»   » 'ರೋಜರ್ ಮೂರ್' ನಿಧನಕ್ಕೆ ಸಂತಾಪ ಸೂಚಿಸಿದ ಕಿಚ್ಚ ಸುದೀಪ್

'ರೋಜರ್ ಮೂರ್' ನಿಧನಕ್ಕೆ ಸಂತಾಪ ಸೂಚಿಸಿದ ಕಿಚ್ಚ ಸುದೀಪ್

Posted By:
Subscribe to Filmibeat Kannada

ಹಾಲಿವುಡ್ ನಟ, 'ಜೇಮ್ಸ್ ಬಾಂಡ್' ಖ್ಯಾತಿಯ ನಟ ರೋಜರ್ ಮೂರ್ ಅವರ ನಿಧನಕ್ಕೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಸಂತಾಪ ಸೂಚಿಸಿದ್ದಾರೆ.

''ರೋಜರ್ ಮೂರ್ ಅವರ ಸಾವಿನ ಸುದ್ದಿ ಕೇಳಲು ದುಃಖವಾಗುತ್ತಿದೆ. ನಾನು ಮಗುವಿದ್ದಾಗ ರೋಜರ್ ಮೂರ್ ಅವರು ಮೊದಲ ಜೇಮ್ಸ್ ಬಾಂಡ್ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.[ಜೇಮ್ಸ್ ಬಾಂಡ್ ಖ್ಯಾತಿಯ ನಟ ಸರ್ ರೋಜರ್ ಮೂರ್ ಇನ್ನಿಲ್ಲ]

Actor Sudeep Condolence to Rozer Moore

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ರೋಜರ್ ಮೂರ್ ಸ್ವಿಜರ್ ಲ್ಯಾಂಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ (ಮೇ 23) ನಿಧನರಾಗಿದ್ದಾರೆ.[ಸಾಮಾಜಿಕ ಕಳಕಳಿ ಮೂಲಕ 'ಸರ್' ಪದವಿಗೇರಿದ್ದ ಜೇಮ್ಸ್ ಬಾಂಡ್]

'ಲಿವ್ ಲೆಟ್ ಡೈ', 'ದ ಸ್ಪೈ ವೂ ಲವ್ಡ್ ಮಿ' ಸೇರಿದಂತೆ 1973 ರಿಂದ 1985 ರ ಅವಧಿಯಲ್ಲಿ ಬ್ರಿಟಿಷ್ ಸಿಕ್ರೇಟ್ ಏಜೆಂಟ್ 'ಜೇಮ್ಸ್ ಬಾಂಡ್' ಆಗಿ ಕಾಣಿಸಿಕೊಂಡ ರೋಜರ್ ಮೂರ್ ಅವರು ಸೀನ್ ಕಾನರಿ ನಂತರ ಪಾತ್ರಕ್ಕೆ ತಕ್ಕ ಹಾವಭಾವ, ನಟನೆ ಮೂಲಕ ಜನಪ್ರಿಯತೆ ಗಳಿಸಿದವರು.

Actor Sudeep Condolence to Rozer Moore

ಅಕ್ಟೋಬರ್ 14, 1927 ರಂದು ಲಂಡನ್ನಿನ ಸ್ಟಾಕ್ ವೆಲ್ ನಲ್ಲಿ ಜನಿಸಿದ್ದ ರೋಜರ್ ಮೂರ್ ಅವರಿಗೆ 89 ವರ್ಷ ವಯಸ್ಸಾಗಿತ್ತು. Royal Academy of Dramatic Arts ಯಲ್ಲಿ ನಟನೆಯ ಎಬಿಸಿಡಿ ಕಲಿತವರು. 1966ರಲ್ಲಿ ಸೀನ್ ಕಾನರಿ ಅವರು ಜೇಮ್ಸ್ ಬಾಂಡ್ ಪಾತ್ರಕ್ಕೆ ಗುಡ್ ಬೈ ಹೇಳಿದ ಮೇಲೆ '007' ಏಜೆಂಟ್ ದಿರಿಸಿನಲ್ಲಿ ಮೂರ್ ಮಿಂಚಿದರು. ಬ್ರಿಟಿಷ್ ಸರ್ಕಾರ ಇವರಿಗೆ ಸರ್ ಪದವಿ ನೀಡಿ ಗೌರವಿಸಿದೆ.

'ಲಿವ್ ಅಂಡ್ ಲೆಟ್ ಡೈ' (1973) ಎಂಬ ಸಿನಿಮಾದಲ್ಲಿ ಇವರು ಮೊದಲ ಬಾರಿ ಬಾಂಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, 46ನೇ ವಯಸ್ಸಿನಲ್ಲಿ ಇವರು ಬಾಂಡ್ ಸರಣಿ ಸಿನಿಮಾಗಳಿಗೆ ಪ್ರವೇಶಿಸಿದ್ದರು. ಇವರು ನಟಿಸಿದ ಎರಡನೇ ಬಾಂಡ್ ಚಿತ್ರ 'ದ ಮ್ಯಾನ್ ವಿತ್ ಗೋಲ್ಡನ್ ಗನ್' 1974ರಲ್ಲಿ ತೆರೆ ಕಂಡಿತ್ತು. ಅತೀ ಕಡಿಮೆ ಗಳಿಕೆ ಗಳಿಸಿದ ಬಾಂಡ್ ಚಿತ್ರ ಇದಾಗಿತ್ತು.

'ದ ಸ್ಪೈ ಹೂ ಲವ್ಡ್ ಮಿ' (1977), 'ಮೂನ್ ರೋಕರ್' (1979), 'ಫಾರ್ ಯುವರ್ ಅಯಿಸ್ ಓನ್ಲೀ' (1981), 'ಅಕ್ಟೋಪಸಿ' (1983), 'ಎ ವ್ಯೂ ಟು ಎ ಕಿಲ್' (1985) ಮೊದಲಾದ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

English summary
James Bond actor Sir Roger Moore has died aged 89, his family has confirmed. Moore had passed away in Switzerland after a "short but brave battle with cancer". Kannada Actor Kiccha Sudeep condolences to Roger Moore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada