರಿಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣಗಳಲ್ಲಿ ಚಿತ್ರದ ಹೆಸರನ್ನು 'ಮುಕುಂದ ಮುರಾರಿ' ಎಂದು ಬದಲಾಯಿಸಲಾಗಿದೆ.

'ಕೃಷ್ಣ ನೀ ಬೇಗನೇ ಬಾರೋ' ಎಂಬ ಟೈಟಲ್ ಸಾಮಾನ್ಯವಾಗಿರುವುದರಿಂದ ಸ್ವಲ್ಪ ಡಿಫರೆಂಟ್ ಆಗಿ 'ಮುಕುಂದ ಮುರಾರಿ' ಎಂದು ಬದಲಾವಣೆ ಮಾಡಲಾಗಿದೆ. ಚಿತ್ರದಲ್ಲಿ ಮುಕುಂದನಾಗಿ ಉಪೇಂದ್ರ ಅವರು ಮತ್ತು ಮುರಾರಿಯಾಗಿ ಕಿಚ್ಚ ಸುದೀಪ್ ಅವರು ಮಿಂಚಲಿದ್ದಾರೆ. ಮುಂದೆ ಓದಿ...[ಕಿಚ್ಚ-ಉಪ್ಪಿ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?]

ನಂದ ಕಿಶೋರ್ ಆಕ್ಷನ್-ಕಟ್

'ರನ್ನ' ಮತ್ತು 'ವಿಕ್ಟರಿ' ಯಂತಹ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ನಂದ ಕಿಶೋರ್ ಅವರು ಇಬ್ಬರು ಸ್ಟಾರ್ ನಟರಾದ ಉಪ್ಪಿ ಮತ್ತು ಕಿಚ್ಚ ಅವರ 'ಮುಕುಂದ ಮುರಾರಿ'ಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.[ಕಿಚ್ಚನ ನೋಡಿ 'ಓ ಮೈ ಗಾಡ್' ಅಂದ ಉಪ್ಪಿ.!]

ಫೆಬ್ರವರಿ 11 ರಿಂದ ಶೂಟಿಂಗ್

ಫೆಬ್ರವರಿ 11 ರಿಂದ 'ಮುಕುಂದ ಮುರಾರಿ' ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು, ಇಬ್ಬರು ಸ್ಟಾರ್ ನಟರಾದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜುಗಲ್ ಬಂದಿಗೆ ಇಡೀ ಗಾಂಧಿನಗರವೇ ಕಾತರದಿಂದ ಕಾಯುತ್ತಿದೆ.

ನಟಿ ಪ್ರೇಮಾ ಬರಬಹುದಾ?

ಇನ್ನು ಈ ಚಿತ್ರದಲ್ಲಿ ಉಪೇಂದ್ರ ಅವರ ಪತ್ನಿಯಾಗಿ ನಟಿಸಲು ನಾಯಕಿಯ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದ್ದು, ಎವರ್ ಗ್ರೀನ್ ನಟಿ ಪ್ರೇಮಾ ಅವರ ಜೊತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಅಲ್ಲದೆ ನಟಿ ರಮ್ಯಕೃಷ್ಣ, ನಟಿ ಸದಾ ಮತ್ತು ನಟಿ ಪ್ರಿಯಾಂಕ ಉಪೇಂದ್ರ ಅವರ ಹೆಸರುಗಳೂ ರೇಸ್ ನಲ್ಲಿವೆ.

ನಿಧಿ ಸುಬ್ಬಯ್ಯ

ಇನ್ನು ಹಿಂದಿಯ 'ಓ ಮೈ ಗಾಡ್' ನಲ್ಲಿ ಪತ್ರಕರ್ತೆಯ ಪಾತ್ರ ವಹಿಸಿದ್ದ ನಟಿ ನಿಧಿ ಸುಬ್ಬಯ್ಯ ಅವರೇ ಕನ್ನಡದಲ್ಲೂ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯಕ್ಕೆ ನಿಧಿ ಸುಬ್ಬಯ್ಯ ಅವರು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳದೆ ಖಾಲಿ ಕುಳಿತಿದ್ದಾರೆ.

ಖಳ ನಟ ರವಿಶಂಕರ್

ಖಳ ನಟ ರವಿಶಂಕರ್ ಅವರು ಈ ಚಿತ್ರದಲ್ಲಿ ಸ್ವಾಮೀಜಿ ಪಾತ್ರದಲ್ಲಿ ಮಿಂಚಲಿದ್ದಾರೆ. ಹಿಂದಿಯಲ್ಲಿ ಈ ಪಾತ್ರವನ್ನು ಮಿಥುನ್ ಚಕ್ರವರ್ತಿ ಅವರು ಮಾಡಿದ್ದರು. ಇವರ ಜೊತೆ ಅವಿನಾಶ್ ಕೂಡ ಪ್ರಮುಖ ತಾರಾಗಣದಲ್ಲಿ ಮಿಂಚಲಿದ್ದಾರೆ. ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

ಇದೇ ಮೊದಲ ಬಾರಿಗೆ ಕಿಚ್ಚನ ಜೊತೆ

ನಟ ಉಪೇಂದ್ರ ಅವರು ದರ್ಶನ್ ಅವರ ಜೊತೆ 'ಅನಾಥರು' ಚಿತ್ರದಲ್ಲಿ ಮಿಂಚಿದ್ದರು. ಆದರೆ ಸುದೀಪ್ ಅವರ ಜೊತೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆದ್ದರಿಂದ ಅಭಿಮಾನಿಗಳಲ್ಲಿ ಕೊಂಚ ಕುತುಹಲ ಜಾಸ್ತಿನೇ ಇದೆ. (ಚಿತ್ರಕೃಪೆ: ಡಿ.ಕಂಪೆನಿ)

English summary
Oh My God in Kannada, a lot of buzz surrounds the upcoming film as it gets ready to go on the floors. Initially titled as Krishna Nee Begane Baaro in Kannada has now been changed to Mukunda Murari. The movie is directed by Nanda Kishore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada