»   » 'ದಿ ವಿಲನ್' ಚಿತ್ರದಲ್ಲಿ ಶಿವಣ್ಣ-ಸುದೀಪ್ ಮುಖಾಮುಖಿ ಆಗ್ತಾರಾ, ಇಲ್ವಾ?

'ದಿ ವಿಲನ್' ಚಿತ್ರದಲ್ಲಿ ಶಿವಣ್ಣ-ಸುದೀಪ್ ಮುಖಾಮುಖಿ ಆಗ್ತಾರಾ, ಇಲ್ವಾ?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸುತ್ತಿರುವ ಚಿತ್ರ 'ದಿ ವಿಲನ್'. ಹಾಗಾಗಿಯೇ ಚಿತ್ರದ ಬಗ್ಗೆ ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳು ಯಾವಾಗಲೂ ತಿಳಿದುಕೊಳ್ಳುವ ಕುತೂಹಲ.

ಈ ಮಧ್ಯೆ ಒಂದು ಪ್ರಶ್ನೆ ಕಾಡುತ್ತಿದೆ. ಅದೇನ್ ಅಂದ್ರೆ, 'ದಿ ವಿಲನ್' ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ಮುಖಾಮುಖಿ ಆಗ್ತಾರಾ, ಇಲ್ವಾ? ಎಂಬುದು. ಹೌದು, ಈ ಪ್ರಶ್ನೆ ಹುಟ್ಟಲು ಕಾರಣ. ಇದುವರೆಗೂ ಶಿವರಾಜ್ ಕುಮಾರ್ ಅವರು 'ದಿ ವಿಲನ್' ಚಿತ್ರದಲ್ಲಿ ಭಾಗವಹಿಸಿಲ್ಲ. ಸುದೀಪ್ ಒಬ್ಬರೇ ಸತತವಾಗಿ ಶೂಟಿಂಗ್ ಮಾಡುತ್ತಿದ್ದಾರೆ. ಬಹುಶಃ, ಸುದೀಪ್ ಅವರ ಭಾಗ ಮುಗಿದ ನಂತರ ಶಿವರಾಜ್ ಕುಮಾರ್ ಅವರ ಭಾಗದ ಚಿತ್ರೀಕರಣ ನಡೆಯಬಹುದು ಎಂಬ ಅನುಮಾನ ಅಭಿಮಾನಿಗಳನ್ನ ಕಾಡಿದೆ.

'ದಿ ವಿಲನ್' ಸೆಟ್ ಗೆ ಹೋದ ದಿನವೇ ನಟಿ ಆಮಿ ಜಾಕ್ಸನ್ ಗೆ ಕಿರಿಕಿರಿ ಆಗಿತ್ತು.! ಕಾರಣ.?

Actor Sudeep Clarify His Fan Confusion About The Villain

ಈ ಅನುಮಾನವನ್ನ ಅಭಿಮಾನಿಯೊಬ್ಬರು ಸ್ವತಃ ಸುದೀಪ್ ಅವರ ಬಳಿಯೇ ಕೇಳಿ ಸ್ವಷ್ಟಪಡಿಸಿಕೊಂಡಿದ್ದಾರೆ. ಸುದೀಪ್ ಅವರಿಗೆ ಟ್ವೀಟ್ ಮಾಡಿದ್ದ ಅಭಿಮಾನಿ, ''ಸರ್, ವಿಲನ್ ಚಿತ್ರದಲ್ಲಿ ಶಿವಣ್ಣ ಮತ್ತು ನೀವು ಮುಖಾಮುಖಿ ಆಗ್ತೀರಾ ಅಥವಾ ಇಲ್ವಾ? ಯಾಕಂದ್ರೆ, ನೀವೊಬ್ಬರೇ ಶೂಟಿಂಗ್ ಮಾಡುತ್ತಿದ್ದೀರಾ? ಎಂದು ಕೇಳಿದ್ದಾರೆ.

ಆಮಿ ಜಾಕ್ಸನ್ ಮಾಡಿದ ಸ್ಟಂಟ್ ನೋಡಿ ನಿಬ್ಬೆರಗಾದ 'ಜೋಗಿ' ಪ್ರೇಮ್

ಇದಕ್ಕೆ ಉತ್ತರ ಕೊಟ್ಟ ಸುದೀಪ್, ''ನನ್ನ ಮತ್ತು ಶಿವಣ್ಣ ಅವರ ಮಧ್ಯೆ ಹೆಚ್ಚು ದೃಶ್ಯಗಳಿವೆ. ಅವರು ಇನ್ನು ಶೂಟಿಂಗ್ ನಲ್ಲಿ ಭಾಗವಹಿಸಿಲ್ಲ. ಬರ್ತಾರೆ'' ಎಂದು ಅಭಿಮಾನಿಯ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಅಂದ್ಹಾಗೆ, ಜೋಗಿ ಪ್ರೇಮ್ 'ದಿ ವಿಲನ್' ಚಿತ್ರವನ್ನ ನಿರ್ದೇಶನ ಮಾಡಿದ್ದು, ಆಮಿ ಜಾಕ್ಸನ್, ಶ್ರುತಿ ಹರಿಹರನ್, ತೆಲುಗು ನಟ ಶ್ರೀಕಾಂತ್, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

'ವಿಲನ್' ಬಳಗದ ಆಸೆಗೆ ತಣ್ಣೀರೆರಚಿದ ತೆಲುಗು ಹುಡುಗಿ.!

English summary
Kannada Actor Sudeep has taken his twitter Account to Clarify His Fan Confusion About The Villain

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada